May 21, 2024

Bhavana Tv

Its Your Channel

ಕೆಂಪುಕಲ್ಲಿನ ಗಣಿಗಾರಿಕೆ ದಾಳಿ; ಯಂತ್ರೋಪಕರಣ ವಶ

ಭಟ್ಕಳ ತಾಲೂಕಿನ ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಮರಂಬಳ್ಳಿಯಲ್ಲಿ ಅನಧಿಕೃತವಾಗಿ ಕೆಂಪುಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಂಡ, ಭಟ್ಕಳ ಕಂದಾಯ ಇಲಾಖೆಯ ತಂಡ ದಾಳಿ ನಡೆಸಿ ಬಳಸುತ್ತಿದ್ದ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದ ಪ್ರಕರಣ ನಡೆದಿದೆ.

ತಾಲೂಕಿನ ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ತಲಾಂದ ಗ್ರಾಮದ ಮರಂಬಳ್ಳಿಯ ಸ್ಥಳೀಯರು ಈ ಹಿಂದೆ ಜಿಲ್ಲಾಧಿಕಾರಿ ಸಹಿತ ಹಲವು ಸಂಬAಧಿಸಿದ ಅಧಿಕಾರಿಗಳಿಗೆ ಅನಧಿಕೃತವಾಗಿ ನಡೆಸುತ್ತಿರುವ ಕೆಂಪು ಕಲ್ಲಿನ ಗಣಿಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಭಟ್ಕಳ ತಾಲೂಕಿನ ಕಂದಾಯ ಇಲಾಖೆಯ ಅದಿಕಾರಿಗಳು ಸ್ಥಳಕ್ಕೆ ತೆರಳಿ ಪರೀಶೀಲನೆ ನಡೆಸಿದ್ದರು. ಅಂದು ಇದು ತಮ್ಮ ಮಾಲ್ಕಿ ಜಮೀನು ಎಂದು ಕೆಲಸ ಮಾಡುತ್ತಿದ್ದವರು ವಾದಿಸಿದ್ದರು. ಇದರಿಂದಾಗಿ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಇಲಾಖೆಯ ಭೂ ವಿಜ್ಞಾನಿ ಜಯರಾಮ ನಾಯ್ಕ, ಭಟ್ಕಳ ಆರ್‌ಐ ಶಂಭು ಕೆ, ಚಾಂದಪಾಸಾ, ಗ್ರಾಮ ಸಹಾಯಕ ಮಂಜುನಾಥ ನಾಯ್ಕ ಸ್ಥಳಕ್ಕೆ ಸರ್ವೆ ನಡೆಸಲು ತೆರಳಿದ್ದರು.
ಸರ್ವೆ ನಡೆಸಲು ತೆರಳಿದಾಗ ಸದರಿ ಸ್ಥಳದಲ್ಲಿ ಅಕ್ರಮವಾಗಿ ಕೆಂಪು ಕಲ್ಲಿನ ಚಟುವಟಿಕೆ ನಡೆಯುತಿತ್ತು. ಗಣಿ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳನ್ನು ನೋಡುತ್ತಿರುವಂತೆ ಅಲ್ಲಿನ ಕೆಲಸ ಮಾಡುತ್ತಿದ್ದ ಕಾರ್ಮಿಕರು ಒಡಿಹೋಗಿದ್ದಾರೆ. ಸ.ನಂ ೧೫೫ರಲ್ಲಿ ಸರ್ವೆ ನಡೆಸಿದಾಗ ಇದು ಸರ್ಕಾರಿ ಹಾಡಿ ಎಂದು ತಿಳಿದು ಬಂದಿದ್ದು ಅಲ್ಲಿನ ಸ್ಥಳದಲ್ಲಿದ್ದ ೨ಟ್ರಿಲರ್ ಮೇಷಿನ್, ಒಂದು ಇಂಜಿನ್ ಹಾಗೂ ಗುದ್ದಲಿಗಳನ್ನು ವಶಕ್ಕೆ ಪಡೆದಿದೆ. ಆರೋಪಿತರನ್ನು ಪತ್ತೆ ಹಚ್ಚಿ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ನಿಯಮದ ಅನುಸಾರ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: