April 29, 2024

Bhavana Tv

Its Your Channel

ಶಿರಸಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಗದೀಶ ಯಾಜಿ ಬೈಲೂರುರವರಿಗೆ “ಆಯುರ್ವೇದ ರತ್ನ” ಪ್ರಶಸ್ತಿ

ಭಟ್ಕಳ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆರನೇ ರಾಷ್ಟ್ರೀಯ ಆಯುರ್ವೆದ ದಿನಾಚರಣೆಯಂದು ಬೆಂಗಳೂರಿನ ಧನ್ವಂತರಿ ಸಭಾಂಗಣದಲ್ಲಿ ಶಿರಸಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಗದೀಶ ಯಾಜಿ ಬೈಲೂರು ಅವರನ್ನು ಡಾ. ವೀರೇಂದ್ರ ಹೆಗ್ಗಡೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲದ ವತಿಯಿಂದ “ಆಯುರ್ವೇದ ರತ್ನ” ಪ್ರಶ್ತಿಯನ್ನು ನೀಡಿ ಗೌರವಿಸಿದರು.

ಭಟ್ಕಳ ತಾಲೂಕಿನ ಬೈಲೂರಿನ ದಿ. ವಿಷ್ಣು ಯಾಜಿ ಹಾಗೂ ಸರಸ್ವತಿ ಅವರ ಪುತ್ರರಾದ ಡಾ. ಜಗದೀಶ ವಿಷ್ಣು ಯಾಜಿ ಅವರು ತಮ್ಮ ಆಯುರ್ವೇದ ವೈದ್ಯಕೀಯ ಪದವಿಯನ್ನು ಮುಗಿಸಿ ಪ್ರಥಮವಾಗಿ ದಾವಣಗೆರೆಯ ಗ್ರಾಮೀಣ ಪ್ರದೇಶವಾದ ಕಾಡಜ್ಜಿಯಲ್ಲಿ ಸರಕಾರಿ ಸೇವೆಗೆ ಸೇರಿದ್ದು ನಂತರ ಕಾರವಾರ, ಬೈರುಂಭೆ ಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಶಿರಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ೨೫ ವರ್ಷಗಳ ಅತ್ಯತ್ತಮ ಸೇವೆಗೆ ಇವರಿಗೆ ಆಯುರ್ವೆದ ರತ್ನ ಪ್ರಶಸ್ತಿ ದೊರಕಿರುವುದು ಜಿಲ್ಲೆಗೆ ಹೆಮ್ಮೆಯಾಗಿದೆ. ತಮ್ಮ ಉತ್ತಮ ಸೇವೆಯಿಂದ ಹೆಸರು ಗಳಿಸಿದ್ದ ಡಾ. ಯಾಜಿ ಅವರು ತಾವು ಹೋದಲ್ಲೆಲ್ಲಾ ಆಯುರ್ವೇದ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ಮಾಡಿದ್ದಲ್ಲದೇ, ಜನರು ಆಯುರ್ವೇದ ಚಿಕಿತ್ಸೆಯಿಂದ ಗುಣಮುಖರಾಗುವುದರಿಂದ ಇವರು ಸೇವೆ ಸಲ್ಲಿಸಿದ್ದ ಊರಿನವರು ಇಂದಿಗೂ ಇವರಿದ್ದಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿರುವುದು ಇವರ ಉತ್ತಮ ಸೇವೆಗೊಂದು ಉದಾಹರಣೆಯಾಗಿದೆ. ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ ಶೆಟ್ಟಿ, ಕುಲಸಚಿವ ನಾಗರಾಜ, ಕುಲಸಚಿವ (ಮೌಲ್ಯಮಾಪನ)ಡಾ. ರಾಮಕೃಷ್ಣ ರೆಡ್ಡಿ, ಹಣಕಾಸು ಅಧಿಕಾರಿ ಮಂಜುನಾಥ ಹೆಗಡೆ, ಆಯುರ್ವೇದ ವಿಭಾಗದ ಡೀನ್ ಡಾ. ಶ್ರೀನಿವಾಸ ಬನ್ನಿಗೋಳ ಮುಂತಾದವರು ಉಪಸ್ಥಿತರಿದ್ದರು.

error: