May 9, 2024

Bhavana Tv

Its Your Channel

ಕಡಲ ತೀರದಲ್ಲಿ ಅಪರೂಪದ ಬೃಹತ್ ಗಾತ್ರದ ಆಮೆಯೊಂದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆ.

ಭಟ್ಕಳ: ಆಮೆಯ ಕವಚದ ಮಾದರಿಯ ಹೊದಿಕೆ ಸ್ವಲ್ಪಮಟ್ಟಿಗೆ ಒಡೆದಿದ್ದು ಮುಂದಿನ ಒಂದು ಕಾಲನ್ನು ಕೂಡ ಕಳೆದುಕೊಂಡಿದೆ.ಶುಕ್ರವಾರ ಮದ್ಯಾಹ್ನದ ಹೊತ್ತಿನಲ್ಲಿ ದಡಕ್ಕೆ ಬಂದು ಬಿದ್ದಿದ ಈ ಆಮೆ ಈಜಲು ಸಾಧ್ಯವಾಗದೆ ಆಯಾಸಗೊಂಡ ಸ್ಥಿತಿಯಲ್ಲಿತ್ತು ಎನ್ನಲಾಗಿದೆ.
ಇದನ್ನು ಗಮನಿಸಿದ ಸ್ಥಳೀಯ ಯುವಕ ವಿನಾಯಕ ಖಾರ್ವಿ ಆಮೆಯನ್ನು ರಕ್ಷಿಸಿ ಪುನಃ ಸಮುದ್ರಕ್ಕೆ ಬಿಡಲು ಮುಂದಾಗಿದ್ದಾರೆ.ಆದರೆ ಹಲವು ಬಾರಿ ಯತ್ನಿಸಿದರು ಆಮೆಗೆ ಈಜಲು ಸಾಧ್ಯವಾಗದೆ ಪದೇ ಪದೇ ದಡಕ್ಕೆ ಬಂದು ಬಿದ್ದಿದೆ. ನಂತರ ಅರಣ್ಯಾಧಿಕಾರಿಗಳಿಗೆ ವಿಷಯವನ್ನು ತಿಳಿಸಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಆಮೆಯನ್ನು ಮೀನು ತುಂಬುವ ಬಾಕ್ಸ್ ನಲ್ಲಿ ಇಟ್ಟುಕೊಂಡು ಬೈಕ್ ನ ಮೂಲಕ ಕೊಂಡೊಯ್ದಿದ್ದಾರೆ.
ಕಡಲಾಮೆಯ ಪಾದ ಮತ್ತು ದೇಹದ ಭಾಗಗಳಿಗೆ ಗಾಯಗಳಾಗಿರುವುದರಿಂದ ಸೂಕ್ತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಸಂಬAಧಿತ ವೈದ್ಯರ ಮೂಲಕ ಒಂದು ವಾರ ಚಿಕಿತ್ಸೆ ನೀಡಿ ನಂತರ ಕಡಲಿಗೆ ಬಿಡಲಿದ್ದೇವೆ ಎಂದು ಆರ್.ಎಪ್.ಓ ಸವಿತಾ ದೇವಡಿಗ ತಿಳಿಸಿದ್ದಾರೆ.

error: