
ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಹಾಗೂ ಅವರ ಬೆಂಬಲಿಗರು ಮಾಲಾಧಾರಿಗಳಾಗಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.
ಶಾಸಕರೂ ಸೇರಿದಂತೆ ಒಟ್ಟೂ 40 ಜನರು ಕಳೆದ ಜ.15 ರಂದು ರೈಲಿನಲ್ಲಿ ಶಬರಿಮಲೆಗೆ ಪ್ರಯಾಣ ಬೆಳೆಸಿದರು. ಅಯ್ಯಪ್ಪ ಸ್ವಾಮಿಯ ದರ್ಶನದ ನಂತರ ಜ.17ರಂದು ಕೇರಳದಿಂದ ಹೊರಟಿದ್ದು, ಇಂದು ಭಟ್ಕಳವನ್ನು ತಲುಪಲಿದ್ದಾರೆ.
ಈ ಹಿಂದಿನಿAದಲೂ ಅಯ್ಯಪ್ಪ ಸ್ವಾಮಿಯ ಸನ್ನಿಧಿಗೆ ಶಾಸಕರು ಹಾಗೂ ಅವರ ಬೆಂಬಲಿಗರು ತೆರಳುವುದು ರೂಢಿ. ಈ ಸಂದರ್ಭದಲ್ಲಿ ಕೊರೋನಾ ಮಹಾಮಾರಿಯಿಂದ ಇಡೀ ವಿಶ್ವ ಚೇತರಿಸಿಕೊಳ್ಳಲಿ ಹಾಗೂ ಸ್ವಾಮಿ ಅಯ್ಯಪ್ಪ ಸಮಸ್ತ ಜನತೆಗೆ ಒಳಿತುಮಾಡಲೆಂದು ಪ್ರಾರ್ಥಿಸಿದ್ದಾಗಿ ಶಾಸಕರು ಅಭಿಪ್ರಾಯ ಹಂಚಿಕೊAಡಿರುವುದಾಗಿ ವರದಿಯಾಗಿದೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ