
ಭಟ್ಕಳ : ತಾಲ್ಲೂಕಿನ ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ಮಾರ್ಚ ೧೯ರಂದು ಶನಿವಾರ ಸಂಜೆ ೪ರಿಂದ ಮಾರ್ಚ ೨೦ ರಂದು ಬೆಳಗಿನ ಜಾವದ ವರೆಗೆ ಭವತಾರಿಣೀ ವಲಯದ ಸಂಗೀತ ಕಲಾವಿದರಿಂದ ತಾಪಹಾರಿಣೀ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಶಾಸಕ ಸುನೀಲ ನಾಯ್ಕ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ದೇವಿಮನೆಯ ಅಧ್ಯಕ್ಷ ಶಿವಾನಂದ ಹೆಬ್ಬಾರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದೇವಿಮನೆ ಪ್ರಧಾನ ಅರ್ಚಕ ವೆ.ಮೂ ಬಾಲಚಂದ್ರ ಭಟ್ಟ, ಹಿರಿಯ ಕಲಾವಿದ ಜನಾರ್ಧ ನ ಹೆಗಡೆ ಪಾಲ್ಗೊಳ್ಳಲಿದ್ದು, ಇದೇ ಸಂದರ್ಭದಲ್ಲಿ ಸಂಗೀತ ಕಲಾವಿದರಾದ ಕೃಷ್ಣಮೂರ್ತಿ ಹೆಬ್ಬಾರ ಕೋಟಖಂಡ, ಬಾಲಚಂದ್ರ ಹೆಬ್ಬಾರ ಕೋಣಾರ,ಅನಂತ ಹೆಬ್ಬಾರ ಕೋಟಖಂಡ ಇವರನ್ನು ಸನ್ಮಾನಿಸಲಾಗುತ್ತದೆ. ತಾಪಹಾರಿಣೀ ಸಂಗೀತೋತ್ಸವದಲ್ಲಿ ಭವತಾರಿಣೀ ವಲಯದ ೩೫ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡು ಸಂಗೀತಸುಧೆ ಹರಿಸಲಿದ್ದು, ಸಂಗೀತಾಸಕ್ತರು ಕೋವಿಡ್ ನಿಯಮ ಪಾಲನೆಯೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ