May 18, 2024

Bhavana Tv

Its Your Channel

ಅರಣ್ಯವಾಸಿಗಳನ್ನ ಉಳಿಸಿ- ಜಾಥ ; ಭಟ್ಕಳ ತಾಲೂಕಾದ್ಯಂತ ಮಾರ್ಚ 6 ರಿಂದ 4 ದಿನದಲ್ಲಿ 89 ಹಳ್ಳಿಗಳಿಗೆ ಸಂಚಾರ.

ಭಟ್ಕಳ: ಅರಣ್ಯವಾಸಿಗಳ ಜಾಗೃತಿಯ ಅಂಗವಾಗಿ ಭಟ್ಕಳ ತಾಲೂಕಿನ 20 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 89 ಹಳ್ಳಿಗಳಲ್ಲಿ ಮಾರ್ಚ 6 ರಿಂದ ಮೂರು ದಿನಗಳ ಕಾಲ ಅರಣ್ಯವಾಸಿಗಳನ್ನ ಉಳಿಸಿ-ಜಾಥ ಭಟ್ಕಳ ತಾಲೂಕಿನಾದ್ಯಂತ ಸಂಚರಿಸಲಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರಣ್ಯವಾಸಿಗಳನ್ನ ಉಳಿಸಿ ಜಾಥವು ಉತ್ತರ ಕನ್ನಡ ಜಿಲ್ಲೆಯಲ್ಲಿ 30 ದಿನಗಳಲ್ಲಿ 1000 ಕೀ.ಮೀ “ಹೋರಾಟದ ವಾಹನ” ಸಂಚರಿಸಿ 500 ಹಳ್ಳಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗಾಗಲೇ ಜಾಥವು ಕುಮಟ ತಾಲೂಕಿನಲ್ಲಿ ಉದ್ಘಾಟನೆಗೊಂಡು ಗ್ರಾಮೀಣಭಾಗದ ಅರಣ್ಯವಾಸಿಗಳಿಗೆ ಜಾಗೃತ ಮೂಡಿಸುವ ಕಾರ್ಯಕ್ರಮ ಜರುಗುತ್ತಿದೆ.
ಅರಣ್ಯವಾಸಿಗಳ ಕಾನೂನು ಅಂಶ, ಭೂಮಿ ಹಕ್ಕಿಗೆ ಸಂಬAಧಿಸಿದ ಪ್ರಕ್ರೀಯೆ, ಅರಣ್ಯ ಇಲಾಖೆಯ ದೌರ್ಜನ್ಯ ಹಾಗೂ ಅರಣ್ಯ ಭೂಮಿ ಹಕ್ಕಿಗೆ ಸಂಬoಧಿಸಿ ಹಳ್ಳಿಗಳಿಗೆ ಭೇಟಿಕೊಟ್ಟಂತಹ ಸಂದರ್ಭದಲ್ಲಿ ಅರಣ್ಯವಾಸಿಗಳಿಗೆ ಮಾಹಿತಿ ನೀಡಡಲಾಗುವುದು, ಆಸಕ್ತ ಅರಣ್ಯವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾಥದ ಪ್ರಯೋಜನ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉದ್ಘಾಟನೆ:
ಭಟ್ಕಳ ತಾಲೂಕಿನಲ್ಲಿ ಅರಣ್ಯವಾಸಿಗಳನ್ನ ಉಳಿಸಿ ಜಾಥವನ್ನು ಬೆಳಕೆ ಗ್ರಾಮ ಪಂಚಾಯತ ವ್ಯಾಪ್ತಿಯ ಕಾನಮೊದ್ಲು ಶಾಲೆಯ ಹತ್ತಿರ ಮಾರ್ಚ, 6 ಮುಂಜಾನೆ 9:00 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

error: