May 15, 2024

Bhavana Tv

Its Your Channel

ಭಟ್ಕಳ ತಾಲ್ಲೂಕಿನಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಶೇಕಡಾ ೯೯.೦೩ ಮತದಾನ

ಭಟ್ಕಳ: ೧೬ ಗ್ರಾಮ ಪಂಚಾಯ್ತಿ ಹಾಗು ಪುರಸಭೆ ಸೇರಿದಂತೆ ತಾಲ್ಲೂಕಿನ ೧೭ ಕಡೆಗಳಲ್ಲಿ ಚುನಾಯಿತ ಸದಸ್ಯರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ತಾಲ್ಲೂಕಿನ ೩೦೮ ಚುನಾಯಿತ ಸದಸ್ಯರಲ್ಲಿ ೧೪೮ ಪುರುಷ ಸದಸ್ಯರು, ೧೫೭ ಮಹಿಳಾ ಸದಸ್ಯರು ತಮ್ಮ ಹಕ್ಕನ್ನು ಚಲಾಯಿಸಿದರು. ಪಟ್ಟಣದ ಪುರಸಭೆ, ಶಿರಾಲಿ ಹಾಗೂ ಹೆಬಳೆ ಗ್ರಾಮ ಪಂಚಾಯ್ತಿಗಳಲ್ಲಿ ತಲಾ ಒಬ್ಬರು ಮತದಾನ ಮಾಡಿಲ್ಲ. ಶಿರಾಲಿ ಗ್ರಾಮ ಪಂಚಾಯ್ತಿ ಓರ್ವ ಸದಸ್ಯ ಆನಾರೋಗ್ಯ ಕಾರಣದಿಂದ ಮತಗಟ್ಟೆಗೆ ಬರಲಿಲ್ಲ. ಪಟ್ಟಣದ ಪುರಸಭೆಯ ಮಹಿಳಾ ಸದಸ್ಯೆ ಹಾಗೂ ಹೆಬಳೆಯ ಮಹಿಳಾ ಸದಸ್ಯೆ ಪರ ಊರಿನಲ್ಲಿ ಇರುವ ಕಾರಣ ಮತ ಚಲಾಯಿಸಿಲಿಲ್ಲ.
ಬಹುತೇಕ ಗ್ರಾಮ ಪಂಚಾಯ್ತಿ ಹಾಗೂ ಪುರಸಭೆ ಸದಸ್ಯರು ಮಧ್ಯಾಹ್ನದ ಒಳಗೆ ತಮ್ಮ ಹಕ್ಕನ್ನು ಚಲಾಯಿಸಿದರು. ಭಟ್ಕಳ ಶಾಸಕ ಸುನೀಲ್ ತನ್ನ ಬೆಂಬಲಿಗ ಗ್ರಾಮಪಂಚಾಯ್ತಿ ಸದಸ್ಯರೊಂದಿಗೆ ಶಿರಾಲಿಯ ಪೇಟೆ ಮಾರುತಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ನಂತರ ಭಟ್ಕಳ ಪುರಸಭೆಗೆ ಬಂದು ಮತ ಚಲಾಯಿಸಿದರು.
ಶಾಂತತೆಯಿದ ಮಗಿದ ಚುನಾವಣೆ :
ತಾಲ್ಲೂಕಿನ ೧೭ ಮತಗಟ್ಟೆಗಳಲ್ಲಿ ಎಲ್ಲಿಯೂ ಕೂಡ ಗಲಾಟೆ ನಡೆಯದೆ ಶಾಂತಿಯುತವಾಗಿ ಮತದಾನ ನಡೆಯಿತು. ಪ್ರತಿ ಮತಗಟ್ಟೆಯನ್ನು ವಿಡಿಯೋ ಚಿತ್ರಿಕರಣ ಮಾಡಲಾಗಿತ್ತು. ತಾಲ್ಲೂಕು ಚುನಾವಣಾ ಅಧಿಕಾರಿ ತಹಶೀಲ್ದಾರ ರವಿಚಂದ್ರ ಎಸ್. ಶಾಂತಿಯುವ ಮತದಾನಕ್ಕೆ ಎಲ್ಲಾ ರೀತಿಯ ಮುಂಜಾಗ್ರತ ಕ್ರಮ ಕೈಗೊಂಡಿದ್ದರು.

error: