May 19, 2024

Bhavana Tv

Its Your Channel

‘ದಂಡಿ’ ಸತ್ಯಾಗ್ರಹಕ್ಕೆ ಸಿನಿಮಾ ಮೆರುಗು , ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ ಕಥನ ಏಪ್ರಿಲ್ ೮ರಂದು ಬೆಳ್ಳಿ ತೆರೆಗೆ.

ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಕಥಾ ಹಂದರವುಳ್ಳ ರೋಚಕ ಘಟನೆಗಳ ಚಿತ್ರಣ ಹೊಂದಿರುವ ‘ದಂಡಿ’ ಚಲನಚಿತ್ರ ಏಪ್ರಿಲ್ ೮ ರಂದು ತೆರೆಗೆ ಬರಲು ಸಕಲ ಸಿದ್ದತೆಗಳು ನಡೆದಿವೆ. ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ನೆಲವಾದ ಅಂಕೋಲಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲೆಯ ಪ್ರಮುಖರು ‘ದಂಡಿ’ಯ ಮೊದಲ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಚಿತ್ರ ಬಿಡುಗಡೆಯ ಪೂರ್ವದಲ್ಲಿಯೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ದ್ವಿತೀಯ ಬಹುಮಾನ ಪಡೆದಿರುವುದು ಈ ಚಿತ್ರದ ವಿಶೇಷ ಹೆಗ್ಗಳಿಕೆ
ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡದ ಖ್ಯಾತ ನಿದೇರ್ಶಕ ವಿಶಾಲ್ರಾಜ್ರವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಚಲನಚಿತ್ರಗಳು ಚಿತ್ರೀಕರಣಗೊಂಡಿವೆ. ಇಲ್ಲಿಯ ನಿಸರ್ಗ ರಮಣೀಯ ದೃಶ್ಯಗಳು ಬೆಳ್ಳಿ ಪರದೆಯಲ್ಲಿ ರಾರಾಜಿಸಿವೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಕಥೆಯೊಂದಕ್ಕೆ ಜಿಲ್ಲೆಯಲ್ಲಿಯೇ ಸಂಪೂರ್ಣ ಚಿತ್ರೀಕರಣಗೊಂಡು ಈ ನೆಲದ ಸುಮಾರು ೧೩೬ಕ್ಕೂ ಹೆಚ್ಚು ಕಲಾವಿದರು ಪಾತ್ರಗಳಿಗೆ ಜೀವ ತುಂಬಿರುವುದು ಈ ಚಿತ್ರದ ಹೆಮ್ಮೆ.
ಪದ್ಯಶ್ರೀ ಪ್ರಶಸ್ತಿ ಪುರಸ್ಕೃತ ಸುಕ್ರಿ ಗೌಡ, ರಾಜ್ಯ ಪ್ರಶಸ್ತಿ ಪುರಸ್ಕೃತೆ ಲಕ್ಷಿö್ಮ ಗೌಡ, ಹಿರಿಯ ಪತ್ರಕರ್ತರಾದ ಜಿ. ಯು. ಭಟ್, ಕೃಷ್ಣಮೂರ್ತಿ ಹೆಬ್ಬಾರ್ ಸೇರಿದಂತೆ ಜಿಲ್ಲೆಯ ಇನ್ನೂ ಹಲವರು ‘ದಂಡಿ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರ ಕನ್ನಡ ಜನತೆಯ ತ್ಯಾಗ, ಬಲಿದಾನ ಅತ್ಯಂತ ಮಹತ್ವದ್ದು. ತಮ್ಮ ನೆಲಕ್ಕಾಗಿ ಹೋರಾಟ ನಡೆಸಿದ ಆ ಮಹಾನುಭಾವರ ಹೋರಾಟ ಕೇವಲ ಪುಸ್ತಕಗಳಲ್ಲಿ ಮಾತ್ರ ದಾಖಲೆಗಳಾಗಿ ಉಳಿದುಕೊಂಡಿದೆ. ಆದರೆ ನಮ್ಮ ಜಿಲ್ಲೆಯ ಹೋರಾಟದ ಕಥನ

ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಕಥಾ ಹಂದರವುಳ್ಳ ರೋಚಕ ಘಟನೆಗಳ ಚಿತ್ರಣ ಹೊಂದಿರುವ ‘ದಂಡಿ’ ಚಲನಚಿತ್ರ ಏಪ್ರಿಲ್ ೮ ರಂದು ತೆರೆಗೆ ಬರಲು ಸಕಲ ಸಿದ್ದತೆಗಳು ನಡೆದಿವೆ. ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ನೆಲವಾದ ಅಂಕೋಲಾದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲೆಯ ಪ್ರಮುಖರು ‘ದಂಡಿ’ಯ ಮೊದಲ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಚಿತ್ರ ಬಿಡುಗಡೆಯ ಪೂರ್ವದಲ್ಲಿಯೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ದ್ವಿತೀಯ ಬಹುಮಾನ ಪಡೆದಿರುವುದು ಈ ಚಿತ್ರದ ವಿಶೇಷ ಹೆಗ್ಗಳಿಕೆ
ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡದ ಖ್ಯಾತ ನಿದೇರ್ಶಕ ವಿಶಾಲ್ರಾಜ್ರವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ಚಲನಚಿತ್ರಗಳು ಚಿತ್ರೀಕರಣಗೊಂಡಿವೆ. ಇಲ್ಲಿಯ ನಿಸರ್ಗ ರಮಣೀಯ ದೃಶ್ಯಗಳು ಬೆಳ್ಳಿ ಪರದೆಯಲ್ಲಿ ರಾರಾಜಿಸಿವೆ. ಆದರೆ, ಉತ್ತರ ಕನ್ನಡ ಜಿಲ್ಲೆಯ ಕಥೆಯೊಂದಕ್ಕೆ ಜಿಲ್ಲೆಯಲ್ಲಿಯೇ ಸಂಪೂರ್ಣ ಚಿತ್ರೀಕರಣಗೊಂಡು ಈ ನೆಲದ ಸುಮಾರು ೧೩೬ಕ್ಕೂ ಹೆಚ್ಚು ಕಲಾವಿದರು ಪಾತ್ರಗಳಿಗೆ ಜೀವ ತುಂಬಿರುವುದು ಈ ಚಿತ್ರದ ಹೆಮ್ಮೆ.
ಪದ್ಯಶ್ರೀ ಪ್ರಶಸ್ತಿ ಪುರಸ್ಕೃತ ಸುಕ್ರಿ ಗೌಡ, ರಾಜ್ಯ ಪ್ರಶಸ್ತಿ ಪುರಸ್ಕೃತೆ ಲಕ್ಷಿö್ಮ ಗೌಡ, ಹಿರಿಯ ಪತ್ರಕರ್ತರಾದ ಜಿ. ಯು. ಭಟ್, ಕೃಷ್ಣಮೂರ್ತಿ ಹೆಬ್ಬಾರ್ ಸೇರಿದಂತೆ ಜಿಲ್ಲೆಯ ಇನ್ನೂ ಹಲವರು ‘ದಂಡಿ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಸ್ವಾತಂತ್ರö್ಯ ಹೋರಾಟದಲ್ಲಿ ಉತ್ತರ ಕನ್ನಡ ಜನತೆಯ ತ್ಯಾಗ, ಬಲಿದಾನ ಅತ್ಯಂತ ಮಹತ್ವದ್ದು. ತಮ್ಮ ನೆಲಕ್ಕಾಗಿ ಹೋರಾಟ ನಡೆಸಿದ ಆ ಮಹಾನುಭಾವರ ಹೋರಾಟ ಕೇವಲ ಪುಸ್ತಕಗಳಲ್ಲಿ ಮಾತ್ರ ದಾಖಲೆಗಳಾಗಿ ಉಳಿದುಕೊಂಡಿದೆ. ಆದರೆ ನಮ್ಮ ಜಿಲ್ಲೆಯ ಹೋರಾಟದ ಕಥನ ಅಂತರಾಷ್ಟಿçÃಯ ಮಟ್ಟದಲ್ಲಿ ತಿಳಿಯುವಂತಹ ಕೆಲಸ ಖ್ಯಾತ ನಿರ್ದೇಶಕ ವಿಶಾಲ್ ರಾಜ್ರವರು ಮಾಡಿದ್ದಾರೆ. ಡಾ. ರಾಜಶೇಖರ ಮಠಪತಿಯವರ ದಂಡಿ ಕಾದಂಬರಿಯನ್ನು ಬೆಳ್ಳಿ ತೆರೆಗೆ ತರುವ ಅವರ ಕನಸು ಇಂದಿಗೆ ನನಸಾಗಿದೆ. ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಜೀವನ ಚರಿತ್ರೆ ಆಧಾರಿತ ಅವರ ಈ ಚಿತ್ರಕ್ಕೆ ರಾಷ್ಟç ಪ್ರಶಸ್ತಿ ಲಭಿಸಿದೆ.

ಮಟ್ಟದಲ್ಲಿ ತಿಳಿಯುವಂತಹ ಕೆಲಸ ಖ್ಯಾತ ನಿರ್ದೇಶಕ ವಿಶಾಲ್ ರಾಜ್ರವರು ಮಾಡಿದ್ದಾರೆ. ಡಾ. ರಾಜಶೇಖರ ಮಠಪತಿಯವರ ದಂಡಿ ಕಾದಂಬರಿಯನ್ನು ಬೆಳ್ಳಿ ತೆರೆಗೆ ತರುವ ಅವರ ಕನಸು ಇಂದಿಗೆ ನನಸಾಗಿದೆ. ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಜೀವನ ಚರಿತ್ರೆ ಆಧಾರಿತ ಅವರ ಈ ಚಿತ್ರಕ್ಕೆ ರಾಷ್ಟç ಪ್ರಶಸ್ತಿ ಲಭಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಹೋರಾಟದ ಕಥನವನ್ನು ಬೆಳ್ಳಿ ತೆರೆಗೆ ತರುವ ಅವರ ಕನಸು ಕಾರ್ಯಗತವಾಗಲು ಮುಂದೆ ಬಂದದ್ದು ಬೆಂಗಳೂರಿನ ಕಲ್ಯಾಣಿ ಪ್ರೋಡಕ್ಷನ್ ಸಂಸ್ಥೆ. ಇದು ಅವರ ಚೊಚ್ಚಲ ಸಿನಿಮಾ. ನಿರ್ಮಾಪಕಿ ಉಷಾರಾಣಿ ಸಿ. ಎಸ್ ಹಾಗೂ ಮಹದೇವಪ್ಪನವರು ತಮ್ಮ ಪುತ್ರ ಯುವಾನ್ದೇವ್ ಅವರನ್ನು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ‘ದಂಡಿ’ ಸಿನಿಮಾದ ಸಿದ್ಧತೆಯಲ್ಲಿ ತೊಡಗಿಸಿಕೊಂಡ ನಿರ್ದೇಶಕ ವಿಶಾಲ್ರಾಜ್ರವರು ಏಪ್ರಿಲ್ ೮ರಂದು ಬಿಡುಗಡೆ ಮಾಡುವ ಕಾತುರದಲ್ಲಿದ್ದಾರೆ.
೨೦೨೧ರ ಮಾರ್ಚ್ರಂದು ಹೊನ್ನಾವರದ ಮೂಡ ಗಣಪತಿ ದೇವಸ್ಥಾನದಲ್ಲಿ ಪದ್ಯಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಗೌಡರವರು ಸಿನಿಮಾ ಮಹೂರ್ತಕ್ಕೆ ಚಾಲನೆ ನೀಡಿದ್ದರು. ಮೂರು ಹಂತದಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಹೊನ್ನಾವರದ ಮಾಗೋಡ, ತುಳಸಾಣಿ, ಕಾಸರಕೋಡ, ಅಪ್ಸರಕೊಂಡ, ಕುಮಟಾದ ಸಾಣೆಕಟ್ಟಾ, ಗೋಕರ್ಣ ಹಾಗೂ ಅಂಕೋಲಾದ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀಕರಣ ನಿರಂತರವಾಗಿ ನಡೆದಿದೆ. ಹಿರಿಯ ಕಲಾವಿದರಾದ ತಾರಾ ಅನುರಾಧ, ಸುಚೇಂದ್ರ ಪ್ರಸಾದ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಟ ಯೂವನ್ದೇವ್, ನಾಯಕಿ ಶಾಲಿನಿ ಭಟ್ರವರರಿಗೆ ಇದು ಚೊಚ್ಚಲ ಚಿತ್ರ. ಕಲಾವಿದರಾದ ದಾಮೋದರ ನಾಯ್ಕ, ಶಿಕ್ಷಕ ಪಿ.ಆರ್. ನಾಯ್ಕ, ಎಂ. ಡಿ. ಹರಿಕಾಂತ, ಹೊನ್ನಾವರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್ ಎಚ್ ಗೌಡ, ಭಾವನಾ ಟಿವಿಯ ಮುಖ್ಯಸ್ಥ ಭವಾನಿಶಂಕರ ನಾಯ್ಕ, ತಿಮ್ಮಣ ಹೆಗಡೆ ಮಾಗೋಡ್, ನಿತ್ಯಾನಂದ ಪಾಲೇಕರ್, ಸುರೇಶ್ ಲೋಪಿಸ್, ಸುರೇಶ್ ಖಾರ್ವಿ, ಕೇಶವ್ ತಾಂಡೇಲ, ವೆಂಕಟೇಶ ಮೇಸ್ತ ಹಾಗೂ ಹಲವು ಬಾಲ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ದೃಶ್ಯಗಳು, ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿ ಸೌಂದರ್ಯ ಛಾಯಾಗ್ರಾಹಕ ವೆಂಕಟೇಶ ಬಾಬುರವರ ಛಾಯಾಗ್ರಹಣದಲ್ಲಿ ಸೆರೆಯಾಗಿವೆ. ಗಾಯಕ ವಿಜಯ್ ಪ್ರಕಾಶ್ ಹಾಡಿರುವ ‘ಇದೋ ನಮ್ಮ ಹೋರಾಟ ಹಾಡಿನಲ್ಲಿ ಸಾಮೂಹಿಕ ಹೋರಾಟದ ಮೂಲಕ ದೇಶ ಪ್ರೇಮ ಮೂಡಿಸುವ ದೃಶ್ಯಗಳು ಕುಮಟಾದ ಹೆಡ್ಬಂದರ್, ಅಂಕೋಲಾದ ಬೆಳೆಂಬಾರ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಸುಮಾರು ೧೩೬ಕ್ಕೂ ಹೆಚ್ಚಿನ ಕಲಾವಿದರಿಂದ ಉತ್ತರ ಕನ್ನಡ ಜಿಲ್ಲೆಯ ಕಡಲ ತಡಿಯಲ್ಲಿ ಬೆಟ್ಟ ಗುಡ್ಡಗಳಲ್ಲಿ, ಸಾಣೇಕಟ್ಟಾದ ಉಪ್ಪಿನ ಆಗರದಲ್ಲಿ ನಿರ್ದೇಶಕ ವಿಶಾಲ್ ರಾಜ್ರವರ ಪರಿಕಲ್ಪನೆಯಲ್ಲಿ ದಂಡಿ ಸತ್ಯಾಗ್ರಹ ಮರುಸೃಷ್ಟಿಯಾಗಿದೆ. ಈಗಾಗಲೇ ಬಿಡುಗಡೆಗೊಂಡಿರುವ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಜಾಲತಾಣದಲ್ಲಿ ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿದೆ.
ಸ್ವಾತಂತ್ರ್ಯ ಹೋರಾಟದ ೭೫ರ ಸಂಭ್ರಮದಲ್ಲಿ ನಮ್ಮ ಜಿಲ್ಲೆಯ ಹೋರಾಟ ‘ದಂಡಿ’ ಸತ್ಯಾಗ್ರಹ ಬೆಳ್ಳಿ ಪರದೆಯಲ್ಲಿ ಮೂಡಿ ಬರುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮಯ ಸಂಗತಿ. ಸಿನಿಮಾ ತಂಡದವರು ಕರಾವಳಿಯ ಸುಡುವ ಬಿಸಿಲಿನಲ್ಲೂ ಹಗಲಿರುಳು ‘ದಂಡಿ’ ಮರುಸೃಷ್ಟಿಗೆ ಬೆವರು ಸುರಿಸಿದ್ದಾರೆ. ಏಪ್ರಿಲ್ ೮ರಂದು ರಾಜ್ಯಾದಂತ ಬಿಡುಗಡೆಗೊಳ್ಳಲಿರುವ ಈ ಚಲನಚಿತ್ರಕ್ಕೆ ಹೋರಾಟದ ನೆಲ ಅಂಕೋಲಾದಲ್ಲಿ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕರವರ ಮಾರ್ಗದರ್ಶನ ಹಾಗೂ ಸಹಕಾರದಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಸಿದ್ಧತೆಗಳು ನಡೆದಿವೆ. ವಿಧಾನ ಸಭಾಧ್ಯಕ್ಷ, ರಾಜ್ಯ ಕಾರ್ಮಿಕ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರನ್ನು ಜಿಲ್ಲೆಯ ಎಲ್ಲಾ ಶಾಸಕರನ್ನು, ಹಿರಿಯ ಸಾಹಿತಿಗಳು, ಬರಹಗಾರರು, ವಿವಿಧ ಸಂಘಟನೆ ಪ್ರಮುಖರು, ಜನಪ್ರತಿನಿಧಿಗಳು ಹಾಗೂ ಮುಖಂಡರನ್ನು ಆಮಂತ್ರಿಸುವ ಪ್ರಯತ್ನ ದಂಡಿ ಚಿತ್ರ ತಂಡ ನಡೆಸಿದೆ.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: