May 5, 2024

Bhavana Tv

Its Your Channel

ದಂಡಿ ಚಲನ ಚಿತ್ರಕ್ಕೆ ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ದ್ವಿತೀಯ ಪುರಸ್ಕಾರ: ಹಾಡು ಹಾಗೂ ಟ್ರೈಲರ್ ಬಿಡುಗಡೆಗೊಳಿಸಿದ ಚಿತ್ರ ತಂಡ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ರೋಚಕ ಘಟನೆಗಳ ಕಥಾ ಹಂದರ ಹೊಂದಿರುವ ‘ದಂಡಿ’ ಚಲನ ಚಿತ್ರಕ್ಕೆ ಬಿಡುಗಡೆಗೆ ಮುನ್ನವೇ ಬೆಂಗಳೂರಿನಲ್ಲಿ ನಡೆದ ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ದ್ವೀತೀಯ ಪುರಸ್ಕಾರ ದೊರೆತ್ತಿದೆ.

ಕಲ್ಯಾಣಿ ಪ್ರೋಡಕ್ಷನಲ್ಲಿ ಖ್ಯಾತ ನಿರ್ದೇಶಕ ವಿಶಾಲರಾಜ್‌ರವರ ನಿದೇರ್ಶನದಲ್ಲಿ ನಿರ್ಮಾಣಗೊಂಡ ಈ ಚಲನ ಚಿತ್ರವು ಎಪ್ರಿಲ್ ತಿಂಗಳಲ್ಲಿ ಬಿಡುಗಡೆಗೊಳ್ಳಲು ಸಿದ್ದತೆ ನಡೆಯುತ್ತಿರುವಾಗಲೇ ದಂಡಿ ತಂಡಕ್ಕೆ ಹೊಸ ಹುರುಪು ನೀಡಿದೆ. ವಾರ್ತಾಇಲಾಖೆ ಹಾಗೂ ಕರ್ನಾಟಕ ಚಲನ ಚಿತ್ರಮಂಡಳಿ ನಡೆಸಿದ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ದ್ವೀತೀಯ ಪುರಸ್ಕಾರ ದೊರೆತಿದೆ. ಚಿತ್ರ ನಿದೇರ್ಶಕರಾದ ವಿಶಾಲರಾಜ ಮತ್ತು ನಿರ್ಮಾಪಕಿ ಉಷಾರಾಣಿಯವರು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕರಿಸಿದರು.
ಲೇಖಕ ರಾಜಶೇಖರ ಮಠಪತಿಯವರು ಬರೆದು ಯಾಜಿ ಪ್ರಕಾಶನ ಪ್ರಕಟಿಸಿದ ದಂಡಿ ಕಾದಂಬರಿಯನ್ನು ಆಧರಿಸಿ ಸಿದ್ಧವಾದ ಈ ಚಲನಚಿತ್ರ ಸಂಪೂರ್ಣವಾಗಿ ಉತ್ತರಕನ್ನಡ ಜಿಲ್ಲೆಯಲ್ಲೀಯೇ ಚಿತ್ರೀಕರಣಗೊಂಡಿದೆ. ಹಿರಿಯ ನಟಿ ತಾರಾ ಅನುರಾಧಾ, ಸುಚೇಂದ್ರಪ್ರಸಾದ , ನಾಯಕನಾಗಿ ಯುವಾನದೇವ, ನಾಯಕಿಯಾಗಿ ಶಾಲಿನಿ ಭಟ್ ಮುಂತಾದ ಕಲಾವಿದರು ನಟಿಸಿದ್ದಾರೆ.


ಜಿಲ್ಲೆಯ ಹೊನ್ನಾವರ, ಅಂಕೋಲಾ ಹಾಗೂ ಕುಮಟಾದಲ್ಲಿ ಚಿತ್ರೀಕರಣಗೊಂಡಿದ್ದು ಹಿರಿಯ ಪತ್ರಕರ್ತರಾದ ಜಿ.ಯು ಭಟ್ಟ, ಕೃಷ್ಣಮೂರ್ತಿಭಟ್ಟ, ಕಲಾವಿದರಾದ ದಾಮೋದರ ನಾಯ್ಕ, ಶಿಕ್ಷಕರಾದ ಪಿ ಆರ್ ನಾಯ್ಕ, ಎಸ್ ಎಚ್ ಗೌಡ, ಎಂ.ಡಿ ಹರಿಕಾಂತ, ಭವಾನಿಶಂಕರ ನಾಯ್ಕ, ತಿಮಣ್ಣ ಹೆಗಡೆ ಮಾಗೋಡ, ವೆಂಕಟೇಶ ಮೇಸ್ತ, ಸುರೇಶ ಖಾರ್ವಿ,ಕೇಶವ ತಾಂಡೇಲ್, ಸುರೇಶ ಲೋಪೀಸ್ ಹಡಿನಬಾಳ ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಾಹಕ ವೆಂಕಟೇಶ ಬಾಬುರವರ ಛಾಯಾಗ್ರಹಣದಲ್ಲಿ ಸಂಗೀತ ನಿರ್ದೇಶಕ ರಮೇಶ ಕೃಷ್ಣನ್ ರವರ ನಿರ್ದೇಶನದಲ್ಲಿ “ಮುಗಿಲೆ ಮಾತಾಡು ಮನಸಾಗಿ”ಹಾಡು ಹಾಗೂ ಖ್ಯಾತ ಗಾಯಕ ವಿಜಯ ಪ್ರಕಾಶರವರು ಹಾಡಿದ ಹೋರಾಟ ಗೀತೆ, ಚಲನ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ಗಾಂಧೀಜಿಯವರ ಪ್ರೇರಣೆಯಿಂದ ಹುಟ್ಟಿಕೊಂಡ ಉತ್ತರ ಕನ್ನಡ ಜಿಲ್ಲೆಯ ಸ್ವಾತ್ರಂತ್ಯ ಹೊರಾಟ ಕಿಚ್ಚು ಬೆಳ್ಳಿ ತೆರೆಯಲ್ಲಿ ಬರಲು ಸಿದ್ದವಾಗಿದೆ. ಈ ಚಿತ್ರ ಸ್ವಾತ್ರಂತ್ಯ ಹೋರಾಟದ ಅಮೃತ ಮಹೋತ್ಸವ ಸಂದರ್ಭದಲ್ಲಿ ನಿರ್ಮಾಣಗೊಂಡಿದ್ದು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಿಗೆ ಸಮರ್ಪಿಸಲಾಗಿದೆ. ಸಾವಿತ್ರಿಬಾಯಿ ಪುಲೆಯಂತಹ ಹಲವಾರು ಚಿತ್ರಗಳನ್ನು ನಿರ್ದೇಶಿಸಿ ಹೆಸರಾದ ನಿರ್ದೇಶಕ ವಿಶಾಲರಾಜರವರು ಈ ಚಿತ್ರ ನಿರ್ದೇಶಿಸಿರುವುದು ವಿಶೇಷವಾಗಿದೆ.

ವರದಿ:ವೆಂಕಟೇಶ ಮೇಸ್ತ ಹೊನ್ನಾವರ

error: