
ಕಾರವಾರ: ಜಿಲ್ಲೆಯ ಭಟ್ಕಳ ನ್ಯಾಯಾಲಯದ ಕಟ್ಟಡಕ್ಕೆ ಶುಕ್ರವಾರ ನಸುಕಿನ ಜಾವ ೪:೧೫ ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ಅವಘಡದಲ್ಲಿ ಭಾಗಶಃ ಕಟ್ಟಡ, ಕೆಲವೊಂದು ಕಂಪ್ಯೂಟರ್‌ಗಳು ಮತ್ತು ಕೆಲವು ವಿದ್ಯುತ್ ಉಪಕರಣಗಳು ಮಾತ್ರ ಸುಟ್ಟು ಹೋಗಿರುತ್ತವೆ.

ಆದರೆ ನ್ಯಾಯಾಲಯದ ಪ್ರಕರಣಗಳಿಗೆ ಸಂಬoಧಿಸಿದ ಕಡತಗಳು ಸುಟ್ಟು ಹೋಗಿರುತ್ತವೆ ಎಂದು ಕೆಲವೊಂದು ಪತ್ರಿಕೆಗಳಲ್ಲಿ ವರದಿಯಾಗಿದ್ದು, ಈ ಅವಘಡದಲ್ಲಿ ಯಾವುದೇ ಪ್ರಕರಣದ ಕಡತಗಳಾಗಲೀ ಅಥವಾ ಕಚೇರಿಗೆ ಸಂಭAದಿಸಿದ ಕಡತಗಳಾಗಲೀ ಸುಟ್ಟುಹೋಗಿಲ್ಲ ಎಂದು ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ
ಅನಂತ ನಾಲವಡಿ ಅವರು ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ