May 9, 2024

Bhavana Tv

Its Your Channel

ರಾಜ್ಯದ ಯಡಿಯೂರಪ್ಪ ಸರಕಾರ ಸ್ವೇಚ್ಛಾಚಾರದ ಆಡಳಿತ ನಡೆಸುತ್ತಿದ್ದು ಜನ ಜೀವನ ಸಂಕಷ್ಟಕ್ಕಿಡು ಮಾಡಿದೆ ಎಂದು ಆರೋಪಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ .

ಹೊನ್ನಾವರ ; ಗುರುವಾರ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿಯವರ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಇಡೀ ಕರ್ನಾಟಕದ ಆರೋಗ್ಯ ಸೇವೆ ಕುಸಿದು ಬಿದ್ದಿದ್ದು ಕೊರೊನಾ ಬಾದಿತ ರೋಗಿಗಳು ಆಸ್ಪತ್ರೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿ ನಿಭಾಯಿಸಬೇಕಾದ ಆರೋಗ್ಯ ಸಚೀವ ಶ್ರೀ ರಾಮುಲು ಅವರು “ಕರ್ನಾಟಕವನ್ನು ದೇವರೇ ಕಾಪಾಡಬೇಕೆಂದು” ಅಸಹಾಯಕತೆಯ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. “ಉಳುವವನೇ ಭೂಮಿಯ ಒಡೆಯ” ಎಂಬುದು ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ಜಾರಿಗೆ ತಂದ ಭೂಸುಧಾರಣೆಯ ಕಾಯಿದೆ ಆಗಿತ್ತು. ಆದರೆ ಯಡಿಯೂರಪ್ಪ ಸರ್ಕಾರ “ಉಳ್ಳವನೇ ಭೂಮಿಯ ಒಡೆಯ” ಎಂಬ ಧೋರಣೆಯನ್ನು ಭೂ ಸುಧಾರಣೆ ಕಾಯಿದೆ ತಿದ್ದುಪಡಿ ಮಾಡುವ ಮೂಲಕ ತಾವು ಶ್ರೀಮಂತರ ಪರ ಎಂದು ಸಾಬೀತು ಪಡಿಸಿದ್ದಾರೆ ಎಂದರು. ರೈತರ ಹಿತ ಕಾಯುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯಿದೆಗೆ ಬಿ.ಜೆ.ಪಿ ಸರ್ಕಾರ ತಿದ್ದುಪಡಿ ತರುವ ಮೂಲಕ ರೈತರಿಗೆ ಮಾರಕವಾಗುವ ಕಾಯಿದೆ ಜಾರಿಗೆ ತಂದ್ದಿದ್ದು ಅಕ್ಷಮ್ಯ ಅಪರಾಧ ಎಂದರು. ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ವಿಧಿಗಳಿಗೆ ತಿದ್ದುಪಡಿ ತಂದು ಕಾರ್ಮಿಕರ ಬದುಕನ್ನು ಬಿ.ಜೆ.ಪಿ ಸರ್ಕಾರ ಬೀದಿಗೆ ತಂದಿದೆ ಎಂದರು. ರಾಜ್ಯದ ಮಲೆನಾಡು ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಅತೀವೃಷ್ಠಿಯಿಂದ ಭಾರಿ ಹಾನಿಯಾಗಿದೆ. ಕರ್ನಾಟಕ ಬಿ.ಜೆ.ಪಿ ಸರ್ಕಾರ, ಅತೀವೃಷಿ ಪರಿಸ್ಥಿತಿಯನ್ನು ನಿರ್ವಹಿಸಲು ಸತತ ಎರಡು ವರ್ಷ ವಿಫಲವಾಗಿದೆ. ಎಂದು ಜಗದೀಪ ತೆಂಗೇರಿ ಆಪಾದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಂ ಎನ್ ಸುಬ್ರಹ್ಮಣ್ಯ, ಬ್ಲಾಕ್ ಕಾಂಗ್ರೇಸ್ ಖಜಾಂಚಿ ಮುಸಾ ಅಣ್ಣಿಗೇರಿ, ಕಾಂಗ್ರೇಸ್ ಇಂಟಕ್ ಘಟಕz ಅಧ್ಯಕ್ಷ ಆಗ್ನೇಲ್ ಡಾಯಸ್, ಪಕ್ಷದ ಹಿರಿಯ ಮುಖಂಡರಾದ ದಾನೋದರ ನಾಯ್ಕ,ಇಸ್ಮಾಯಿಲ ಸಾಬ್, ಬಾಲಚಂದ್ರ ನಾಯ್ಕ, ಜೋಸೆಫ್ ಡಾÀಯಸ್, ಕೃಷ್ಣ ಹರಿಜನ್, ಉದಯ್ ಮೇಸ್ತ, ಚಂದ್ರಶೇಖರ್ ಚಾರೋಡಿ, ಬ್ರಾಜಿಲ್ ಪಿಂಟೊ, ನೆಲ್ಸನ್ ರೊಡ್ರಗೀಸ್, ನವೋದಯ ಸುರೇಶ ಮೇಸ್ತ, ಮೋಹನ ಮೇಸ್ತ ತುಳಸಿನಗರ, ಮಂಜುನಾಥ ಖಾರ್ವಿ, ಹರಿಶ್ಚಂದ್ರ ನಾಯ್ಕ, ಮಾದೇವ ನಾಯ್ಕ, ಶ್ರೀಪಾದ ನಾಯ್ಕ, ಹನೀಫ ಶೇಖ, ಸೀತಾರಾಮ ನಾಯ್ಕ, ಬಾಲಚಂದ್ರ ಕೇಸರಿಕೋಡಿ ಇನ್ನೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

error: