May 16, 2024

Bhavana Tv

Its Your Channel

ಗುಣವನ್ನು ಗೌರವಿಸುವ ಪರಂಪರೆ ನಮ್ಮದು- ಡಾ.ಶ್ರೀಪಾದ ಶೆಟ್ಟಿ

ಹೊನ್ನಾವರ : ತಹಶಿಲ್ದಾರ ಕಚೇರಿಯಲ್ಲಿ ತಮ್ಮ ಪರೋಪಕಾರದ ಗುಣದಿಂದಲೆ ಇವ ನಮ್ಮವ ಇವ ನಮ್ಮವ ಎಂಬ ಭಾವನೆಯನ್ನು ಮೂಡಿಸಿ ಈಗ ಗ್ರೇಡ ಟು ತಹಶಿಲ್ದಾರ ಆಗಿ ಪದೋನ್ನತಿ ಹೊಂದಿ ಕುಮಟಾಕ್ಕೆ ವರ್ಗಾವಣೆ ಗೊಂಡಿರುವ ಸತೀಶ ಗೌಡ ಅವರು ಬಡವರ ಬಗ್ಗೆ, ನೊಂದವರ ಬಗ್ಗೆ,ನಿರ್ಗತಿಕರ ಬಗ್ಗೆ ತಾಯಿಯಂತೆ ಕಾಳಜಿ ವಹಿಸಿ ಅವರಿಗೆ ನೆರವಾದವರು. ಆ ಮೂಲಕ ಹೊನ್ನಾವರದ ಜನ ಮಾನಸದಲ್ಲಿ ಜನಪರ ಅಧಿಕಾರಿಯಾಗಿ ನೆಲೆನಿಂತವರು.ಅವರ ಸೇವಾ ಮನೋಭಾವ, ಹಣವನ್ನು ಪಡೆಯದೆ ಕೆಲಸಮಾಡಿ ಕೊಡುವ ನಿಷ್ಠೆ,ಚುನಾವಣೆಯ ಕೆಲಸವನ್ನು ಎಲ್ಲರನ್ನು ಒಳಗೊಂಡು ದಕ್ಷತೆಯಿಂದ ನಿಭಾಯಿಸುವ ಬಗೆಯಿಂದ ಗಮನ ಸೆಳೆದ ಅವರನ್ನು ಸನ್ಮಾನಿಸಲು ಆಲೋಚನಾ ವೇದಿಕೆ ಮತ್ತು ಸಮಾನಮನಸ್ಕರು ಸೇರಿದೇವು.ಗುಣವನ್ನು ಗೌರವಿಸುವ ಪರಂಪರೆಯನ್ನು ಹೊನ್ನಾವರದ ಜನತೆ ಗೌರವಿಸುತ್ತಾ ಬಂದಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ.ಶ್ರೀಪಾದ ಶೆಟ್ಟಿ ಹೇಳಿದರು. ಸತೀಶ ಅವರಿಗೆ ಸ್ಮರಣಿಕೆ,ಸನ್ಮಾನ ಪತ್ರ,ಶಾಲು,ಹಾರ,ಫಲತಾಂಬೂಲದೊಂದಿಗೆ ವೇದಿಕೆಯ ಗಣ್ಯರು ಸನ್ಮಾನಿಸಿದರು. ಅವರ ಆಪ್ತರು ಒಡನಾಡಿಗಳು ಸನ್ಮಾನ ಮಾಡಿದರು.ಒಬ್ಬ ಪ್ರಾಮಾಣಿಕ ಸರಕಾರಿ ನೌಕರನಿಗೆ ನಡೆದ ಈ ಸನ್ಮಾನ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿತು. ಬಿ.ಇ.ಒ. ಡಿ.ಆರ್.ನಾಯ್ಕ ಅವರು ಎಂತಹ ಸಂದರ್ಭದಲ್ಲಿಯು ಸಮಚಿತ್ತದಿಂದ ಕೆಲಸ ಮಾಡುವ ಸತೀಶ ಗೌಡರ ದಕ್ಷತೆಯ ಬಗ್ಗೆ ಮಾತನಾಡಿದರು.ಉದ್ಯಮಿ ಜಗದೀಶ ಪೈ ಅವರು ಸತೀಶ ಗೌಡರ ಮುಖದಲ್ಲಿಯೆ ಅವರ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಕಾಣಬಹುದು ಎಂದರು.ಸಾಹಿತಿ ಪಿ.ಆರ್.ನಾಯ್ಕ ಅವರು ಸ್ವರಚಿತ ಕವನವನ್ನು ವಾಚಿಸಿ ಸತೀಶರ ಗುಣ ವಿಶೇಷಗಳನ್ನು ಸಭಿಕರಿಗೆ ಮನವರಿಕೆ ಮಾಡಿಕೊಟ್ಟರು.ರೋಟರಿ ಸಂಸ್ಥೆಯ ವತಿಯಿಂದ ದಿನೇಶ ಕಾಮತ ಲಯನ್ಸ ಕ್ಲಬ್ ವತಿಯಿಂದ ಎಂ.ಜಿ.ನಾಯ್ಕ ಮಾತನಾಡಿದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ನಾಯ್ಕ ಅವರು ರಾತ್ರಿ ಎಂಟರ ಬಳಿಕವು ಕಚೇರಿಯಲ್ಲಿ ಕೆಲಸಮಾಡುವ ಗೌಡರ ನಿಷ್ಠೆಯ ಬಗ್ಗೆ ಮಾತನಾಡಿದರು.ಸರ್ವಶ್ರೀ ಹುಸೇನ ಖಾದ್ರಿ,ಅಕ್ಷರ ದಾಸೋಹದ ಅಧಿಕಾರಿ ಸುರೇಶ ನಾಯ್ಕ,ಪ್ರೊ.ಜಿ.ಪಿ.ಪಾಟಣಕರ,ಬಿ.ಆರ್.ಸಿ.ಯ ಮುಖ್ಯಸ್ಥ ಎಸ್.ಎಂ.ಹೆಗಡೆ, ಕಸಬಾ ಶಾಲೆಯ ಶಿಕ್ಷಕ ವಿ.ಪಿ.ಯಾಜಿ ‌‌ ಭಾವನಾ ವಾಹಿನಿಯ ವೆಂಕಟೇಶ ಮೇಸ್ತ,ಶಿಕ್ಷಕಿ ಕಲ್ಪನಾ ಹೆಗಡೆ ,ಸಾಧನಾ ಬರ್ಗಿ, ಗಣಪತಿ ನಾಯ್ಕ ಬಳಕೂರ ಮುಂತಾದವರು ಅಭಿನಂದಿಸಿ ಮಾತನಾಡಿದರು.
ಸನ್ಮಾನಕ್ಕೆ ಉತ್ತರಿಸುತ್ತ ಸತೀಶ ಗೌಡ ಅವರು ನನ್ನ ಬದುಕಿನಲ್ಲಿ ಇದೊಂದು ಅಪೂರ್ವ ಕ್ಷಣ.ನನ್ನ ಕೆಲಸವನ್ನು ಗುರುತಿಸಿ ಗೌರವಿಸಿದ ನೀವು ಧರೆಗೆ ದೊಡ್ಡವರು. ಕುಮಟಾದ ಕಚೇರಿಯಲ್ಲಿ ನೌಕರಿಗೆ ಮುನ್ನ ನನ್ನ ಒಂದು ಕೆಲಸಕ್ಕೆ ದುಡ್ಡು ಕೇಳಿದರು‌. ಅದನ್ನು ಕೊಡುವಾಗ ನಾನು ಕಷ್ಟ ಪಟ್ಟೆ.ಆಮೇಲೆ ನಾನು ಹೀಗೆ ಹಣ ಪಡೆಯಬಾರದು ಎಂಬ ನಿರ್ಧಾರಕ್ಕೆ ಬಂದೆ ಎಂದು ಹೇಳಿದರು.
ಆರಂಭದಲ್ಲಿ ಶಿಕ್ಷಕಿ ಲಕ್ಷ್ಮೀ ಅವರು ಪ್ರಾರ್ಥನೆ ಮಾಡಿದರು.ಶಿಕ್ಷಕ ಸುರೇಶ ನಾಯ್ಕ ಅವರು ಸ್ವಾಗತಿಸಿದರು. ಈ ಕಾರ್ಯಕ್ರಮದ ರೂವಾರಿ ತಾ.ಪಂ.ನ.ಯುವಜನ ಸೇವಾ ಅಧಿಕಾರಿ ಸುಧೀಶ ನಾಯ್ಕ ಅವರು ಎಲ್ಲ ಹೊಣೆಯನ್ನು ಹೊತ್ತು ಕಾರ್ಯಕ್ರಮವನ್ನು ನಿರೂಪಿಸಿ ತಮ್ಮ ಕಾರ್ಯಕ್ಷಮತೆಯನ್ನು ಮೆರೆದರು.ಅಣ್ಣಪ್ಪ ಮುಕ್ರಿ,ದೀಪಕ ಗಾಂವಕರ ಅವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುವಲ್ಲಿ ನೆರವಾದರು..ಶಿಕ್ಷಕರಾದ ಉದಯ ನಾಯ್ಕ ಎಲ್ಲರ ಆಭಾರವನ್ನು ಮನ್ನಿಸಿದರು.
ಹೊನ್ನಾವರದಲ್ಲಿ ಇತ್ತೀಚೆಗೆ ಜರುಗಿದ ಅಪರೂಪದ ಕಾರ್ಯಕ್ರಮ ಇದು.

error: