May 18, 2024

Bhavana Tv

Its Your Channel

ಉಡುಪಿ ಸರಕಾರಿ ಕಾಲೇಜು ಪ್ರಾಚಾರ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ, ಭಟ್ಕಳ, ಮುಸ್ಲಿಮ್ ಯೂಥ್ ಫೆಡರೇಶನ್ ವತಿಯಿಂದ ಮನವಿ

ಭಟ್ಕಳ: ಅನಾವಶ್ಯಕವಾಗಿ ಹಿಜಾಬ ಧರಿಸುವುದನ್ನು ವಿವಾದವನ್ನಾಗಿಸಿ ರಾಜ್ಯಾದ್ಯಂತ ಗೊಂದಲ ಸೃಷ್ಟಿಸಿರುವ ಉಡುಪಿ ಸರಕಾರಿ ಕಾಲೇಜು ಪ್ರಾಚಾರ್ಯರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಹಿಜಾಬ್ ಹೆಸರಿನಲ್ಲಿ ಪರೀಕ್ಷೆ ತಪ್ಪಿಸಿಕೊಂಡ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿ, ಭಟ್ಕಳ, ಮುಸ್ಲಿಮ್ ಯೂಥ್ ಫೆಡರೇಶನ್ ವತಿಯಿಂದ ಮನವಿ ಸಲ್ಲಿಸಲಾಯಿತು.

ಹಿಜಾಬ್’ ವಿಷಯದಲ್ಲಿ ಪ್ರಾಚಾರ್ಯ ರುದ್ರೇಗೌಡ ನಡೆದುಕೊ0ಡ ರೀತಿ ಖಂಡನೀಯವಾಗಿದೆ. ಹಿಜಾಬ್ ವಿಷಯವನ್ನೇ ಹಿಡಿದುಕೊಂಡು ಒಂದೆರಡು ದಿನದ ಹಿಂದೆ ಪ್ರಾಚಾರ್ಯರು, ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ಪರೀಕ್ಷೆಗೆ ಅವಕಾಶ ಮಾಡಿ ಕೊಟ್ಟಿಲ್ಲ. ಹಿಜಾಬ್ ಧರಿಸುವುದು ಇಸ್ಲಾಮ್ ಧರ್ಮದಲ್ಲಿ ಕಡ್ಡಾಯವಾಗಿದ್ದು, ಭಾರತದ ಸಂವಿಧಾನದಲ್ಲಿಯೂ ಧರ್ಮ ಪಾಲನೆಗೆ ಅವಕಾಶ ಮಾಡಿಕೊಡಲಾಗಿದೆ. ಉಡುಪಿ ಕಾಲೇಜು ಪ್ರಾಚಾರ್ಯರು ಭಾರತದ ಸಂವಿಧಾನ ಅನುಚ್ಛೇದ 19, 21, ಮತ್ತು 25ನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ,
ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ಕರೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಸ್ಲಿಮ್ ಯೂಥ್ ಫೆಡರೇಶನ್ ಸದಸ್ಯರು ಪ್ರತ್ಯೇಕ ಮನವಿ ಸಲ್ಲಿಸಿದರು. ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳು ಭಯಭೀತರಾಗಿರುವುದು ಹಾಗೂ ಸೂಕ್ತ ಸಮಯದಲ್ಲಿ ಅವರನ್ನು ಕರೆ ತರಲು ವಿಫಲರಾಗಿರುವುದು ಸರಕಾರದ ವೈಫಲ್ಯವನ್ನು ತೋರಿಸುತ್ತದೆ. ವಿದೇಶಾಂಗ ಇಲಾಖೆ ಈ ವಿಷಯದಲ್ಲಿ ವಿಳಂಬವಿಲ್ಲದೇ, ವಿದ್ಯಾರ್ಥಿಗಳ
ರಕ್ಷಣೆಗೆ ಮುಂದಾಗಬೇಕು ಎಂದು ಫೆಡರೇಶನ್ನಿನ ಸದಸ್ಯರು ಆಗ್ರಹಿಸಿದರು. ಭಟ್ಕಳ ಸಹಾಯಕ ಆಯುಕ್ತ ಮಮಹಾದೇವಿ ಮನವಿಯನ್ನು ಸ್ವೀಕರಿಸಿದರು. ತಹಸೀಲ್ದಾರ ಅಶೋಕ ಭಟ್ ಹಾಜರಿದ್ದರು. ಮೌಲಾನಾ ಆಯಾದ್ ಎಸ್. ಎಮ್.ನಡ್ಡಿ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಭಟ್ಕಳ, ಮುಸ್ಲಿಮ್ ಯೂಥ್ ಫೆಡರೇಶನ್ನಿನ ಅಧ್ಯಕ್ಷ ಅಝೀಜ್ ಉರಹಮಾನ್, ಉಪಾಧ್ಯಕ್ಷ ಅಂಜುಮ್ ಗಂಗಾವಳಿ, ಕಾರ್ಯದರ್ಶಿ ಸಾಜೀದ್, ಮುಸ್ಟ, ವಸಿಯುಲ್ಲಾ ಡಿ.ಎಫ್.. ಕೈಸರ್ ಮೊತೇಶಮ್ ಮೊದಲಾದವರು ಉಪಸ್ಥಿತರಿದ್ದರು.

error: