May 15, 2024

Bhavana Tv

Its Your Channel

ಹೆಬಳೆಯ ಶ್ರೀ ಶೇಡಬರಿ ದೇವಸ್ಥಾನದಲ್ಲಿ ಸಂಪನ್ನಗೊOಡ ಕಾರ್ತಿಕ ದೀಪೋತ್ಸವ

ಭಟ್ಕಳ ಹೆಬಳೆಯ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳ ಮೂಲಕ ವಿಜೃಂಭಣೆಯಿoದ ಜರುಗಿತು.

ಮುಂಜಾನೆಯಿAದಲೇ ಊರಿನ ಹಾಗೂ ಪರ ಊರಿನ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಬಂದು ಶ್ರೀ ಜಟಕಾ ಮಹಾಸತಿ ದೇವರುಗಳಿಗೆ ತಮ್ಮ ಇಷ್ಟಾರ್ಥದ ಸೇವೆಗಳನ್ನು ಮಾಡಿಸುತ್ತಿರುವುದು ಕಂಡು ಬಂದಿತು.
ಮಧ್ಯಾಹ್ನ ಕ್ಕೆ ಶ್ರೀ ಜಟಕಾ, ಮಹಾಸತಿ, ಪ್ರಧಾನ ಹಾಗೂ ಬ್ರಹ್ಮ ದೇವರುಗಳಿಗೆ ಮಹಾಪೂಜೆ ನಡೆಯಿತು. ಇದಕ್ಕೂ ಮುನ್ನ ಶ್ರೀ ಕ್ಷೇತ್ರದ ಸುತ್ತಲಿನ ಪರಿವಾರ ದೇವರುಗಳಿಗೆ ಧೂಪನೆಣೆ ಹಾಕುವುದರ ಮೂಲಕ ಕೆಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಹಾಪೂಜೆಯ ಬಳಿಕ ನೆರೆದಿದ್ದ ಭಕ್ತರುಗಳಿಗೆಲ್ಲ ಪ್ರಸಾದ ವಿತರಿಸಲಾಯಿತು. ಜಟಕಾ ಮತ್ತು ಮಹಾಸತಿ ದೇವರುಗಳಿಗೆ ಹೂವಿನ ಅಲಂಕಾರದ ಜೊತೆಗೆ ಬೆಳ್ಳಿ ಹಾಗೂ ಚಿನ್ನದ ಒಡವೆಗಳನ್ನು ತೊಡಿಸಲಾಗಿತ್ತು. ಪ್ರಧಾನ ಹಾಗೂ ಬ್ರಹ್ಮ ದೇವರುಗಳು ಬಗೆಬಗೆಯ ಪುಷ್ಪಗಳಿಂದ ಅಲಂಕೃತಗೊoಡಿದ್ದವು.


ಸಾಯAಕಾಲ ಸೂರ್ಯಾಸ್ತದ ಬಳಿಕ ಶಿರಾಲಿಯ ಚಿತ್ರಾಪುರ ಸಂಸ್ಥಾನದ ಪ್ರತಿನಿಧಿಗಳಿಂದ ಜಟಕಾ ದೇವರ ಮುಂದೆ ಪ್ರಾಂಗಣದಲ್ಲಿ ಇರಿಸಲಾಗಿದ್ದ ಬೃಹತ್ ತುಪ್ಪದ ದೀಪವನ್ನು ಪ್ರಜ್ವಲಿಸುವ ಮೂಲಕ ದೀಪಾರಾಧನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತದನಂತರ ಭಕ್ತರೆಲ್ಲರೂ ದೇವಸ್ಥಾನದ ಆವಾರದಲ್ಲಿ ಸುತ್ತಲೂ ಇಟ್ಟಿರುವ ದೀಪಗಳನ್ನು ಬೆಳಗಿಸುವುದರ ಮೂಲಕ ಶ್ರೀ ದೇವರುಗಳಲ್ಲಿ ತಮ್ಮ ಇಷ್ಟಾರ್ಥವನ್ನು ಕೋರಿಕೊಳ್ಳುವ ದೃಶ್ಯ ಎಲ್ಲೆಡೆ ಕಂಡುಬAತು. ದೀಪೋತ್ಸವ ಸಮಿತಿಯವರಿಂದ ಭಕ್ತರಿಗೆ ವಿಶೇಷವಾಗಿ ತುಪ್ಪದ ದೀಪದ ಸೇವೆಯ ಕೌಂಟರ್ ನ್ನು ತೆರೆಯಲಾಗಿತ್ತು. ಕೆಲವು ಭಕ್ತರು ತಾವುಗಳೇ ಸ್ವತಃ ಹಿತ್ತಾಳೆಯ ಕಾಲುದೀಪಗಳನ್ನು ತಂದು ಶ್ರೀ ದೇವರಲ್ಲಿ ಪೂಜಾರಿಯವರ ಮೂಲಕ ಸಂಕಲ್ಪ ಮಾಡಿಸಿ ಅದರಲ್ಲಿ ಬತ್ತಿ ಹಾಗೂ ತುಪ್ಪವನ್ನು ಹಾಕಿ ದೀಪ ಬೆಳಗಿ ಆ ಹಿತ್ತಾಳೆಯ ದೀಪಗಳನ್ನು ದೇವಸ್ಥಾನಕ್ಕೆ ತಮ್ಮ ಸೇವೆಯಾಗಿ ನೀಡುವುದರ ಮೂಲಕ ಭಕ್ತಿಯನ್ನು ಮೆರೆದರು.
ಪ್ರತಿವರ್ಷದಂತೆ ಈ ವರ್ಷವೂ ಕೂಡ ಸ್ಥಳೀಯ ಯುವಕ ಯುವತಿಯರು ಸೇರಿ ದೇವಸ್ಥಾನದ ಪ್ರಾಂಗಣದಲ್ಲಿ ರಚಿಸಿರುವ ಬೃಹತ್ ಶಿವಲಿಂಗಾಕಾರದ ರಂಗೋಲಿಯು ಬಂದAತಹ ಭಕ್ತಾದಿಗಳನ್ನು ತನ್ನೆಡೆಗೆ ಆಕರ್ಷಿಸುತ್ತಲೇ ಇತ್ತು. ದೇವಸ್ಥಾನದ ಸುತ್ತಲೂ ಮಣ್ಣಿನ ಹಣತೆಗಳ ಜೊತೆಗೆ ವಿದ್ಯುದ್ದೀಪಗಳೂ ಕೂಡ ಝಗಮಗಿಸುತ್ತಿದ್ದವು. ಬಾನಂಗಳದಲ್ಲಿ ಪರಿಸರಕ್ಕೆ ಪೂರಕವಾದ ಹಸಿರು ಸಿಡಿಮದ್ದುಗಳ ನರ್ತನ ಕೂಡ ನಡೆದವು. ರಾತ್ರಿ ಊರಿನ ಭಕ್ತರಿಂದ ಭಜನಾ ಕಾರ್ಯಕ್ರಮ ನಡೆದವು.
ಈ ಎಲ್ಲ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಹಾಗೂ ದೀಪೋತ್ಸವ ಸಮಿತಿಯ ಅಧ್ಯಕ್ಷರುಗಳು ಹಾಗೂ ಸರ್ವ ಸದಸ್ಯರುಗಳು, ಪೂಜಾರಿಗಳು, ಊರಿನ ಹಾಗೂ ಪರ ಊರಿನ ಅನೇಕ ಭಕ್ತಾದಿಗಳು ಹಾಜರಿದ್ದರು.

error: