
ಜಾಗತಿಕ ಭ್ರಾತೃತ್ವದ ಸಂದೇಶ ಸಾರಿದ ಇಮಾಮರು
ಭಟ್ಕಳ: ಹಜ್‌ಯಾತ್ರೆಯ ಮೂಲಕ ಈದುಲ್‌ಅಝ್ಹಾ ಬಕ್ರೀದ್ ಹಬ್ಬವು ಜಾಗತಿಕ ಭ್ರಾತೃತ್ವವನ್ನು ಸಾರುತ್ತಿದೆ ಎಂದು ಭಟ್ಕಳದ ಮರ್ಕಝಿ ಖಲಿಫಾಜಾಮಿಯಾ ಮಸೀದಿಯ(ಗುರುಗಳ ಪಳ್ಳಿ) ಇಮಾಮ್ ಮತ್ತು ಖತೀಬ್ ಹಾಗೂ ಮರ್ಕಝಿ ಖಲಿಫಾಜಮಆತ್ ಪ್ರಧಾನಖಾಝಿ ಮೌಲಾನಕ್ವಾಜಾ ಮುಈನುದ್ದೀನ್ ಮದನಿ ನದ್ವಿ ಹೇಳಿದರು.
ಅವರು ಬುಧವಾರ ಖಲಿಫಾಜಾಮೀಯಾ ಮಸೀದಿಯಲ್ಲಿ ಈದ್ ನಮಾಝ್ ನೇತೃತ್ವ ವಹಿಸಿ ಈದ್ ಸಂದೇಶ ನೀಡಿದರು.
ಪ್ರವಾದಿ ಇಬ್ರಾಹೀಂ (ಅ) ಮತ್ತು ಅವರ ಪುತ್ರಇಸ್ಮಾಯೀಲ್ (ಅ) ಅವರ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಕೋವಿಡ್ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಅತ್ಯಂತ ಸರಳವಾಗಿ ಆಚರಿಸಲಾಯಿತು.
ಕೋವಿಡ್ ಮಾರ್ಗಸೂಚಿಯಂತೆ ಆಯಾ ಮಸೀದಿಗಳಲ್ಲಿ ಈದ್ ನಮಾಜ್ ನಿರ್ವಹಿಸಿದ ಇಲ್ಲಿನ ಮುಸ್ಲಿಂ ಬಾಂದವರು ಪರಸ್ಪರ ಶುಭವನ್ನು ವಿನಿಮಯಿಸಿಕೊಂಡರು.
ನಗರದ ಪ್ರಮುಖ ಜಾಮಿಯ ಮಸೀದಿಗಳಾಗಿರುವ ಚಿನ್ನದ ಪಳ್ಳಿಯಲ್ಲಿ ಮೌಲಾನ ಅಬ್ದುಲ್ ಅಲೀಮ್ ಖತೀಬಿ ನದ್ವಿ, ನವಾಯತ್ ಕಾಲೋನಿ ಜಾಮಿಯಾ ಮಸೀದಿಯಲ್ಲಿ ಮೌಲಾನ ಅನ್ಸಾರ್ ಮದವಿ, ಮಗ್ದೂಮಿಯಾ ಜಾಮಿಯಾ ಮಸೀದಿಯಲ್ಲಿ ಮೌಲಾನ ನೇಮತುಲ್ಲಾ ಅಸ್ಕರಿ ನದ್ವಿ, ಮದೀನಾ ಜಾಮಿಯಾ ಮಸೀದಿಯಲ್ಲಿ ಮೌಲಾನಝಕರಿಯಾ ನದ್ವಿ, ಆಹ್ಮದ್ ಸಯೀದ್‌ಜಾಮಿಯಾ ಮಸೀದಿಯಲ್ಲಿ ಮೌಲಾನ ಮುಹಮ್ಮದ್‌ಜಾಫರ್ ಫಕ್ಕಿಭಾವ್ ನದ್ವಿ ಈದ್ ನಮಾಝ್ ನೇತೃತ್ವ ವಹಿಸಿ ಈದ್ ಸಂದೇಶ ನೀಡಿದರು.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ