July 26, 2021

Bhavana Tv

Its Your Channel

ಕಸ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲು ಕ್ರೀಯಾಶೀಲ ಗೆಳೆಯರ ಸಂಘದಿoದ ಮನವಿ

ಭಟ್ಕಳ; ನಗರ ಹಾಗೂ ನಗರ ಭಾಗಕ್ಕೆ ಹೊಂದಿಕೊoಡಿರುವ ಗ್ರಾಮೀಣ ಭಾಗದ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬಂದು ಇದನ್ನು ತಡೆದು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಲು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕ್ರೀಯಾಶೀಲ ಗೆಳೆಯರ ಸಂಘ ದ ಸದಸ್ಯರು ಸೋಮವಾರದಂದು ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿದರು.

ನಮ್ಮ ಸಂಘವು ಕಳೆದ ಮೂರು ವರ್ಷಗಳಿಂದ ಭಟ್ಕಳದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತದೆ. ಈ ಮೂಲಕ ನಾವು ಕ್ರಿಯಾಶೀಲ ಗೆಳೆಯರ ಸಂಘ (ರಿ) ಭಟ್ಕಳದ ಸರ್ವ ಸದಸ್ಯರು ಹಾಗೂ ಭಟ್ಕಳದ ಸಮಸ್ತ ನಾಗರೀಕರ ಪರವಾಗಿ ಮನವಿ ಮಾಡುವುದೇನೆಂದರೆ ಇಂದು ಎಲ್ಲರೂ ವಿಶ್ವ ಪರಿಸರ ದಿನಾಚರಣೆ, ವನಮಹೋತ್ಸವ, ಪರಿಸರ ಸಂರಕ್ಷಣೆಯ ಕುರಿತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪರಿಸರದ ಕುರಿತಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಸರಕಾರವೂ ಇಂತಹ ಕಾರ್ಯಕ್ರಮಗಳಿಗಾಗಿ ಸ್ವಚ್ಛ ಭಾರತದಂತಹ ಯೋಜನೆಯಡಿಯಲ್ಲಿ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ.
ಹೀಗೆ ಪರಿಸರ ಸಂರಕ್ಷಣೆ, ಪರಿಸರ ಶುಭ್ರತೆಯ ಕುರಿತಾಗಿ ಕಾರ್ಯಕ್ರಮ ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ನಗರದ ಹಲವಾರು ಭಾಗಗಳಲ್ಲಿ ದಿನನಿತ್ಯ ತ್ಯಾಜ್ಯ ವಸ್ತುಗಳ ರಾಶಿಯೇ ಬೀಳುತ್ತಿದ್ದು, ವಿಪರೀತ ದುರ್ನಾತ ಕೂಡ ಬೀರುವುದರ ಜೊತೆಗೆ ತೀವ್ರತರವಾದ ಪರಿಸರ ಮಾಲಿನ್ಯಕ್ಕೆ ಎಡೆಮಾಡಿಕೊಟ್ಟಿದೆ. ಮುಖ್ಯವಾಗಿ ಭಟ್ಕಳದ ಸೋನಾರಕೇರಿ ರಸ್ತೆ, ನಗರದ ಚೌಥನಿ ಹೊಳೆಯಲ್ಲಿ, ತೆಂಗಿನಗುAಡಿ ಕ್ರಾಸ್ ಹತ್ತಿರ (ತೆಂಗಿನಗುAಡಿ ಮುಖ್ಯ ರಸ್ತೆ), ಗಾಂಧಿನಗರ-ವೆAಕಟಾಪುರ ರಸ್ತೆಯಲ್ಲಿ ಸರಘಂಟೆವೀರ ದೇವಸ್ಥಾನದ ಹತ್ತಿರ, ಗಾಂಧಿನಗರ ಮಸೀದಿ (ರಾಮ ಶೆಟ್ಟರ ಮನೆ) ಹತ್ತಿರ, ಆನಂದಾಶ್ರಮ ಕಾನ್ವೆಂಟ್ ಮುಂಭಾಗದ ರಸ್ತೆ, ಮುರ್ಡೇಶ್ವರ ಮಾವಳ್ಳಿ ೨ ರ ಕನ್ನಡ ಶಾಲೆ ಬಳಿಯ ಬೈಲು ಹೊಳೆಕಟ್ಟೆ ಬ್ರಿಡ್ಜ್ ಬಳಿ ಹೀಗೆ ಹಲವಾರು ಜನಭೀಡ ಪ್ರದೇಶಗಳಲ್ಲಿ ಇಂತಹ ದುರ್ನಾತ ಬೀರುವ ಕಸದ ರಾಶಿಗಳು ಕಂಡು ಬರುತ್ತಿವೆ. ಸಾರ್ವಜನಿಕರು ಹಿಡಿಶಾಪ ಹಾಕುತ್ತಾ ಮೂಗು ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ. ಮುಖ್ಯವಾಗಿ ಭಟ್ಕಳ ಪುರಸಭಾ ಗಡಿಭಾಗದ ಗ್ರಾಮಗಳಲ್ಲಿಯಂತೂ ಕಸವಿಲೇವಾರಿ ಎಂಬುದೇ ಇಲ್ಲವಾಗಿದ್ದು ಆ ಭಾಗದ ಜನರು ಕಸವನ್ನು ಎಲ್ಲೆಂದರಲ್ಲಿ ಬಿಸಾಡಬೇಕಾದ ಪರಿಸ್ಥಿತಿ ಇದೆ.ಹಾಗೆ ಭಟ್ಕಳ ಅತಿ ಪುರಾತನ ಅತಿ ದೊಡ್ಡ ಕೆರೆ ಕೋಕ್ತಿ ಕೆರೆ ಸಹ ಪ್ಲಾಸ್ಟಿಕ್ ತ್ಯಾಜ್ಯ, ಪ್ರಾಣಿ ಜನ್ಯ ತ್ಯಾಜ್ಯಗಳು ಹಾಗೂ ಸುತ್ತಮುತ್ತಲ ಮನೆಗಳಿಂದ ಬರುವ ಹೊಲಸು ನೀರಿನಿಂದ ಕಲುಷಿತವಾಗಿ ಅದರಲ್ಲಿ ವಾಸವಾಗಿರುವ ಜೀವ ವೈವಿಧ್ಯಗಳು ಅವನತಿ ಹೊಂದುತ್ತಿವೆ. ಅದು ಹೀಗೆ ಮುಂದುವರಿದರೆ ಆ ಭಾಗದ ಸುತ್ತಲಿನ ಜಲಮೂಲ ಕೂಡ ಹಾಳಾಗಲಿದ್ದು. ತಾವು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಜಗತ್ತು ಕೋರೋನಾದಂತಹ ಭಯಾನಕ ಖಾಯಿಲೆಯಿಂದ ನರಳುತ್ತಿದ್ದು, ಅದರ ಜೊತೆಯಲ್ಲಿಯೇ ಡೆಂಗ್ಯೂ ದಂತಹ ಭಯಾನಕ ವೈರಸ್ ಗಳೂ ಕೂಡ ದಾಳಿಯಿಟ್ಟು ಮಾನವ ಜನಾಂಗವನ್ನು ಕಾಡುತ್ತಿದೆ.. ಇಂತಹ ಸಂದರ್ಭದಲ್ಲಿ ಸ್ವಚ್ಚತೆಯನ್ನು ಕಾಪಾಡಿ ಮುಂದಿನ ಪೀಳಿಗೆಗೆ ಈ ಪರಿಸರವನ್ನು ಸ್ವಚ್ಚವಾಗಿಟ್ಟು ನೀಡಬೇಕಾದ ನಾವು ಮಾನವರು, ನಮ್ಮನ್ನು ಈ ದಿಸೆಯಲ್ಲಿ ಜಾಗ್ರತಗೊಳಿಸಬೇಕಾದ ಸಂಭAದಿಸಿದ ಅಧಿಕಾರಿ ವರ್ಗದವರು ಜಾಣ ಮೌನ ವಹಿಸಿರುವುದು ಖೇದಕರ.
ಕಾರಣ ತಾವು ಈ ದಿಸೆಯಲ್ಲಿ ಕಾರ್ಯತತ್ಪರರಾಗಿ ನಗರದಲ್ಲಿ ಸ್ಚಚ್ಛ ಹಾಗೂ ಶುಭ್ರಪರಿಸರ ನಿರ್ಮಿಸುವಲ್ಲಿ ಕ್ರಮ ತೆಗೆದುಕೊಂಡು ಜನಜಾಗೃತಿ ಮೂಡಿಸುವುದರ ಜೊತೆಗೆ ಆರೋಗ್ಯವಂತ ಸ್ವಸ್ಥ ಸಮಾಜ ನಿರ್ಮಾಣವಾಗಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಮನವಿಯನ್ನು ಕ್ರಿಯಾಶೀಲ ಗೆಳೆಯ ಸಂಘದ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಓದಿ ಉಪವಿಭಾಗಾದಿಕಾರಿ ಮಮತಾದೇವಿ ಯವರಿಗೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಭವಾನಿಶಂಕರ ನಾಯ್ಕ, ಪಾಂಡುರAಗ ನಾಯ್ಕ, ದೀಪಕ್ ನಾಯ್ಕ, ಅರುಣ ನಾಯ್ಕ, ಪಾಂಡು ನಾಯ್ಕ, ಮೋಹನ ನಾಯ್ಕ , ಆದೀಶ್ವರ ಎನ್. ಇದ್ದರು.

error: