May 19, 2024

Bhavana Tv

Its Your Channel

ಪಹಣಿ ಪತ್ರಿಕೆಗಳಲ್ಲಿ ಲೋಪದೋಷಗಳನ್ನು ಸರಿಪಡಿಸುವ ಕುರಿತು ಸಹಾಯಕ ಆಯುಕ್ತರಿಗೆ ಮನವಿ

ಭಟ್ಕಳ: ಹೊನ್ನಾವರ ತಾಲೂಕಿನ ಅನಿಲಗೋಡನ ನಿವಾಸಿಯೋರ್ವರ ಪಹಣಿ ಪತ್ರಿಕೆಗಳಲ್ಲಿ ಇಲಾಖೆಯ ಕಣ್ಣ ತಪ್ಪಿನಿಂದಲೋ , ಬೇಜವಾಬ್ದಾರಿತನದಿಂದಲೋ, ಅಥವಾ ತಾಂತ್ರಿಕ ದೋಷದಿಂದಲೋ ಉಂಟಾದ ಲೋಪದೋಷಗಳನ್ನು ಸರಿಪಡಿಸುವ ಕುರಿತು ಸಹಾಯಕ ಆಯುಕ್ತರಿಗೆ ಹೊನ್ನಾವರದ ದಿವಂಗತ. ಡಿ. ದೇವರಾಜ ಅರಸು ವಿಚಾರ ವೇದಿಕೆಯ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಹಾಗೂ ವೇದಿಕೆ ಸದಸ್ಯರು ಮನವಿ ಸಲ್ಲಿಸಿದರು.

ಜಿಲ್ಲೆ ಭೌಗೋಳಿಕವಾಗಿ ಗುಡ್ಡಗಾಡುಗಳಿಂದ ಆವೃತ್ತವಾದ ತುಂಡು ಭೂಮಿಯ ಸಣ್ಣ ಹಾಗೂ ಅತಿ ಸಣ್ಣ ರೈತರಿಂದಲೇ ತುಂಬಿದ ಜಿಲ್ಲೆಯಾಗಿದೆ. ಇವರೆಲ್ಲರು ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ರವರ ಭೂಸುಧಾರಣಾ ಕಾನೂನು ಅಡಿಯಲ್ಲಿ ಭೂಮಿಯ ಅಧಿಭೋಗ ಹಕ್ಕುದಾರರಾಗಿ ಜೀವಿಸುತ್ತಲಿದ್ದಾರೆ. ಆದರೆ ಸಾಕಷ್ಟು ಜನ ಗೇಣಿದಾರರು ಹಲವಾರು ಕಾರಣಗಳಿಂದ ಇಂದಿಗೂ ತಮ್ಮ ಸಾಗುವಳಿ ಭೂಮಿಯ ಸಂಪೂರ್ಣ ಅಧಿಭೋಗ ಹಕ್ಕು ಪಡೆಯಲಾಗದೇ ಪರಿತಪಿಸುತ್ತಲಿದ್ದಾರೆ.
ಕಾರಣ ಇಲಾಖೆಯ ಕಣ್ಣ ತಪ್ಪಿನಿಂದಲೋ, ತಾಂತ್ರಿಕ ದೋಷದಿಂದಲೋ ಉಂಟಾದ ಲೋಪದೋಷದಿಂದ ಪಹಣಿ ಪತ್ರಿಕೆಗಳನ್ನು ದುರಸ್ತಿ ಮಾಡಿಕೊಳ್ಳಲಾಗದೇ ಜನಸಾಮಾನ್ಯರಾದ ಕಬ್ಜೆದಾರ ಯಾ ಸಾಗುವಳಿದಾರ ಕಷ್ಟ ಅನುಭವಿಸುತ್ತಲಿದ್ದಾನೆ. ಪಹಣಿ ಪತ್ರಿಕೆಯಲ್ಲಿ ಉಂಟಾಗುವ ಲೋಪದೋಷಗಳಿಗೆ ಇಲಾಖೆ ಕಾರಣವೇ ಹೊರತು ಜನಸಾಮಾನ್ಯರಲ್ಲ. ಇಂತಹ ತಪ್ಪು ತಡೆಗಳನ್ನು ಸರಿಪಡಿಸಿಕೊಳ್ಳಲು ಕಬ್ಜೆದಾರ ಯಾ ಅಧಿಭೋಗ ಹಕ್ಕುದಾರ ಇಲಾಖೆಗೆ ದಾಖಲೆಗಳನ್ನು ಇಟ್ಟು ಮನವಿ ಮಾಡಿಕೊಂಡರು ಕಳೆದ ಹಲವು ವರ್ಷಗಳಿಂದ ಪಹಣಿ ಪತ್ರಿಕೆ ದುರಸ್ತಿಯಾಗದೇ ಇರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ.

ಹೊನ್ನಾವರ ತಾಲ್ಲೂಕು ಭೂ ನ್ಯಾಯ ಮಂಡಳಿಯಿAದ ಆದೇಶ ಆಗಿದೆ ಮತ್ತು ಫಾರ್ಮ್ ೧೦ ನೀಡಲ್ಪಟ್ಟಿದೆ. ಕರ್ನಾಟಕ ಸರ್ಕಾರದ ಹಕ್ಕು ಕಡಿಮೆ ಮಾಡಿ ಅಧಿಭೋಗ ಹಕ್ಕುದಾರ’ ಎಂದು ಮ್ಯುಟೇಶನ್ ಎಂಟ್ರಿ ಸಹ ಆಗಿದೆ. ಆದರೆ ಪಹಣಿ ಪತ್ರಿಕೆಗಳಲ್ಲಿ ಮ್ಯುಟೇಶನ್ ಎಂಟ್ರಿ ಪ್ರಕಾರ ನಮೂದಾಗದೇ ಇರುವುದು ದುರಂತ. ಈ ಬಗ್ಗೆ ಹಲವು ವರ್ಷಗಳಿಂದ ಹಕ್ಕುದಾರರು ದಾಖಲೆ ಇಟ್ಟು ವಿನಂತಿಸಿಕೊAಡರೂ ಈ ತನಕ ಪಹಣಿಯಲ್ಲಿ ದುರಸ್ತಿಯಾಗದೆ ಇರುವುದು ದುಃಖದ ಸಂಗತಿಯಾಗಿದೆ.
ಸರ್ಕಾರ ಜನಸಾಮಾನ್ಯರ ಅನುಕೂಲಕ್ಕಾಗಿ ಇಲಾಖೆಯಡಿಯಲ್ಲಿ ಕಂದಾಯ ಅದಾಲತ್, ಕಡತ ವಿಲೇವಾರಿ ಸಪ್ತಾಹ, ಗ್ರಾಮ ವಾಸ್ತವ್ಯ ಇತ್ಯಾದಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದರು ಸಹ ಜನಸಾಮಾನ್ಯರಿಗೆ ಪ್ರಯೋಜನವಾಗಿರಲಿಲ್ಲ.
ಉತ್ತರ ಕನ್ನಡ ಜಿಲ್ಲೆ ಹಾಗೂ ತಾಲೂಕಿನಲ್ಲಿ ಅನ್ಯಾಯಕ್ಕೊಳಗಾದ ಇಂತಥ ಕಬ್ಜೆದಾರ ಯಾ ಅಧಿಭೋಗ ಹಕ್ಕುದಾರರ ಸಾವಿರಾರು ಕುಟುಂಬಗಳಿಗೆ ಅನ್ಯಾಯಕ್ಕೆ ಒಳಗಾದ ಈ ಕುಟುಂಬಗಳಿಗೆ ಇದರಿಂದ ಮುಕ್ತಿ ಹೊಂದುವುದು ಯಾವಾಗ? ಆದ್ದರಿಂದ ಜಿಲ್ಲೆ, ತಾಲ್ಲೂಕಿನಲ್ಲಿ ಅನ್ಯಾಯಕ್ಕೊಳಗಾದ ಕಬ್ಜೆದಾರ ಯಾ ಹಕ್ಕುದಾರರನ್ನು ಸೇರಿಸಿ ನ್ಯಾಯಕ್ಕೆ ಹೋರಾಟ ನಡೆಸುವುದು ಸರ್ಕಾರದ ಗಮನಕ್ಕೆ ತರುವುದು ಅನಿವಾರ್ಯವಾಗಿದೆ.

ಆದ ಕಾರಣ ಜಿಲ್ಲೆ, ತಾಲ್ಲೂಕಿನ ಬಡ ರೈತರ ಪಹಣಿ ಪತ್ರಿಕೆಗಳಲ್ಲಿ ಇಲಾಖೆಯ ತಾಂತ್ರಿಕ ದೋಷ ಇಲ್ಲವೇ ಇನ್ನಿತರ ಕಾರಣಗಳಿಂದ ಉಂಟಾದ ಲೋಪ ದೋಷಗಳನ್ನು ಸರಿಪಡಿಸಿ ಜನತೆಗೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ದಿವಂಗತ ಡಿ. ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ ಸಾರ್ವಜನಿಕವಾಗಿ ಮನವಿ ಸಲ್ಲಿಸಿದ್ದಾರೆ.

ಈ ಸಂಧರ್ಭದಲ್ಲಿ ದಿವಂಗತ ಡಿ. ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ಶಂಕರ ನಾಯ್ಕ ಬೆಟ್ಕೂರು, ನಾಗರಾಜ ನಾಯ್ಕ ಚೌಥನಿ, ಬೇಂಗ್ರೆ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯ ವಿ.ಜೆ. ಬೈರುಮನೆ, ಕೇಶವ ನಾರಾಯಣ ನಾಯ್ಕ ಮಾಗೋಡ, ರಾಮಾ ಮಠಾರಿ ಕೊಡ್ಲಗದ್ದೆ ಮುಂತಾದವರು ಇದ್ದರು.

error: