May 18, 2024

Bhavana Tv

Its Your Channel

ಪುರಸಭೆಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳು ಅಸಮರ್ಪಕ -ಫಾಸ್ಕಲ್ ಗೋಮ್ಸ್ ಆರೋಪ

ಭಟ್ಕಳ ತಾಲೂಕಿನ ಪುರಸಭೆಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳು ಅಸಮರ್ಪಕವಾಗಿದ್ದು, ಇದಕ್ಕೆ ಅಧ್ಯಕ್ಷರೇ ಹೊಣೆಯಾಗಿದ್ದಾರೆ ಎಂದು ಸದಸ್ಯ ಫಾಸ್ಕಲ್ ಗೋಮ್ಸ್ ಆರೋಪಿಸಿದ್ದಾರೆ. ತಿರುಗೇಟು ನೀಡಿರುವ ಅಧ್ಯಕ್ಷ ಫರ್ವೇಜ್ ಕಾಶೀಮ್‌ಜಿ.

ಪುರಸಭಾ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಫರ್ವೇಜ್ ಕಾಶೀಮ್‌ಜಿ ವಿರುದ್ಧ ಆರೋಪ ಹೊರಿಸಿ, ಅಧ್ಯಕ್ಷರ ತಿರುಗೇಟಿಗೆ ಗುರಿಯಾಗಿದ್ದ ಸದಸ್ಯ ಫಾಸ್ಕಲ್, ಇದೀಗ ಪತ್ರಿಕಾಗೋಷ್ಠಿ ನಡೆಸಿ ಆರೋಪಗಳನ್ನು ಪುನರುಚ್ಚರಿಸಿದ್ದಾರೆ. ಅರ್ಬನ್ ಬ್ಯಾಂಕ್ ಪಕ್ಕದಲ್ಲಿ ನಡೆದಿರುವ ಪಾರ್ಕ ಕಾಮಗಾರಿ ಸರಿಯಿಲ್ಲ, ಅಲ್ಲಿ ಅಳವಡಿಸಲಾಗಿರುವ ವಿದುದ್ದೀಪ ಕಳಪೆಯಾಗಿದೆ. ಈಗಲೇ ಅಲ್ಲಿ ಅವಡಿಸಲಾಗಿದ್ದ ಟೈಲ್ಸ್ ಕಳಚಿ ಬಿದ್ದಿದೆ. ಸಾಗರರೋಡ್ ಘನ ತ್ಯಾಜ್ಯವಿಲೇವಾರಿ ಘಟಕದಲ್ಲಿ 8 ಕೋಟಿ ರುಪಾಯಿ ಕಾಮಗಾರಿ ನಡೆದಿದ್ದು, ಎಲ್ಲಿ ನಡೆದಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ಚೈನಾ ನಿರ್ಮಿತ ಬೀದಿ ದೀಪ ಅಳವಡಿಸಲಾಗಿದ್ದು, ಅದಕ್ಕೆ ಬಾಳಿಕೆಯೇ ಇಲ್ಲ. ಟೆಂಡರ್‌ನಲ್ಲಿ ಅತ್ಯಂತ ಕಡಿಮೆ ದರ ನಮೂದಿಸಿದ ಕಾರಣಕ್ಕೆ ಕಾಮಗಾರಿ ನೀಡಿ, ಕಳಪೆ ವಿದ್ಯುದ್ದೀಪ ಅಳವಡಿಸಿರುವುದಕ್ಕೆ ಅಧ್ಯಕ್ಷರೇ ಕಾರಣರಾಗಿದ್ದಾರೆ. ತೆರಿಗೆ ವಸೂಲಿಯಲ್ಲಿಯೂ ತಾರತಮ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ದತ್ತಾತ್ರೇಯ,
ದ್ಯಾವಯ್ಯ ನಾಯ್ಕ ಉಪಸ್ಥಿತರಿದ್ದರು.
ಅಧ್ಯಕ್ಷರ ತಿರುಗೇಟು:
ಪರಸಭಾ ಸದಸ್ಯ ಫಾಸ್ಕಲ್ ಆರೋಪಕ್ಕೆ ತಿರುಗೇಟು ನೀಡಿರುವ ಅಧ್ಯಕ್ಷ ಫರ್ವೇಜ್ ಕಾಶೀಮ್‌ಜಿ, ಸದಸ್ಯರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸಾಮಾನ್ಯ ಸಭೆಯಲ್ಲಿಯೂ ಅದೇ ವಿಷಯವನ್ನು ಪ್ರಸ್ತಾಪಿಸಿ ಉತ್ತರ ಪಡೆದಿದ್ದಾರೆ. ಸದಸ್ಯರೇ ಮುಂದಾಗಿ ಎಲ್ಲ ಕಾಮಗಾರಿಯ ಪರಿಶೀಲನೆ ನಡೆಸುವಂತೆ, ಕಾಮಗಾರಿಯಲ್ಲಿ ಪುರಸಭಾ ಸದಸ್ಯ ಫಾಸ್ಕಲ್ ಗೋಮ್ಸ್ ಪತ್ರಿಕಾಗೋಷ್ಠಿ ನಡೆಸಿದರು ಅವ್ಯವಹಾರ ನಡೆದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದೇನೆ. ಆದರೆ ಪರಿಶೀಲನೆಗೆ ಮುಂದಾಗದ ಸದಸ್ಯರು ವೃಥಾ ಆರೋಪ ಮುಂದುವರೆಸಿದ್ದಾರೆ. ಪುರಸಭಾ ವ್ಯಾಪ್ತಿಯಲ್ಲಿನ ವಿದ್ಯುದ್ದೀಪ ಕಾಮಗಾರಿಯನ್ನು ಸದರಿ ಸದಸ್ಯರು ಹೇಳಿದಂತೆ ಟೆಂಡರ್ ನೀಡದಿರುವುದೇ ಈ ಎಲ್ಲ ಆರೋಪಕ್ಕೂ ಕಾರಣವಾಗಿದೆ. ಕಾಮಗಾರಿಯ ಟೆಂಡರ್, ವಿದ್ಯುದ್ದೀಪದ ಗುಣಮಟ್ಟ ಎಲ್ಲವೂ ಸರಕಾರದ ನಿಯಮದಂತೆ ನಡೆಯಬೇಕಾಗಿದ್ದು, ಅದರಲ್ಲಿ ನನ್ನ ಪಾತ್ರ ಏನೂ ಇರುವುದಿಲ್ಲ ಎಂದು ತಿಳಿಸಿದ್ದಾರೆ.

error: