March 12, 2025

Bhavana Tv

Its Your Channel

ಹೆಬ್ಬಾವಿನೊಂದಿಗೆ ಚಿಕಿತ್ಸೆಗೆ ದಾಖಲಾದ ವ್ಯಕ್ತಿ

ಭಟ್ಕಳ: ಹೆಬ್ಬಾವು ಕಚ್ಚಿದರೂ ವಿಚಲಿತನಾಗದೆ ಹೆಬ್ಬಾವು ಹೊತ್ತುಕೊಂಡೇ ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿರುವ ಆಶ್ಚರ್ಯಕರ ಘಟನೆಯೊಂದು ಸೋಮವಾರ ರಾತ್ರಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಜರಗಿದೆ.

ಹೆಬ್ಬಾವು ಕಚ್ಚಿಕೊಂಡು ಗಾಯಗೊಂಡ ವ್ಯಕ್ತಿಯನ್ನು ಮಣ್ಕುಳಿ ಸೀತಾರಾಮ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ. ಭಟ್ಕಳದಲ್ಲಿ ಕೆಲದಿನಗಳಿಂದ ಮಳೆ ಸುರಿಯುತ್ತಿದ್ದು, ಸುರಿಯುತ್ತಿರುವ ಮಳೆಯಿಂದಾಗಿ ಈ ಮಧ್ಯೆ ಹೆಬ್ಬಾವೊಂದು ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಇರುವ ವ್ಯಕ್ತಿ ಒಬ್ಬರ ಮನೆಯ ಪಕ್ಕದಲ್ಲಿ ಇದ್ದು
ರಸ್ತೆಯಲ್ಲಿ ಮತ್ಯಾರಿಗಾದರೂ ಕಚ್ಚಿದರೆ ಅಪಾಯವಾಗುತ್ತದೆ ಎಂದು ತಿಳಿದ ಮಣ್ಕುಳಿ ಸೀತಾರಾಮ ನಾಯ್ಕ ಎಂಬ ವ್ಯಕ್ತಿ ತನ್ನ ಕೆಲವು ಸ್ನೇಹಿತರ ಸಹಾಯದಿಂದ ಹಾವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ.
ನಂತರ ಸೀತಾರಾಮ ನಾಯ್ಕಗೆ ಅವರಿಗೆ ಹಾವು ಕಚ್ಚಿದೆ. ಹೆಬ್ಬಾವಿನಿಂದ ಕಚ್ಚಿಸಿಕೊಂಡ ಇವರು ವಿಚಲಿತಗೊಳ್ಳದೆ , ಆರೇಳು ಅಡಿ ಉದ್ದದ ಹೆಬ್ಬಾವವನ್ನು ತಮ್ಮ ಸ್ನೇಹಿತರ ಸಹಾಯದೊಂದಿಗೆ ಹಿಡಿದುಕೊಂಡೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಬಂದು ಹಾವನ್ನು ಹಿಡಿದುಕೊಂಡು, ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದರು. ಸೀತಾರಾಮ ಅವರಿಗೆ ಭಟ್ಕಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ,

error: