May 15, 2024

Bhavana Tv

Its Your Channel

ಭಟ್ಕಳ ತಾಲೂಕಿನ ಮಾವಿನಕುರ್ವೆ ಬಂದರು ಪ್ರದೇಶದಲ್ಲಿ ತುಂಬಿಕೊOಡಿರುವ ಹೂಳು; ಲಂಗರು ಹಾಕಿದ್ದ ಬೋಟುಗಳು ಒಂದಕ್ಕೊoದು ಡಿಕ್ಕಿಯಾಗಿ ಹಾನಿ

ಭಟ್ಕಳ ತಾಲೂಕಿನ ಮಾವಿನಕುರ್ವೆ ಬಂದರು ಪ್ರದೇಶದಲ್ಲಿ ತುಂಬಿಕೊoಡಿರುವ ಹೂಳಿನಿಂದಾಗಿ ದಕ್ಕೆಯಂಚಿನಲ್ಲಿ ಕಳೆದ ಕೆಲವು ದಿನಗಳಿಂದ ನೀರಿನ ಪ್ರಮಾಣದಲ್ಲಿ ಭಾರೀ ಇಳಿತ ಕಂಡುಬoದಿದೆ. ಇದರ ಪರಿಣಾಮವಾಗಿ ಬಂದರಿನಲ್ಲಿ ಲಂಗರು ಹಾಕಿದ್ದ ಬೋಟುಗಳು ಒಂದಕ್ಕೊAದು ಡಿಕ್ಕಿಯಾಗಿ ಹಾನಿಯಾಗಿದೆ.

ಕಳೆದ ಅನೇಕ ವರ್ಷಗಳಿಂದ ಬಂದರು ಧಕ್ಕೆಯಲ್ಲಿ ತುಂಬಿಕೊoಡಿರುವ ಟನ್‌ಗಟ್ಟಲೇ ಹೂಳಿನ ಹಿನ್ನೆಲೆ ಪ್ರತಿ ವರ್ಷ ಡಿಸೆಂಬರ್ ವೇಳೆ ನೀರಿನ ಪ್ರಮಾಣ ಇಳಿಕೆಯಾಗಿ ನಿಲ್ಲಿಸಿಟ್ಟ ಬೋಟುಗಳಿಗೆ ಹಾನಿ ಸಂಭವಿಸುತ್ತಿದೆ. ಬೋಟ್ ಮಾಲೀಕರು, ಮೀನುಗಾರರು ಇಲಾಖೆಯ ಅಧಿಕಾರಿಗಳಿಂದ ಪ್ರತಿ ವರ್ಷವೂ ಸಹ ಸರಕಾರ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ಯಾವುದಕ್ಕೂ ಸ್ಪಂದನೆ ಮಾತ್ರ ಸಿಗುತ್ತಿಲ್ಲವಾಗಿದೆ. ಇದು ನೈಸರ್ಗಿಕ ಬಂದರಾಗಿದ್ದರೂ ಸಹ ಹೂಳಿನಿಂದಾಗಿ ಮೀನುಗಾರರು ಸಮಯ ಸಂದರ್ಭಗಳನ್ನು ನೋಡಿಯೇ ಮೀನುಗಾರಿಕೆಗೆ ತೆರಳುವ ಅನಿವಾರ್ಯತೆ ಇದೆ. ಬಂದರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಹೂಳು ತುಂಬಿದ್ದು, ಮೀನುಗಾರರು ಹೊಳೆತ್ತುವಂತೆ ಸರಕಾರವನ್ನು ಆಗ್ರಹಿಸುತ್ತಲೇ ಬಂದಿದ್ದಾರೆ.
ಆದರೆ ಕಣ್ಣು ಕಿವಿ ಏನು ಇಲ್ಲದಂತೆ ಮೀನುಗಾರರ ಮನವಿಗೆ ಸ್ಪಂದನೆ ನೀಡುತ್ತಿಲ್ಲದಿರುವುದು ಮೀನುಗಾರರ, ಬೋಟ್ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಬೋಟ್ ಮಾಲೀಕ ಪುರಂದರ ಖಾರ್ವಿ, ಮಾತನಾಡಿ ಒಂದು ಬಾರಿ ದೊಡ್ಡ ಪ್ರಮಾಣದಲ್ಲಿ ಹೂಳು ತೆಗೆಸಿದ್ದಲ್ಲಿ ಸುಮಾರು ೮ ೧೦ ವರ್ಷಗಳ ಕಾಲ ಮತ್ತೆ ಹೂಳು ತುಂಬುವುದಿಲ್ಲ. ಆದರೆ ಸರಕಾರಕ್ಕೆ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳಿಗೆ ನಮ್ಮ ಕಷ್ಟ ಯಾಕೆ ಅರ್ಥವಾಗುತ್ತಿಲ್ಲ? ಸರಕಾರ ತಕ್ಷಣ ೨ ಕೋಟಿ ಬಿಡುಗಡೆ ಮಾಡಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಬೇಕು ಹಾಗೂ ಬ್ರೇಕ್ ವಾಟರ್ ಕಾರ್ಯವನ್ನು ಮಾಡಬೇಕು. ಇಲ್ಲವಾದಲ್ಲಿ ಕರಾವಳಿಯ ಮೀನುಗಾರರು ಸಹ ರೈತರ ಪ್ರತಿಭಟನೆಯಂತೆ ಹೋರಾಟಕ್ಕಿಳದು, ಮುಂಬರುವ ಚುನಾವಣೆ ಬಹಿಷ್ಕಾರದ ದಾರಿ ಕಂಡುಕೊಳ್ಳಬೇಕಾಗುತ್ತದೆ.
ಎAದರು.
ಈವರೆಗೆ ಬಂದರಿನಲ್ಲಿ ಹೂಳೆತ್ತುವ ಕಾರ್ಯಕ್ಕೆ ಹಣ ಮಂಜೂರಿಯಾಗಲೇ ಇಲ್ಲ. ಕಳೆದ ಬಾರಿ ಹೂಳೆತ್ತುವ ಕುರಿತು ಮಾಡಿ ಕಳುಹಿಸಿದ ೪.೮೫ ಕೋಟಿ ರೂಪಾಯಿ ಅಂದಾಜು ವೆಚ್ಚದ ಕಾಮಗಾರಿಗೆ ಇನ್ನೂ ತನಕ ಮಂಜೂರಿ ದೊರೆಯದಿರುವುದರಿಂದ ಕಾಮಗಾರಿ ಬಾಕಿಯಾಗಿಯೇ ಉಳಿದಿದೆ. ಇದು ಇಲ್ಲಿನ ಜನಪ್ರತಿನಿಧಿಗಳು ಮೀನುಗಾರರ ಮೇಲೆ ತೋರುತ್ತಿರುವ ದಿವ್ಯ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ. ಇನ್ನು ಸಮಾಜ ಕಲ್ಯಾಣ ಸಚಿವ ಮೀನುಗಾರಿಕೆ ಇಲಾಖೆಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಳೆದ ಒಂದು ತಿಂಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದಾಗ ಬಂದರಿನ ಹೂಳೆತ್ತುವ ಕಾರ್ಯಕ್ಕೆ ಒಂದು ವಾರದೊಳಗೆ ಚಾಲನೆ ನೀಡುವುದಾಗಿ ಭರವಸೆ ನೀಡಿ ತೆರಳಿದ್ದರು. ಆದರೆ ಈವರೆಗೆ ಯಾವುದೇ ಕೆಲಸ ಆಗದೇ ಇರುವುದು ಈ ಭಾಗದ ಮೀನುಗಾರರ ಕೆಂಗಣ್ಣಿಗೆ ಕಾರಣವಾಗಿದೆ.
ಮೀನುಗಾರರ ಹಿರಿಯ ಮುಖಂಡ ಮಂಜುನಾಥ ಖಾರ್ವಿ ಮಾತನಾಡಿ ಮಾವಿನಕುರ್ವೆ ಬಂದರಿನಲ್ಲಿ ನೂರಾರು ಬೋಟುಗಳು ಆಶ್ರಯ ಪಡೆಯುತ್ತವೆ. ನೀರಿನ ಇಳಿತದ ಸಮಯದಲ್ಲಿ ಬೋಟುಗಳು ಅತಂತ್ರವಾಗುತ್ತಿದ್ದು, ಒಂದಕ್ಕೊದು ಡಿಕ್ಕಿಯಾಗಿ ಹಾನಿಯಾಗುತ್ತಿದೆ. ಹೂಳೆತ್ತುವ ಕಾರ್ಯ ಕೈಗೆತ್ತಿಕೊಳ್ಳದಿದ್ದರೆ, ತೀವ್ರ ಸಂಕಷ್ಟಕ್ಕೊಳಗಾಗಲಿದ್ದಾರೆ. ಈಗ ಸುಮಾರು ೧೦ ಅಡಿಗಳಷ್ಟು ಆಳ ಹಾಗೂ ಸುಮಾರು ೨- ೩ ಕಿ.ಮೀ. ಸುತ್ತುವರಿದು ಹೂಳು ತೆಗೆಯಬೇಕಿದೆ ಎಂದರು. ತಾಲೂಕಿನಲ್ಲಿ ಮೀನುಗಾರಿಕಾ ಇಲಾಖೆಯ ಅಂಕಿ ಅಂಶಗಳನ್ನು ನೋಡಿದಾಗ ವರ್ಷದಿಂದ ವರ್ಷಕ್ಕೆ ಮೀನುಗಾರಿಕಾ ಇಳುವರಿ ಕಡಿಮೆಯಾಗುತ್ತಾ ಬಂದಿದ್ದು, ಮೀನುಗಾರರಿಗೆ ಇನ್ನಷ್ಟು ಸಂಕಷ್ಟ ಎದುರಾದಂತಾಗಿದೆ. ಈ ರೀತಿ ಮೀನುಗಾರಿಕೆ ಸಮಸ್ಯೆ ಇರುವಾಗ, ಹಾನಿಯಾದ ಬೋಟ್ ಸರಿಪಡಿಸಲು ೪- ೫ ಲಕ್ಷ ವೆಚ್ಚ ಎಲ್ಲಿಂದ ಭರಿಸಬೇಕು ಎಂಬುದು ಮಾಲೀಕರ ಪ್ರಶ್ನೆಯಾಗಿದೆ.
ತೆಂಗಿನಗುAಡಿ ಬಂದರಗಾಗಿ ಮಾಣನಕುರ್ವೆ ನಿರ್ಲಕ್ಷ. ಸದ್ಯ ತೆಂಗಿನಗುAಡಿ ಭಾಗದಲ್ಲಿ ಮೀನುಗಾರಿಕಾ ಬಂದರು ಸಿದ್ಧಗೊಳ್ಳುತ್ತಿರುವ ಹಿನ್ನೆಲೆ ಇಲ್ಲಿನ ಮಾವಿನಕುರ್ವೆ ಬಂದರನ್ನು ನಿರ್ಲಕ್ಷಿಸುತ್ತಿದ್ದಾರಾ ಎಂಬ ಅನುಮಾನವು ಸಹ ಮೀನುಗಾರರಲ್ಲಿ ಮೂಡುತ್ತಿದೆ. ಭಟ್ಕಳ ಮಾವಿನಕುರ್ವೆ ಬಂದರನ್ನು ಸರಕು ಸಾಗಾಟದ ಬಂದರನ್ನಾಗಿ ಬದಲಾಯಿಸುವ ಚರ್ಚೆಗಳು ಕೇಳಿ ಬರುತ್ತಿವೆಯಾದರು, ಯಾವುದು ಸತ್ಯ ಸುಳ್ಳು ಎಂಬುದು ಸರಕಾರ, ಜನಪ್ರತಿನಿಧಿಗಳೇ ಉತ್ತರಸಬೇಕಾಗಿದೆ.

error: