
ಭಟ್ಕಳ : ತಾಲೂಕಿನ ಮುಠ್ಠಳ್ಳಿ ಗ್ರಾಮದ ಶ್ರೀ ಕಟ್ಟೇವೀರ ಮತ್ತು ಪರಿವಾರ ದೇವರ ೧೯ನೇ ವರ್ಷದ ವಾರ್ಷಿಕ ವರ್ಧಂತೋತ್ಸವ ಕಾರ್ಯಕ್ರಮವು ಶನಿವಾರದಂದು ನಡೆಯಿತು.
ಬೆಳಿಗ್ಗೆಯಿಂದಲ್ಲೇ ಶ್ರೀ ಕಟ್ಟೇವೀರ ದೇವರಿಗೆ ಧಾರ್ಮಿಕ ಪೂಜಾ ವಿಧಿವಿಧಾನಗಳು ನಡೆದಿದ್ದು, ಶ್ರೀ ಗಣಪತಿ ಪೂಜೆ, ಪುಣ್ಯಾಹ, ಬ್ರಹ್ಮಕೂರ್ಚ ಹೋಮ, ಶ್ರೀ ದೇವರ ಪ್ರೀತ್ಯರ್ತ ರುದ್ರ ಹೋಮ, ಕಲಾವೃದ್ಧಿ ಹೋಮ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ ೮ ಗಂಟೆಯಿಂದ ಸರ್ವಸೇವೆ ಪೂಜೆ, ಅಭೀಷೇಕ ಕಾರ್ಯಕ್ರಮ ಪ್ರಾರಂಭವಾಗಿದ್ದು, ತದನಂತರ ೯ ಗಂಟೆಯಿಂದ ೧೧ ಗಂಟೆಯ ವರೆಗೆ ಸತ್ಯನಾರಾಯಣ ಸಂಕಲ್ಪ ಮತ್ತು ಪೂಜೆ ನಡೆದವು. ಮಧ್ಯಾಹ್ನ ಎಲ್ಲಾ ಕಾರ್ಯಕ್ರಮದ ಬಳಿಕ ಶ್ರೀ ಕಟ್ಟೇವೀರ ದೇವರಿಗೆ ಹಾಗೂ ಪರಿವಾರ ದೇವರಿಗೆ ಮಹಾಪೂಜೆ ಸಲ್ಲಿಸಲಾಯಿತು. ಮದ್ಯಾಹ್ನ ೧ ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಿತು. ಈ ಸಂಧರ್ಭದಲ್ಲಿ ಸಾವಿರಕ್ಕೂ ಅಧಿಕ ಭಕ್ತರು ದೇವರ ಪ್ರಸಾಧ ಭೋಜನವನ್ನು ಸ್ವೀಕರಿಸಿದರು.ನಂತರದ ಸಂಜೆ ೬ ಗಂಟೆಯಿಂದ ೮ ಗಂಟೆಯವರೆಗೆ ಸ್ಥಳೀಯರಿಂದ ಹರಿ ಕುಣಿತ ನಡೆಯಿತು.ನಂತರ ತಾಲ್ಲೂಕಿನ ವಿವಿದ ತಂಡಗಳಿಂದ ಭಜನಾ ಕುಣಿತ ಸ್ಪರ್ಧೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಕಮಿಟಿಯ ಅಧ್ಯಕ್ಷರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಆಡಳಿತ ಕಮಿಟಿಯ ಉಪಾಧ್ಯಕ್ಷರು ಸರ್ವ ಸದಸ್ಯರು ಸೇರಿದಂತೆ ಸಾವಿರಾರು ಭಕ್ತರು ಇದ್ದರು.

More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ