May 18, 2024

Bhavana Tv

Its Your Channel

ಮಾಜಿ ಸಚಿವ ಆರ್.ವಿ.ದೇಶಪಾಂಡೆ ಟ್ರಸ್ಟ್ ನಿಂದ ಆರೋಗ್ಯ ಕಿಟ್ ವಿತರಣೆ

ಭಟ್ಕಳ: ಮಾಜಿ ಸಚಿವ, ಶಾಸಕ ಆರ್ .ವಿ. ದೇಶಪಾಂಡೆ ಅವರು ಕೋವಿಡ್ ಫ್ರಂಟ ವಾರಿಯರ್ಸ್ಗಳಾದ ಭಟ್ಕಳ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಉಚಿತ ಆರೋಗ್ಯ ಕಿಟ್ ನ್ನು ಭಟ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಬಂದರ ರಸ್ತೆಯ ಕಮಲಾವತಿ ಸಭಾಭವನದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ ವಿತರಿಸಿದರು.
ನಂತರ ಮಾತನಾಡಿದ ಮಾಜಿ ಶಾಸಕ ಮಂಕಾಳ ವೈದ್ಯ ‘ ಆರ್.ವಿ.ದೇಶಪಾಂಡೆ ಹಾಗೂ ಅವರ ಪುತ್ರ ಪ್ರಶಾಂತ ದೇಶಪಾಂಡೆ ಅವರು ಕೋವಿಡ್ ವಾರಿಯರ್ಸಗಳಿಗೆ ಹಾಗೂ ಜನಸಾಮಾನ್ಯರಿಗೆ ಸಾಕಷ್ಟು ರೀತಿಯಲ್ಲಿ ಸಹಾಯ ಸಹಕಾರ ನೀಡಿದ್ದಾರೆ. ಈ ನಿಟ್ಟಿನಲ್ಲಿ ಆರೋಗ್ಯ ಕಿಟ್ ನೀಡಲು ಚರ್ಚೆ ನಡೆಸಿ ಹಂತ ಹಂತವಾಗಿ ನೀಡುತ್ತಾ ಬಂದಿದ್ದೇವೆ. ಜನರ ಸೇವೆಗೆ ಸಾಕಷ್ಟು ಹೋರಾಟ ಮಾಡಿದ ಎಲ್ಲಾ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಶ್ಲಾಘನೀಯ. ಬಹುತೇಕ ಎರಡನೇ ಅಲೆ ಜನರನ್ನು ತತ್ತರಿಸಿದ್ದು ಮೂರನೇ ಅಲೆಯ ಮುನ್ಸೂಚನೆ ಇದ್ದು ದೇವರ ಕ್ರಪೆಯಿಂದ ಅದು ಬಾರದೇ ಇರಲಿ. ಎಲ್ಲರು ನೆಮ್ಮದಿಯಿಂದ ಜೀವನ ಸಾಗಿಸುವಂತಾಗಲಿ ಎಂದು ಹೇಳಿದರು.
ತಂಜೀA ಮಾಜಿ ಅಧ್ಯಕ್ಷ ಮುಜಾಮಿಲ್ ಖಾಜಿಯಾ ಮಾತನಾಡಿ ‘ ಕೋವಿಡ್ ಎರಡು ಅಲೆಯಲ್ಲಿ ಜನರ ಸೇವೆಯನ್ನು ಅತ್ಯುತ್ತಮ ರೀತಿಯಲ್ಲಿ ಸಲ್ಲಿಸಿದ್ದ ಇವರನ್ನು ಗುರುತಿಸಿ ಅವರ ಆರೋಗ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಿಟ್ ನೀಡಿದ್ದಾರೆ. ಈ ರೀತಿಯಲ್ಲಿ ಮುಂದಿನ ಬಾರಿ ಕಿಟ್ ನೀಡುವಂತಹ ದಿನಗಳು ಬಾರದೇ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಅವರು ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ಜಯಶ್ರೀ ಮೋಗೇರ ಮಾತನಾಡಿ ‘ಮನೆ ಮನೆ ಸಮೀಕ್ಷೆ ನಡೆಸಿ ಜನರಲ್ಲಿ ಕೋವಿಡ್ ಬಗ್ಗೆ ಜನಜಾಗ್ರತಿ ಮೂಡಿಸುವಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುಮುಖ್ಯವಾಗಿದೆ. ಇವರ ಸೇವೆಗೆ ನಮ್ಮ ಪಕ್ಷದಿಂದ ಚಿಕ್ಕ ರೂಪದಲ್ಲಿ ಕಿಟ್ ನೀಡಿದ್ಧೇವೆ. ಮತ್ತು ಮುಂದಿನ ದಿನದಲ್ಲಿ ಇದೇ ರೀತಿ ಇವರ ಕಾರ್ಯ ಮುಂದುವರೆಯಲಿ ಎಂದರು.
ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ ‘ ಇವರ ಸೇವೆಗೆ ಕಿರಿ ಕಾಣಿಕೆ ರೂಪದಲ್ಲಿ ಆರೋಗ್ಯ ಕಿಟ್ ನೀಡಿದ್ದೇವೆ. ಈ ಹಿಂದೆ ಸರಕಾರಿ ಆಸ್ಪತ್ರೆಗೆ ಮೆಡಿಸಿನ್, ಪಿ.ಪಿ.ಇ. ಕಿಟ್, ಆಕ್ಸಿಜನ್ ಸಿಲಿಂಡರ್, ಸಹ ನೀಡಿದ್ದು, ಕೋವಿಡ್ ಸಂದರ್ಭದಲ್ಲಿ ಜನರೊಂದಿಗೆ ಆರ್.ವಿ. ದೇಶಪಾಂಡೆ ಅವರು ನಿಂತಿದ್ದಾರೆ. ಮುಂದೆಯೂ ಸಹ ಜನರೊಂದಿಗೆ ಇರಲಿದ್ದಾರೆ. ಈ ಕೋವಿಡ್ ಮಹಾಮಾರಿ ಆದಷ್ಟು ಬೇಗ ನಿವಾರಣೆಯಾಗಲಿ ಎಂದರು.
ಭಟ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ ‘ ಪ್ರಾಣದ ಹಂಗು ತೊರೆದು ಕೋವಿಡ್ ಸಮಯದಲ್ಲಿ ಕೆಲಸ ನಿರ್ವಹಿಸಿದ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಕಷ್ಟಕ್ಕೆ ಸ್ಪಂದನೆ ಮಾಡಬೇಕಾಗಿದೆ. ಈ ಕೆಲಸ ಕಾಂಗ್ರೆಸ್ ಪಕ್ಷದಿಂದ ಆಗಿದೆ. ಇನ್ನು ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಸಮಯದಲ್ಲಿ ಕೆಲಸ ಮಾಡಿದ ಆಶಾ, ಅಂಗನವಾಡಿ ಕಾರ್ಯಕರ್ತೆಯರು ನಾನಾ ಸಂಧರ್ಭದಲ್ಲಿ ಸಮಸ್ಯೆಯನ್ನು ಎದುರಿಸಿದ್ದು ಈ ಬಗ್ಗೆ ಸರಕಾರ ಅವರ ಕೆಲಸಕ್ಕೆ ಸಮರ್ಪಕವಾದ ಸಹಕಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ರಾಮಾ ಮೋಗೇರ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಅಲ್ಬರ್ಟ ಡಿಕೋಸ್ತಾ, ತಾಲೂಕು ಪಂಚಾಯತ ಮಾಜಿ ಸದಸ್ಯರು, ಭಟ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರು, ವಿವಿಧ ವಿಭಾಗದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

error: