
ಭಟ್ಕಳ: ತೆರೆದ ಬಾವಿಯಲ್ಲಿ ನೀರು ಸೇದಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ವೃದ್ಧೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ತಾಲೂಕಿನ ಸೋಡಿಗದ್ದೆಯಲ್ಲಿ ಗುರುವಾರ ಮುಂಜಾನೆ ಒಂದುಗಂಟೆ ಸುಮಾರಿಗೆ ನಡೆದಿದೆ.
ಸೋಡಿಗದ್ದೆ ನಿವಾಸಿಯಾಗಿರುವ ನಾಗಮ್ಮ (೬೦) ತನ್ನ
ಮನೆಯ ತೆರೆದ ಬಾವಿಯಿಂದ ನೀರು ಸೇದವು ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿದ್ದು. ತಕ್ಷಣ ವಿಷಯ ತಿಳಿದ ಮನೆಯವರು ಅಗ್ನಿ ಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದು ತಕ್ಷಣ ಕರೆಗೆ ಸ್ಪಂದಿಸಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಏಳು ಅಡಿ ವಿಸ್ತರ‍್ಣ ೪೦ ಅಡಿ ಆಳದ ಬಾವಿಯಲ್ಲಿ ಬಿದ್ದ ವೃದ್ಧೆಯನ್ನು ರಕ್ಷಣೆ ಮಾಡಿ ಬಾವಿಯಿಂದ ಮೇಲಕ್ಕೆ ಎತ್ತಿ ಪ್ರಥಮ ಚಿಕಿತ್ಸೆ ನೀಡಿ ಮನೆಯವರ ವಶಕ್ಕೆ ನೀಡಲಾಗಿದೆ
ಕರ‍್ಯಾಚರಣೆಯಲ್ಲಿ ಠಾಣಾಧಿಕಾರಿ ಎಸ್ ರಮೇಶ , ಮನೋಜ ಬಾಡಕರ್, ರಾಜೇಶ ನಾಯ್ಕ, ಕುಮಾರ ನಾಯ್ಕ, ಪುರುಷೋತ್ತಮ ನಾಯ್ಕ, ಅಕ್ಷಯ ಹಿರೇಮಠ, ಸುಧಾಕರ ಸಿಬ್ಬಂದಿಗಳು ಪಾಲ್ಗೊಂಡಿದ್ದರು
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ