May 19, 2024

Bhavana Tv

Its Your Channel

ಕೋವಿಡ್ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ

ಹೊನ್ನಾವರ: ಕೇಂದ್ರ ಮತ್ತು ರಾಜ್ಯ ಸರಕಾರವು ಕೋವೀಡ್ ೨ನೇ ಅಲೆ ನಿಯಂತ್ರಿಸುವಲ್ಲಿ
ಕಾರ್ಯಪ್ರವರ್ತರಾಗುತ್ತಿರುವ ಸಂದರ್ಭದಲ್ಲಿ ಇಂದು ಗೇರಸೊಪ್ಪ ವಲಯ ಅರಣ್ಯಾಧಿಕಾರಿ ಸಿಬ್ಬಂದಿಗಳು
ಕೋವೀಡ್ ನಿಯಮಾವಳಿ ಮತ್ತು ಅರಣ್ಯ ಭೂಮಿ ಒಕ್ಕಲೆಬ್ಬಿಸುವ ವಿಧಿ-ವಿಧಾನ ಅನುಸರಿಸದೇ ಹಿರಿಯ
ನಾಗರಿಕರೊಬ್ಬರ ೬೦ ವರ್ಷದಿಂದ ಅರಣ್ಯಭೂಮಿ ಸಾಗುವಳಿಗೆಗೆ ಆತಂಕ ಪಡಿಸಿ ಬಲಪ್ರಯೋಗ
ಪ್ರಯತ್ನಿಸಿದ ಘಟನೆ ಜರುಗಿದೆ.

ಹೊನ್ನಾವರ ತಾಲೂಕಿನ, ಮಹಿಮೆ ಗ್ರಾಮದ, ಶಂಕರ ಮಕ್ಕಿಯಲ್ಲಿ ವಾಸ್ತವ್ಯ ಮಾಡುತ್ತಿರುವವರು
ಮಹಿಮೆ ಗ್ರಾಮದ ಸರ್ವೇ ನಂ ೨೮ ಮತ್ತು ೩೫ ರಲ್ಲಿ ದೇವದಾಸ ಪಾಂಡುರoಗ ಶೇಟ ಅನಾದಿಕಾಲದಿಂದ
ಅರಣ್ಯಭೂಮಿ ನಾಲ್ಕು ಎಕರೆ ಪ್ರದೇಶ ಸಾಗುವಳಿ ಮಾಡುತ್ತಿರುವವರ ಮೇಲೆ ಅರಣ್ಯ ಸಿಬ್ಬಂದಿಗಳು
ದೌರ್ಜನ್ಯವೆಸಗಿರುವುದನ್ನು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಬಲವಾಗಿ ಖಂಡಿಸಿದೆ.
ದೇವದಾಸ ಶೇಟ ಅವರು ಸಾಗುವಳಿ ಕ್ಷೇತ್ರಕ್ಕೆ ಸಂಬoಧಿಸಿ ೧೯೭೮ ರ ಪಹಣಿ ಪತ್ರಿಕೆಯ
ವವ್ಯಸಾಯಗಾರನ ಕಾಲಂನಲ್ಲಿ ಮೂರು ಎಕರೆ ಸಾಗುವಳಿದಾರರಂತ ಉಲ್ಲೇಖವಿದ್ದು, ಮುಖ್ಯ ಅರಣ್ಯ
ಸಂರಕ್ಷಣಾಧಿಕಾರಿ ಕೆನರಾ ಸರ್ಕಲ್ ಶಿರಸಿ ಎಪ್ರಿಲ್ ೨೦೦೨ ರಂದು ಮೂರು ಎಕರೆ ಕ್ಷೇತ್ರ ೭೮ ರ ಪೂರ್ವದ
ಅತಿಕ್ರಮಣ ಮಂಜೂರಿಗೆ ಅರ್ಹವಿದ್ದು, ಮಂಜೂರಿಗೆ ಶಿಫಾರಸ್ಸು ಮಾಡಿದ್ದು ಇದೆ. ಅಲ್ಲದೇ ಅರಣ್ಯ ಹಕ್ಕು
ಕಾಯಿದೆ ಅಡಿಯಲ್ಲಿ ದೇವದಾಸ ಶೇಟ ಅವರಿಗೆ ನಾಲ್ಕು ಎಕರೆ ಸಾಗುವಳಿದಾರರಂತ ಜಿ.ಪಿ.ಎಸ್ ಸರ್ವೇ
ಆಗಿದ್ದು ಸದ್ರಿ ಸರ್ವೇ ನಕಾಶೆಗೆ ವಲಯ ಅರಣ್ಯ ಅಧಿಕಾರಿ ಹಾಗೂ ಉಪವಲಯ ಅರಣ್ಯ ಅಧಿಕಾರಿ ಸಹಿ
ಸಹಿತ ನಮೂದಾಗಿದ್ದು ಇದೆ.
೩೦ ವರ್ಷಕ್ಕಿಂತ ಮಿಗಿಲಾದ ಗೇರು ಮರದ ತೋಪಿನಲ್ಲಿ ನೆಡಲಾದ ಅಡಿಕೆ ಮರ ಕಿತ್ತು, ನೀರಿನ
ಪೈಪು ದ್ವಂಸಗೊಳಿಸಿ ಅಪಾರ ಪ್ರಮಾಣದಲ್ಲಿ ಅತಿಕ್ರಮಣದಾರನಿಗೆ ನಷ್ಟಕ್ಕೆ ಕಾರಣವಾಗಿರುವುದು ವಿಷಾದಕರ.
ಅರಣ್ಯ ಹಕ್ಕು ಕಾಯಿದೆಯಲ್ಲಿ ಅರಣ್ಯ ವಾಸಿಯ ಮಾನ್ಯತೆ ಮತ್ತು ಪರೀಶಿಲನಾ ಪ್ರಕ್ರೀಯೆ
ಪೂರ್ಣವಾಗುವವರೆಗೆ ಅರಣ್ಯ ಅತಿಕ್ರಮಣದಾರನ ಒಕ್ಕಲೆಬ್ಬಿಸತಕ್ಕದ್ದಲ್ಲ ಎಂಬ ಅಂಶ ಅಡಕವಾಗಿದ್ದಾಗಿಯೂ
ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಆತಂಕ ಪಡಿಸಬಾರದೆಂಬ ನಿರ್ಧೇಶನ ಇದ್ದಾಗಿಯೂ
ಕಾನೂನಿಗೆ ವ್ಯತಿರಿಕ್ತವಾಗಿ ಇಂದು ಕೋವೀಡ್ ಸಾಂಕ್ರಾಮಿಕ ಉಲ್ಬಣಗೊಳ್ಳುತ್ತಿರುವಂತಹ ಸಂದರ್ಭದಲ್ಲಿ
ಕೋವೀಡ್ ನಿಯಮಾವಳಿಗಳನ್ನ ಅನುಸರಿಸದೇ ಸಾಮಾಜಿಕ ಅಂತರ ಕಾಪಾಡದೇ ಹಿರಿಯ
ನಾಗರಿಕರೊಂದಿಗೆ ಅಸಭ್ಯವಾಗಿ ವರ್ತಿಸಿರುವುದನ್ನು ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ.
ಕಾನೂನು ಕ್ರಮಕ್ಕೆ ಒತ್ತಾಯ:
ದೇವದಾಸ ಶೇಟ ಅವರ ಕಬ್ಜಾ ಬೋಗ್ವಟೆಯಲ್ಲಿ ಸಾಗುವಳಿ ಮಾಡುತ್ತಿರುವ ಭೂಮಿ ಅಕ್ರಮ ಪ್ರವೇಶ
ಮಾಡಿ, ಕಾನೂನು ಬಾಹಿರವಾಗಿ ಉಚ್ಛ ನ್ಯಾಯಾಲಯದ ಅತಿಕ್ರಮಣದಾರರಿಗೆ ಆತಂಕ ಪಡಿಸಬಾರದೆಂಬ
ನಿರ್ಧೇಶನ ಹಾಗೂ ಕೋವೀಡ್ ನಿಯಮಾವಳಿ ಉಲ್ಲಂಘಿಸಿದ ಅರಣ್ಯ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು
ಕ್ರಮ ಜರುಗಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ
ಮುಖ್ಯಮಂತ್ರಿಗೆ ಅಗ್ರಹಿಸಿದ್ದಾರೆ.
ಲಗತ್ತಿಸಿದ ದಾಖಲೆ:
೧. ಗೇರಸೊಪ್ಪ ವಲಯ ಅರಣ್ಯಾಧಿಕಾರಿಗಳು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಕ್ಷೇತ್ರ ಪರೀಶಿಲಿಸಿ
ನಾಲ್ಕು ಎಕರೆ ಕ್ಷೇತ್ರ ದೇವದಾಸ ಶೇಟ ಅವರ ಸಾಗುವಳಿ ಕ್ಷೇತ್ರ ಇರುವ ಕುರಿತು ತಯಾರಿಸಿದ
ಜಿಪಿಎಸ್ ಸರ್ವೇ ನಕಾಶೆ.
೨. ಶಿರಸಿ ಉಪಅರಣ್ಯ ಸಂರಕ್ಷಣಾಧಿಕಾರಿ ದಿನಾಂಕ ೨೦-೦೪-೨೦೦೨ ರಂದು ದೇವದಾಸ ಶೇಟ ಅವರು
ಅತಿಕ್ರಮಿಸಿರುವ ಮೂರು ಎಕರೆ ಕ್ಷೇತ್ರ ಮಂಜೂರಿಗೆ ಶಿಫಾರಸ್ಸು ಮಾಡಿರುವ ಪತ್ರದ ಪ್ರತಿ.
೩. ಗೇರಸೊಪ್ಪ ವಲಯ ಅರಣ್ಯಾಧಿಕಾರಿ ಸಿಬ್ಬಂದಿಗಳು ಅರಣ್ಯ ಅತಿಕ್ರಮಣದಾರನಿಗೆ ನಿಂದಿಸುವ ಚಿತ್ರ.
೪. ಗೇರಸೊಪ್ಪ ವಲಯ ಅರಣ್ಯಾಧಿಕಾರಿ ಸಿಬ್ಬಂದಿಗಳು ಅರಣ್ಯ ಅತಿಕ್ರಮಣದಾರ ದೇವದಾಸ
ಪಾಂಡುರAಗ ಶೇಟ ಅವರ ಅತಿಕ್ರಮಣ ಕ್ಷೇತ್ರದ ಗಿಡ, ಮರ ಮತ್ತು ನೀರಿನ ಪೈಪು
ದ್ವಂಸಗೊಳಿಸುತ್ತಿರುವುದು.
೫. ೧೯೭೮ ರ ಸಾಲಿನ ಪಹಣಿ ಪತ್ರಿಕೆಯಲ್ಲಿ ದೇವದಾಸ್ ಶೇಟ್ ಅತಿಕ್ರಮಣದಾರ ಅಂತ ನಮೂದಾಗಿರುತ್ತದೆ

error: