
ಭಟ್ಕಳ:ಮೇಯಲು ಬಿಟ್ಟ ದನವನ್ನು ಕತ್ತರಿಸಿ ಹತ್ಯೆಮಾಡಿ ಮಾಂಸವನ್ನು ಕಟ್ಟ ಮಾಡುತ್ತಿರುವಾಗ ದನದ ಮಾಲೀಕನನ್ನು ಕಂಡು ಆರೋಪಿ ಪರಾರಿ ಆಗಿದ್ದ ಘಟನೆ ತಾಲೂಕಿನ ಸಾಗರ ರಸ್ತೆಯ ಕೋಟಖಂಡ ಗುಡ್ಡೆ ಕಟ್ಟೆ ಸಮೀಪ ನಡೆದಿದೆ.
ತಾಲೂಕಿ ಕೋಟಖಂಡ ನಿವಾಸಿಯಾದ ಆಕಳು ಮಾಲೀಕ ಬಡಿಯಾ ಸುಣ್ಣ ಗೊಂಡ ಬೆಳಿಗ್ಗೆ ಮೇಯಲು ಬಿಟ್ಟ ಆಕಳು ಸಂಜೆಯಾದರು ಮನೆಗೆ ಬರದ ಹಿನ್ನೆಲೆ ಸಾಗರ ರಸ್ತೆಯ ಗುಡ್ಡೆ ಕಟ್ಟೆ ಸಮೀಪ ಹುಡುಕಿಕೊಂಡು ಹೋದ ವೇಳೆ ನಂಬರ ಪ್ಲೇಟ್ ಇಲ್ಲದ ಮೋಟಾರ್ ಸೈಕಲನಲ್ಲಿ ಬಂದ ಇಬ್ಬರು ಆರೋಪಿಗಳು ಮಾಲೀಕನ ಮುಂದೆಯೇ ಆತನು ಸಾಕಿ ಸಲಹಿದ ಆಕಳನ್ನು ಸಾಯಿಸಿ ತಲೆ ಕತ್ತರಿಸಿ ೪ ಕಾಲುಗಳನ್ನು ಬೇರ್ಪಡಿಸಿ ಚರ್ಮ ಸುಲಿದು ಮಾಂಸ ತೆಗೆಯುತ್ತಿರುವಾಗ ಮಾಲೀಕನ್ನು ಕಂಡ ಆರೋಪಿಗಳು ನಾಪತ್ತೆ ಯಾಗಿದ್ದರೆ ಎಂದು ಆಕಳು ಮಾಲೀಕ ತಿಳಿಸಿದ್ದಾರೆ.
ಬಕ್ರೀದ ಹಬ್ಬದ ಹಿನ್ನೆಲೆ ತಾಲೂಕಿನಾದ್ಯಂತ ಪೊಲೀಸರು ಚೆಕ್ ಪೋಸ್ಟ್ ಬಿಗಿಗೊಳಿಸಿರುವುದರಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಮೇಯಲು ಬಿಟ್ಟ ಆಕಳನ್ನು ಕಳುವು ಮಾಡಿ ಗೋಮಾಂಸ ಮಾಡಿಕೊಂಡು ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವ ಸಾಧ್ಯತೆ ಇರಬಹುದೆಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಭಟ್ಕಳ ಸಿ.ಪಿ.ಐ, ದಿವಾಕರ್ ಗ್ರಾಮೀಣ ಪೊಲೀಸ್ ಠಾಣೆ ಪಿ.ಎಸ್.ಐ ಭರತ್ ,ನಗರ ಠಾಣೆಯ ಪಿ.ಎಸ್.ಈ ಸುಮಾ ಬಿ, ಹಾಗೂ ಹನುಮಂತಪ್ಪ ಕುಡಗುಂಟಿ ಹಾಗೂ ಸಿಬ್ಬಂದಿಗಳು ಮತ್ತು ಪಶು ಇಲಾಖೆ ಇಲಾಖೆಯ ಅಧಿಕಾರಿಗಳಯಾದ ವಿವೇಕಾನಂದ ಹೆಗ್ಡೆ ,ಸಿಬ್ಬಂದಿ ಭೇಟಿ ನೀಡಿ ಪಂಚನಾಮೆ ನಡೆಸಿ ಪೋಲಿಸ ಮುಂದಾಳತ್ವದಲ್ಲಿ ವಿಧಿವಿಧಾನ ಮೂಲಕ ಆಕಳುವಿನ ಅಂತ್ಯ ಸಂಸ್ಕಾರ ನೆರವೇರಿಸಿದರು

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ