May 3, 2024

Bhavana Tv

Its Your Channel

ಮುಂಡಳ್ಳಿಯ ನ್ಯಾಯಬೆಲೆ ಅಂಗಡಿ, ಬಯೋಮೆಟ್ರಿಕ್ ಮತ್ತು ಲಾಗಿನ್ ಐಡಿ ಬದಲಾವಣೆಯಲ್ಲಿ ವಿಳಂಬ

ಭಟ್ಕಳ ತಾಲೂಕಿನ ಮುಂಡಳ್ಳಿಯ ನ್ಯಾಯಬೆಲೆ ಅಂಗಡಿಯ ಗುಮಾಸ್ತನ ಬಯೋಮೆಟ್ರಿಕ್ ಮತ್ತು ಲಾಗಿನ್ ಐಡಿ ಬದಲಾವಣೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಯುವಕ ಮಂಡಳಿ ಮುಂಡಳ್ಳಿಯವರ ವತಿಯಿಂದ ಸಹಾಯಕ ಆಯುಕ್ತರಿಗೆ ಸೋಮವಾರದಂದು ಮನವಿ ಸಲ್ಲಿಸಲಾಯಿತು

ಮುಂಡಳ್ಳಿ ಗ್ರಾಮದ ಯುವಕ ಮಂಡಳಿ ಇದರ ಅಡಿಯಲ್ಲಿ ನ್ಯಾಯಬೆಲೆ ಅಂಗಡಿಯನ್ನು ನಡೆಸುತ್ತಿದ್ದ ಈ ಹಿಂದಿನ ನ್ಯಾಯಬೆಲೆ ಅಂಗಡಿಯ ಗುಮಾಸ್ತನಾದ ಕೃಷ್ಣಪ್ಪ ದುರ್ಗಪ್ಪ ನಾಯ್ಕ ಕಾರ್ಯನಿರ್ವಹಿಸುತ್ತಿದ್ದು .ಇವನ ಮೇಲೆ ಅವ್ಯವಹಾರ ಲೂಟಿ ಮಾಡಿದ ಆರೋಪ ಬಂದ ಕಾರಣ ಇದನ್ನು ಬದಲಾಯಿಸಿ ಬೇರೊಬ್ಬರನ್ನು ಆ ಸ್ಥಳದಲ್ಲಿ ನೇಮಿಸಿದ್ದು ಅವರ ಬಯೋಮೆಟ್ರಿಕ್ ಮತ್ತು ಲಾಗಿನ್ ಐಡಿಯನ್ನು ಕ್ರಿಯೇಟ್ ಮಾಡಲು ಸೆಪ್ಟೆಂಬರ್ ೧ ಹಾಗೂ ೪ ರಂದು ೨ ಬಾರಿ
ಲಿಖಿತ ರೂಪದಲ್ಲಿ ತಹಸೀಲ್ದಾರ್ ಅವರಿಗೆ ಮನವಿ ನೀಡಿದರೂ ಯಾವುದೇ ಪ್ರತಿಕ್ರಿಯೆ ಬಂದಿರದ ಕಾರಣ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದ್ದು ಹಾಗೂ ಇದರಿಂದ ಜನರಿಗೆ ನ್ಯಾಯ ಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲು ತೊಂದರೆಯಾಗುತ್ತಿದೆ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳಬೇಕಾಗಿ ಯುವಕ ಮಂಡಳಿ ಮುಂಡಳ್ಳಿಯವರಿAದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ

ಈ ಸಂದರ್ಭದಲ್ಲಿ ಮಾತನಾಡಿದ ಮುಂಡಳ್ಳಿ ಗ್ರಾಮ ಪಂಚಾಯತ ಸದಸ್ಯ ರಾಜು ಎಲ್. ನಾಯ್ಕ. ಈ ನ್ಯಾಯ ಬೆಲೆ ಅಂಗಡಿ ಯುವಕ ಮಂಡಳಿಯ ಅಡಿಯಲ್ಲಿ ಬರುತ್ತಿದ್ದು ಅಲ್ಲಿ ಕೆಲಸ ಮಾಡುತ್ತಿದ್ದ ಗುಮಾಸ್ತನಾದ ಕೃಷ್ಣಪ್ಪ ದುರ್ಗಪ್ಪ ನಾಯ್ಕ ಭ್ರಷ್ಟಾಚಾರ,ಅವ್ಯವಹಾರ ಮಾಡಿಕೊಂಡಿದ್ದು ಸರ್ಕಾರದಿಂದ ಬರುವ ಹಣವನ್ನು ಯುವಕ ಮಂಡಳಿಯ ಖಾತೆಗೆ ಬರದೆ ನೇರವಾಗಿ ತನ್ನ ಖಾತೆಗೆ ಬರುವ ಹಾಗೆ ಮಾಡಿಕೊಂದಿದ್ದು ಆದ ಕಾರಣ ಯುವಕ ಮಂಡಳಿಯಿAದ ಆತನನ್ನು ಕೈ ಬಿಟ್ಟು ಬೆರೆರೊಬ್ಬರನ್ನು ಆ ಕೆಲಸಕ್ಕೆ ನೇಮಕ ಮಾಡಿದ್ದೇವೆ ಆದರೆ ಅವರ ಬಯೋಮೆಟ್ರಿಕ್ ಮತ್ತು ಲಾಗಿನ್ ಐಡಿಯನ್ನು ಕ್ರಿಯೇಟ್ ಮಾಡಲು ೨ ಬಾರಿ ತಹಸೀಲ್ದಾರ್ ಅವರಿಗೆ ಮನವಿ ನೀಡಿದರು ಯಾವುದೇ ಪ್ರತಿಕ್ರಿಯೆ ಬಂದಿರದ ಕಾರಣ ಇಂದು ಸಹಾಯಕ ಆಯುಕ್ತರಿಗೆ ಮನವಿ ನೀಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಅರುಣ ನಾಯ್ಕ ಅಧ್ಯಕ್ಷರು ಯುವಕ ಮಂಡಳ ಮುಂಡಳ್ಳಿ, ಗುರುದೀಪ ನಾಯ್ಕ ಉಪಾಧ್ಯಕ್ಷ, ಕಾರ್ಯದರ್ಶಿ ಲೋಕೇಶ ದೇವಾಡಿಗ,ಖಜಾಂಚಿ ನಾಗರಾಜ ದೇವಾಡಿಗ,ಗ್ರಾಮ ಪಂಚಾಯತಿ ಅಧ್ಯಕ್ಷ ನಾಗಪ್ಪ ನಾಯ್ಕ ,ಸದಸ್ಯರು ರಾಜು ಎಲ್. ನಾಯ್ಕ ಇದ್ದರು

error: