May 15, 2024

Bhavana Tv

Its Your Channel

ಹರ ಘರ ದಸ್ತಕ ಅಭಿಯಾನದಡಿಯಲ್ಲಿ ಮನೆಮನೆಗೆ ತೆರಳಿ ವ್ಯಾಕ್ಸಿನ್ ನೀಡುವ ಅಭಿಯಾನಕ್ಕೆ ಸಹಕಾರ ನೀಡದ ಜನ

ಭಟ್ಕಳ: ಹರ ಘರ ದಸ್ತಕ ಎನ್ನುವ ಅಭಿಯಾನದಡಿಯಲ್ಲಿ ಮನೆಮನೆಗೆ ತೆರಳಿ ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ಆರಂಭವಾಗಿದ್ದು ಮನೆಗೆ ತೆರಳಿದ ಆಸ್ಪತ್ರೆಯ ಸಿಬ್ಬಂದಿಗೆ ಜನರು ಸಹಕಾರ ನೀಡದೆ ವಾಪಾಸು ಕಳುಹಿಸುತ್ತಿದ್ದಾರೆ ಎಂದು ಡಾ. ಸವಿತಾ ಕಾಮತ ವಿಷಾಧ ವ್ಯಕ್ತಪಡಿಸಿದರು.

ಅವರು ಸೋಮವಾರ ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ನ ೧೬ರಂದು ಸರ್ಕಾರ ಹರ ಘರ ದಸ್ತಕ ಅಭಿಯಾನದಡಿಯಲ್ಲಿ ವ್ಯಾಕ್ಸಿನ ನೀಡುವ ಅಭಿಯಾನ ಆರಂಭಿಸಿದೆ. ಈ ಅಭಿಯಾನದಡಿಯಲ್ಲಿ ಮನೆ ಮನೆಗೆ ತೆರಳಿದರೆ ಜನರು ನಮ್ಮನ್ನು ಅನುಮಾನದಿಂದ ನೋಡುತ್ತಿದ್ದಾರೆ. ವ್ಯಾಕ್ಸಿನ ನೀಡಲು ಬಂದರೆ ತೆಗೆದುಕೊಳ್ಳುತ್ತಿಲ್ಲ. ನಿಮ್ಮ ಬಳಿ ಆದೇಶವಿದೆಯೆ.? ಯಾರು ಹೇಳಿದ್ದು, ನಮಗೆ ಅವಶ್ಯಕತೆ ಇಲ್ಲ ಎಂದು ಸಿಬ್ಬಂದಿಯನ್ನು ವಾಪಾಸ್ಸು ಕಳುಹಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಆದರೆ ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಆತಂಕ ಎದುರಾಗುವ ಎಲ್ಲ ಸಂಭವನಿಯತೆ ಇದೆ. ಈಗಾಗಲೆ ಕೆಲವು ದೇಶಗಳಲ್ಲಿ ಮೂರನೇ ಅಲೆಯ ಭೀತಿ ತಟ್ಟಿದೆ. ನಮ್ಮ ತಾಲೂಕಿನಲ್ಲಿ ಶೇ. ೭೨% ವ್ಯಾಕ್ಸಿನ್ ಪಡೆದಿದ್ದರೂ ಉಳಿದ ೨೮% ಪ್ರತಿಶತ ಜನರಿಂದ ಅಪಾಯ ತಪ್ಪಿದ್ದಲ್ಲ.ನಾವು ಮನೆಗೆ ತೆರಳಿ ವ್ಯಾಕ್ಸಿನ್ ನೀಡಲು ಹೋದರೆ ನೀವು ನಮ್ಮನ್ನು ಬಲವಂತ ಮಾಡುವಂತಿಲ್ಲ ಎಂದು ಜನರು ಹೇಳುತ್ತಿದ್ದಾರೆ. ಬಲವಂತ ಮಾಡುವಂತಿಲ್ಲವಾದರೂ ಇದು ಅಗತ್ಯ. ದಯವಿಟ್ಟು ವ್ಯಾಕ್ಸಿನ್ ಪಡೆಯದವರು ನಮಗೆ ಸಹಕರಿಸಿ. ಇದು ಕೇವಲ ಆರೋಗ್ಯ ಇಲಾಖೆಯ ವಿಷಯವಲ್ಲ. ಎಲ್ಲಾ ಇಲಾಖೆಗಳು ಪ್ರಯತ್ನ ವ್ಯಾಕ್ಸಿನೇಶನ್ ಗಾಗಿ ಇನ್ನಿಲ್ಲದಂತೆ ಪ್ರಯತ್ನ ಮಾಡುತ್ತಿದೆ. ಆದರೆ ಜನರ ಸ್ಪಂದನೆ ನೀರಿಕ್ಷಿತ ಮಟ್ಟದಲ್ಲಿ ಇಲ್ಲ ಎಂದರು.
ಸೋಮವಾರ ಎರಡು ತಂಡವನ್ನು ರಚಿಸಿ ಲಸಿಕೆ ನೀಡಲು ಕಳುಹಿಸಿದರೆ ಲಸಿಕಾಕರಣದ ಸಂಖ್ಯೆ ಎರಡಂಕಿ ದಾಟಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು. ಲಸಿಕೆ ನೀಡಲು ಸಿಬ್ಬಂದಿ ಮನೆಗೆ ಬಂದರೆ ಅವರನ್ನು ಹಿಂದೆ ಕಳುಹಿಸದೆ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.

error: