May 18, 2024

Bhavana Tv

Its Your Channel

ಭಟ್ಕಳ ಸರಕಾರಿ ಆಸ್ಪತ್ರೆಗೆ ತೆರಳುವ ರಸ್ತೆಗೆ ಬೇಕಿದೆ ದುರಸ್ತಿ ಭಾಗ್ಯ, ‘ಅಂಬ್ಯುಲೆನ್ಸ ಸಹಿತ ವಾಹನ ಓಡಾಟಕ್ಕೆ ಅಡ್ಡಿಪಡಿಸುತ್ತಿದೆ ಭಾರಿ ಹೊಂಡಗಳು’

ಭಟ್ಕಳ ತಾಲೂಕಿನ ಹೃದಯ ಭಾಗವಾದ ಸರಕಾರಿ ಆಸ್ಪತ್ರೆಗೆ ತೆರಳುವ ರಸ್ತೆಯು ಸದ್ಯ ಹೊಂಡದಿAದಲೇ ಆವ್ರತವಾಗಿದ್ದು, ಈ ಕಾರಣ ನಿತ್ಯಯು ಆಸ್ಪತ್ರೆಯಿಂದ ಓಡಾಡುವ ಅಂಬ್ಯುಲೆನ್ಸ, ರೋಗಿಗಳನ್ನು ಕರೆತರುವ ಆಟೋ ರಿಕ್ಷಾ ಹಾಗೂ ದ್ವೀ ಚಕ್ರ ವಾಹನ ಸವಾರರಿಗೆ ಕಿರಿಕಿರಿಯುಂಟಾಗುತ್ತಿದ್ದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು ಶೀಘ್ರವಾಗಿ ಈ ರಸ್ತೆ ದುರಸ್ತಿ ಕಾರ್ಯವಾಗಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.

ಕಳೆದ ಇತ್ತೀಚಿನ ವರ್ಷದಿಂದ ಭಟ್ಕಳ ಸರಕಾರಿ ಆಸ್ಪತ್ರೆಯು ಖಾಸಗಿ ಆಸ್ಪತ್ರೆಗೂ ಮೀರಿದಂತೆ ಬೆಳೆದು ನಿಂತಿದೆ. ಇದರಿಂದಾಗಿ ನಿತ್ಯವೂ ಈ ರಸ್ತೆಯಲ್ಲಿ ಸಂಚರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಕೆಲವು ಅಪಘಾತದ ಸಮಯದಲ್ಲಿ ಅಥವಾ ಇನ್ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರೋಗಿಗಳನ್ನುವಲಯ ಉಡುಪಿ, ಮಣಿಪಾಲ, ಮಂಗಳೂರಿಗೆ ತೆರಳುವ ಅಂಬ್ಯುಲೆನ್ಸ ಸಹ ಇದೇ ಸರಕಾರಿ ಆಸ್ಪತ್ರೆಯಿಂದ ಸಂತೆ ಮಾರುಕಟ್ಟೆಗೆ ತೆರಳುವ ರಸ್ತೆಯು ಅವಲಂಬಿತವಾಗಲಿದೆ.

ಇಂತಹ ಸ್ಥಿತಿಯಲ್ಲಿ ರಾಷ್ಟೀಯ ಹೆದ್ದಾರಿ -೬೬ಕ್ಕೆ ಹೊಂದಿಕೊAಡಿರುವ ಸಂತೆ ಮಾರುಕಟ್ಟೆಯಿಂದ ಸರಕಾರಿ ಆಸ್ಪತ್ರೆಯ ತನಕ ತೆರಳುವ ರಸ್ತೆಯ ಮಧ್ಯ ಭಾಗದಲ್ಲಿ ಸಂಪೂರ್ಣವಾಗಿ ರಸ್ತೆ ಹೊಂಡದಿAದ ಕೂಡಿದ್ದು ಮಳೆಗಾಲದಲ್ಲಿ ಅಡಿಯಷ್ಟು ನೀರು ನಿಲ್ಲಲಿದೆ. ಇದಕ್ಕೆ ಕಾರಣ ಗುಡ್ಡದ ಪ್ರದೇಶದಿಂದ ಮಳೆಗಾಲದಲ್ಲಿ ಚರಂಡಿಗೆ ಸೇರುವ ನೀರು ಅಸಮರ್ಪಕವಾದ ಚರಂಡಿ ವ್ಯವಸ್ಥೆಯಿಂದ ನೀರಿನ ಹರಿವು ರಸ್ತೆಗೆ ತಿರುಗಿದೆ. ಈ ಪರಿಸ್ಥಿತಿ ಸಾಕಷ್ಟು ವರ್ಷದಿಂದ ಇದ್ದು, ನೀರು ರಸ್ತೆಗೆ ಬರುವದರಿಂದ ಡಾಂಬರು ಸಂಪೂರ್ಣವಾಗಿ ಹಾಳಾಗಿ ರಸ್ತೆಯೆಲ್ಲ ಹೊಂಡದಿAದ ಕೂಡಿದೆ.

ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಈ ರಸ್ತೆಗೆ ಡಾಂಬರು ಕಾಣದೇ ಸಾಕಷ್ಟು ವರ್ಷಗಳೆ ಕಳೆದಿದೆ. ಹಾಗೂ ರಸ್ತೆಯ ಮೇಲೆ ನೀರು ಹರಿಯುತ್ತಿರುವ ಬಗ್ಗೆ ಈ ಹಿಂದೆ ಪುರಸಭೆಗೆ ಮನವಿ ಮಾಡುತ್ತಾ ಬಂದಿದ್ದರು ಸಹ ಚರಂಡಿಯ ವ್ಯವಸ್ಥೆ ಸರಿಪಡಿಸುವ ಕೆಲಸವನ್ನೇ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಹಿಂದೆ ಹೊಂಡ ಬಿದ್ದ ಜಾಗದಲ್ಲಿ ಪುರಸಭೆಯಿಂದ ಮಣ್ಣು ಹಾಕಿ ತ್ಯಾಪೆ ಹಚ್ಚುವ ಕೆಲಸವೊಂದೆ ಆಗಿದೆ. ಯಾರಾದರು ಸಚಿವರು ಬಂದಿದ್ದಲ್ಲಿ ಮಾತ್ರ ಈ ರಸ್ತೆಯನ್ನು ತುರ್ತಾಗಿ ಸರಿಪಡಿಸುತ್ತಾರೆ ಹೊರತು ಶಾಶ್ವತವಾಗಿ ಈ ರಸ್ತೆ ಅಭಿವೃದ್ಧಿಗೆ ಪುರಸಭೆ ಅಥವಾ ಜನಪ್ರತಿನಿಧಿಗಳ ಶ್ರಮವಿಲ್ಲವಾಗಿರುವುದು ರಸ್ತೆ ನೋಡಿದರೆ ಗೋಚರಿಸುತ್ತದೆ.

ದಿನಕಳೆದಂತೆ ಪ್ರಮುಖವಾಗಿ ಈ ರಸ್ತೆಯ ಅವಲಂಬನೆ ಕೇವಲ ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಬಿಟ್ಟು ಸರಕಾರಿ ಆಸ್ಪತ್ರೆಯ ಅಭಿವೃದ್ಧಿಯ ಬಳಿಕ ಸಾಕಷ್ಟು ಸಂಖ್ಯೆಯಲ್ಲಿ ಬರುವ ರೋಗಿಗಳ ಬಳಕೆ ಆರಂಭವಾಯಿತು. ಅದರಂತೆ ಕಳೆದ ವರ್ಷದಲ್ಲಿ ಈ ರಸ್ತೆಯ ಹೊಂದಿಕೊAಡAತೆ ಮಿನಿ ವಿಧಾನ ಸೌಧದ ಕಟ್ಟಡ ನಿರ್ಮಾಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಿದೆ. ಈ ಮಧ್ಯೆ ನಿತ್ಯವು ವೇಗದಲ್ಲಿ ರೋಗಿಗಳ ಸಾಗಾಟದಲ್ಲಿರುವ ಸರಕಾರಿ ಹಾಗೂ ಖಾಸಗಿ ಅಂಬ್ಯುಲೆನ್ಸ ಚಾಲಕರಿಗೆ ಈ ಹೊಂಡವನ್ನು ತಪ್ಪಿಸಿಯೇ ನಿಧಾನವಾಗಿ ತೆರಳಬೇಕಾಗಿದೆ.

ಈ ರಸ್ತೆಯಲ್ಲಿ ಸರಕಾರಿ ಆಸ್ಪತ್ರೆ, ಶಾಲಾ ಕಾಲೇಜು, ಸರಕಾರಿ ಕಚೇರಿ, ಮಿನಿ ವಿಧಾನ ಸೌಧ, ಸಂತೆ ಮಾರುಕಟ್ಟೆ, ಅಂಗಡಿ ಮುಂಗಟ್ಟು, ಜಿಮ್ ಗಳಿದ್ದು ಇವೆದ್ದಕ್ಕು ತೆರಳಲು ಜನರು ಇದೇ ಮಾರ್ಗದಲ್ಲಿ ಸಾಗಬೇಕಿದೆ. ಹಾಗೂ ಹಳ್ಳಿ ಪ್ರದೇಶವಾದ ಮಾರುಕೇರಿ, ಕೋಣಾರ ಮುಂತಾದ ಭಾಗದಿಂದ ಬರುವ ಗ್ರಾಮೀಣ ಭಾಗದ ಜನರು ಪೇಟೆ ರಸ್ತೆಗೆ ತೆರಳಲು ಸರಕಾರಿ ಆಸ್ಪತ್ರೆಯ ಈ ರಸ್ತೆಯನ್ನು ಅವಲಂಬಿಸುವುದು ಇತ್ತೀಚೆಗೆ ಹೆಚ್ಚಾಗಿದೆ ಎಂದರೆ ತಪ್ಪಾಗುವುದಿಲ್ಲ.

ಈ ರಸ್ತೆಯ ಹೊಂಡದಿAದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ತಮ್ಮ ಸಮವಸ್ತ್ರದ ಬಗ್ಗೆ ಗಮನ ಹರಿಸಿ ನಡೆದುಕೊಂಡು ಹೋಗಬೇಕಾಗಿದೆ. ಕಾರಣ ಕೆಲವೊಂದು ಬ್ರಹತ ವಾಹನಗಳು ಹೊಂಡವನ್ನು ಗಮನಿಸದೇ ತೆರಳಿದರೆ ವಿದ್ಯಾರ್ಥಿಗಳ ಸಮವಸ್ತ್ರವೆಲ್ಲ ಕೆಸರುಮಯವಾಗಲಿದೆ.
ಹಾಗೂ ಅದೆಷ್ಟೋ ಮಂದಿ ದ್ವಿ ಚಕ್ರ ವಾಹನ ಸವಾರರು ಆಯತಪ್ಪಿ ಹೊಂಡದಲ್ಲಿ ಬಿದ್ದಿರುವುದು ಸಹ ಇದೆ. ಹಾಗಿದ್ದರೆ ಇದಕ್ಕೆಲ್ಲ ಒಂದು ಶಾಶ್ವತ ಪರಿಹಾರ ಬೇಕೆ ಬೇಕು ಎಂಬ ಒತ್ತಾಯ ಸದ್ಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ರಸ್ತೆ ಅಗಲಕ್ಕೆ ಸ್ಥಳೀಯರ ಒತ್ತಾಯ:
ಈಗಿರುವ ರಸ್ತೆಯು ಸಹ ತೀರಾ ಚಿಕ್ಕದಾಗಿದ್ದು ಈ ಹಿಂದೆ ವಾಹನ ಸಂಚಾರ ವಿರಳವಿದ್ದ ವೇಳೆ ಅನೂಕೂಲವಿದ್ದು ಆದರೆ ಈಗ ಈ ಭಾಗದಲ್ಲಿ ಮಿನಿ ವಿಧಾನ ಸೌಧ, ಇಂದಿರಾ ಕ್ಯಾಂಟೀನ್, ಸರಕಾರಿ ಕಚೇರಿ, ಜಿಮ್, ದಿನಸಿ ಅಂಗಡಿಗಳು ಹಾಗೂ ಗ್ಯಾರೇಜ ಇದ್ದ ಹಿನ್ನೆಲೆ ಪ್ರಮುಖ ಜನದಟ್ಟಣೆ ಇರುವ ಸ್ಥಳವಾಗಿ ಬದಲಾಗಿದೆ. ಈಗಿರುವ ಚಿಕ್ಕದಾದ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟಕರವಾಗಿದ್ದು, ರೋಗಿಗಳಿಗೆ ಓಡಾಟ, ಜನರ, ಶಾಲಾ ಕಾಲೇಜು ವಿದ್ಯಾರ್ಥಿಗಳ ಅನೂಕೂಲಕ್ಕೆ ಈಗಿರುವ ರಸ್ತೆಯನ್ನು ಪುರಸಭೆಯಿಂದ ಅಗಲೀಕರಣ ಮಾಡಿದ್ದಲ್ಲಿ ಸಂಚಾರ ಸುಗಮವಾಗಲಿದೆ ಮತ್ತು ಇದು ಅತೀ ಶೀಘ್ರವಾಗಿ ಆಗಿದ್ದಲ್ಲಿ ಬಹುಪಯೋಗಿ ಆಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

error: