
ಭಟ್ಕಳ: ನಮ್ಮ ಭಾರತೀಯ ಸೇನೆಯ ಹೆಮ್ಮೆಯ ಸೇನಾ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಹಾಗೂ ಸೇನಾ
ಅಧಿಕಾರಿಗಳು ವೀರಯೋದರು ಹೆಲಿಕಾಪ್ಟರ್ ದುರಂತದಲ್ಲಿ ವಿಧಿವಶರಾಗಿರುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ.
ಇAದು ನಾವೆಲ್ಲರೂ ಶಾಂತಿಯುತವಾಗಿ ಜೀವನ ನಡೆಸಲು ತಮ್ಮನ್ನು ಸುದೀರ್ಘ ದೇಶಸೇವೆಯಲ್ಲಿ ತೊಡಗಿಸಿಕೊಂಡು ನಮ್ಮನ್ನು ಅಗಲಿರುವ ಮಹಾನ್ ಚೇತನಗಳ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಮೃತರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಭಕ್ತಿಯಿಂದ ಪ್ರಾರ್ಥಿಸಿ ಭಟ್ಕಳ ತಾಲೂಕು ಮಾಜಿ ಸೈನಿಕರ ಸಂಘ (ರಿ) ದ ವತಿಯಿಂದ ಇನ್ನಿತರ ಸಂಘ ಸಂಸ್ಥೆಗಳ ಜೊತೆಗೂಡಿ ಭಟ್ಕಳ ನಗರದ ಐಬಿ ಗೆ ತೆರಳುವ ಹೈವೇ ಕ್ರಾಸ್ ನಲ್ಲಿ (ಅಮರ್ ಜವಾನ್ ಸ್ಥಳ) ಶೃದ್ದಾಂಜಲಿ ಸಲ್ಲಿಸಿ ಪುಷ್ಪ ನಮನ ಮಾಡಲಾಯಿತು.
ಶೃದ್ದಾಂಜಲಿ ಸಭೆಯಲ್ಲಿ ಎಲ್ಲಾ ಮಾಜಿ ಸೈನಿಕರು, ಸಂಘ ಸಂಸ್ಥೆಗಳ ಪ್ರಮುಖರು , ಅಧಿಕಾರಿಗಳು, ಮಾಧ್ಯಮ ಮಿತ್ರರು ಹಾಗೂ ಸಾರ್ವಜನಿಕ ದೇಶಭಕ್ತ ಬಂಧುಗಳು ಉಪಸ್ಥಿತರಿದ್ದು ದೀಪ ಬೆಳಗಿಸಿ ನುಡಿನಮನ ಸಲ್ಲಿಸಿ, ಮೌನಾಚರಣೆ ಮಾಡಿ ಪುಷ್ಪ ನಮನ ಮಾಡಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ