May 7, 2024

Bhavana Tv

Its Your Channel

ಹಬ್ಬಕ್ಕಾಗಿ ತಂದ ಹಾಗೂ ರಮಜಾನ್ ಪೇಟೆಯಲ್ಲಿ ಮಾರಾಟವಾಗ ಬೇಕಾಗಿದ್ದ ಸಾಮಾನುಗಳು ಅಂಗಡಿಕಾರರ ಮನೆ ಸೇರಿದೆ

ಭಟ್ಕಳ: ಮಂಗಳವಾರದಿ0ದಲೇ ಕೊರೊನಾ ತಡೆ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವುದಕ್ಕೆ ಭಟ್ಕಳ ವ್ಯಾಪಾರಸ್ಥರು ಬೆಚ್ಚಿ ಬಿದ್ದಿದ್ದಾರೆ. ಇಂದಲ್ಲ, ನಾಳೆ ಎಲ್ಲವೂ ಸರಿಹೋಗಲಿದೆ ಎಂದು ಕೊಂಡಿದ್ದವರಿಗೆ ಸೋಮವಾರ ಹೊರಬಿದ್ದಿರುವ ಸರಕಾರದ ತೀರ್ಮಾನ ಆತಂಕಕ್ಕೆ ಗುರಿ ಮಾಡಿದೆ. ಮುಂದಿನ ೧೪ ದಿನಗಳನ್ನು ಕಳೆಯುವುದು ಹೇಗೆ ಎಂದು ಚಿಂತಿಸುತ್ತಲೇ ಕೆಲವರು ತಮ್ಮ ಅಂಗಡಿಯಲ್ಲಿದ್ದ ಸರಕುಗಳನ್ನು ವಿಶೇಷವಾಗಿ ಬಟ್ಟೆಬರೆಗಳನ್ನು ತಮ್ಮ ಮನೆಗಳಿಗೆ ಹೊತ್ತೊಯ್ಯಲು ಆರಂಭಿಸಿದ್ದಾರೆ.

ಹಬ್ಬಕ್ಕಾಗಿ ತಂದ ಹಾಗೂ ರಮಜಾನ್ ಪೇಟೆಯಲ್ಲಿ ಮಾರಾಟವಾಗ ಬೇಕಾಗಿದ್ದ ತರೇವಾರಿ ವಿನ್ಯಾಸವುಳ್ಳ ಉಡುಪುಗಳು, ಚಪ್ಪಲಿಗಳು, ಮೊಬೈಲ್ ಸಲಕರಣೆಗಳು ಸೋಮವಾರ ಸಂಜೆಯಿAದಲೇ ಮನೆ ಸೇರಿಕೊಳ್ಳಲು ಆರಂಭಿಸಿವೆ. ಅಕ್ಕಪಕ್ಕದವರು, ಪರಿಚಿತರು, ಖಾಯಂ ಗಿರಾಕಿಗಳಿಗೆ ಮೊಬೈಲ್ ಕರೆಯ ಮೂಲಕವೇ ಮಾರಾಟ ಮಾಡಲು ಸಾಧ್ಯವೇ ಎಂದು ಕೆಲ ಅಂಗಡಿಕಾರರು ಚಿಂತನೆ ನಡೆಸಿದ್ದಾರೆ.

ಲಕ್ಷಾಂತರ ರುಪಾಯಿಯನ್ನು ವ್ಯಯಿಸಿ ಮುಂಬಯಿ, ಗುಜರಾತ್, ಮದ್ರಾಸ್ ಕಡೆಗಳಿಂದ ಉಡುಪು, ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿ ತರಲಾಗಿದ್ದು, ಈಗ ಮಾರಾಟ ಮಾಡಲು ಸಾಧ್ಯವಾಗದೇ ಇದ್ದರೆ ಅತೀವ ನಷ್ಟ ಎಂದುಕೊAಡು ಮನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಕೋವಿಡ್ ನಿಯಮದ ಕಾರಣ ನಮ್ಮನ್ನು ಎಲ್ಲಿಯಾದರೂ ಸಿಲುಕಿಸಿಯಾರು ಎಂಬ ಕಾರಣಕ್ಕೆ ಮನೆಯತ್ತ ಹೊರಟಿರುವ ವ್ಯಾಪಾರಿಗಳು ಈ ಬಗ್ಗೆ ಬಾಯಿ ಬಿಡಲು ನಿರಾಕರಿಸುತ್ತಿದ್ದಾರೆ. ಮಂಗಳವಾರ ರಾತ್ರಿಯಿಂದಲೇ ಹೊಸ ಮಾರ್ಗಸೂಚಿ ಜಾರಿಗೆ ಬರಲಿದ್ದು, ಮಂಗಳವಾರ ಹಗಲಿನ ಅವಧಿಯಲ್ಲಿ ಇನ್ನಷ್ಟು ಸರಕುಗಳು ಅಂಗಡಿ ಮಾಲಕರ ಮನೆಗೆ ಬಂದು ಬಿದ್ದಿದೆ.

error: