
ಭಟ್ಕಳ: ಕುಮಟಾ ಪಾಲಿಟೆಕ್ನಿಕ್ ಕಾಲೇಜು ಹಿಂಬದಿ ಗುಡ್ಡದಲ್ಲಿ ಫೇಕ್ ಬಾಂಬ್ ದೊರಕಿರುವ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯಾದ್ಯಂತ ಕಟ್ಟೆಚ್ಚರ ನಡೆಸಿರುವ ಜಿಲ್ಲಾ ಪೊಲೀಸರು ಇಂದು ಭಟ್ಕಳದ ರೈಲ್ವೆ ನಿಲ್ದಾಣ, ರೈಲ್ವೆ ಟ್ರ್ಯಾಕ್ , ರೈಲ್ವೆ ಸುರಂಗ, ಬಸ್ ನಿಲ್ದಾಣ, ಬಂದರು ಹಾಗೂ ವಿವಿಧ ಭಾಗದಲ್ಲಿ ಪೊಲೀಸರು ತಪಾಸಣೆ
ನಡೆಸಿದರು
ಸೂಕ್ಷ್ಮ ಪ್ರದೇಶವಾದ ಭಟ್ಕಳದಲ್ಲಿ ಭಾರೀ ತಪಾಸಣೆ ನಡೆಸುತ್ತಿರುವ ಕಾರವಾರದ ಬಾಂಬ್ ಸ್ಕ್ವಾಡ್
ಭಟ್ಕಳದ ರೈಲ್ವೇ ಸ್ಟೇಷನ್, ರೈಲ್ವೇ ಟ್ರ್ಯಾಕ್ ಹಾಗೂ ರೈಲ್ವೇ ಸಾಗುವ ಸುರಂಗಗಳಲ್ಲಿ ತಪಾಸಣೆಯನ್ನು
ಡಾಗ್ ಸ್ಕ್ವಾಡ್ ಬಾಂಬ್ ಸ್ಕ್ಬಾಡ್ನೊಂದಿಗೆ ಹಾಗೂ ಪೊಲೀಸರಿಂದ ಅಲ್ಲಲ್ಲಿ ತಪಾಸಣಾ ಕಾರ್ಯಾಚರಣೆ ನಡೆಸಿದರು. ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿನ ಹಿಂಬದಿ ಗುಡ್ಡದಲ್ಲಿ ಮೊನ್ನೆಯಷ್ಟೇ ಫೇಕ್ ಬಾಂಬ್ ಪತ್ತೆಯಾಗಿತ್ತು ಕಾರವಾರ ಬಾಂಬ್ ಸ್ಕ್ವಾಡ್ ಹಾಗೂ ಮಂಗಳೂರಿನ ಬಾಂಬ್ ಸ್ಕ್ವಾಡ್ ಕಾರ್ಯಾಚರಣೆ ನಡೆಸಿ ಫೇಕ್ ಎಂದು ಘೋಷಿಸಿತ್ತು ಈ ಹಿನ್ನೆಲೆಯಲ್ಲಿ ಎಚ್ಚರಗೊಂಡಿರುವ ಪೊಲೀಸರು.
ಈ ಸಂದರ್ಭದಲ್ಲಿ ಕಾರವಾರದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಅನಿಲ್ ನಾಯ್ಕ , ಜಗನಾಥ ನಾಯ್ಕ, ಪ್ರದೀಪ ನಾಯ್ಕ
ನಿತ್ಯಾನಂದ ಗೌಡ, ಗಣೇಶ್ ನಾಯ್ಕ, ಶೇಕು ಪೂಜಾರಿ ಹಾಗೂ ಭಟ್ಕಳ ನಗರ ಠಾಣೆ ಪೋಲಿಸ್ ಸಿಬ್ಬಂದಿ ರಾಜೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ