April 22, 2021

Bhavana Tv

Its Your Channel

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಭಟ್ಕಳ ಶಾಸಕ ಸುನೀಲ ನಾಯ್ಕ

ಭಟ್ಕಳ ; ಸಾರ್ವಜನಿಕರ ಮನವಿಯ ಮೇರೆಗೆ ಶನಿವಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಭಟ್ಕಳ ಶಾಸಕ ಸುನೀಲ ನಾಯ್ಕ ಸ್ಥಳೀಯ ಜನರ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪುರವರ್ಗ ಭಾಗದಲ್ಲಿ ಗದ್ದೆಗಳಿಗೆ ನೀರು ಹರಿಸಲು ಹೆದ್ದಾರಿ ಮಧ್ಯದಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಾಣ, ಮೂಡಭಟ್ಕಳದಲ್ಲಿ ಜನರಿಗೆ ತಿರುಗಾಡಲು ಅಂಡರ್ ಪಾಸ ನಿರ್ಮಾಣ ಹಾಗೂ ಮಣ್ಕುಳಿಯಲ್ಲಿ ರಸ್ತೆ ಕ್ರಾಸಿಂಗ್ ವ್ಯವಸ್ಥೆಗಳನ್ನು ಕಲ್ಪಿಸಲು ಶಾಸಕರು ಐಆರ್‌ಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆಗಾಲದ ಪೂರ್ವದಲ್ಲಿ ಹೆದ್ದಾರಿಯ ಎರಡು ಇಕ್ಕೆಲುಗಳ ಚರಂಡಿಯಲ್ಲಿನ ಹೂಳೆತ್ತುವಂತೆ ತಿಳಿಸಿದರು. ಮಣ್ಕುಳಿಯಿಂದ ಮೂಡಭಟ್ಕಳ ತನಕ ಹೆದ್ದಾರಿ ಇಕ್ಕೆಲಗಳಲ್ಲಿ ಮಳೆ ನೀರು ಹರಿದು ಹೋಗಲು ಶಾಶ್ವತವಾದ ಚರಂಡಿ ನಿರ್ಮಾಣಕ್ಕಾಗಿ ಮಣ್ಕುಳಿಯ ಸಾರ್ವಜನಿಕರು ಶಾಸಕರಲ್ಲಿ ಬೇಡಿಕೆ ಇಟ್ಟರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು ಈ ಕಾಮಗಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮೋದನೆ ಹಂತದಲ್ಲಿದೆ ಎಂದರು. ಈಗಾಗಲೇ ಚರಂಡಿ ನಿರ್ಮಾಣ ಕಾಮಗಾರಿ ಉಪವಿಭಾಗಾಧಿಕಾರಿ ಮಮತಾ ದೇವಿ, ತಹಶೀಲ್ದಾರ ರವಿಚಂದ್ರ ಎಸ್, ಐಆರ್‌ಬಿ ಇಂಜಿನೀಯರ್ ಸಾಲ್ವಕರ್ ಇದ್ದರು.

error: