May 19, 2024

Bhavana Tv

Its Your Channel

ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಚಿಣ್ಣರ ಮೇಳ ಬೇಸಿಗೆ ಶಿಬಿರ ಉದ್ಘಾಟಿಸಿದ ಶಾಸಕ ಸುನೀಲ ನಾಯ್ಕ

ಭಟ್ಕಳ: ನಗರದ ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಸಭಾ ಭವನದಲ್ಲಿ ಚಿಣ್ಣರ ಮೇಳ ಬೇಸಿಗೆ ಶಿಬಿರವನ್ನು ಶಾಸಕ ಸುನಿಲ್ ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಪ್ರತಿ ಮಗುವಿನ ತಂದೆ-ತಾಯಿಯವರಲ್ಲಿ ತಮ್ಮ ಮಗುವಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಬೇಕು ಎನ್ನುವ ನಿಟ್ಟಿನಲ್ಲಿ ಅವರ ಚಿಂತನೆ ನಿರಂತರವಾಗಿರುತ್ತದೆ. ಅಂತಹ ಮಗುವಿಗೆ ಬೇಸಿಗೆ ಶಿಬಿರ, ಚಿನ್ನರ ಮೇಳದಂತಹ ಕಾರ್ಯಕ್ರಮ ಅತ್ಯುಪಯುಕ್ತವಾಗುತ್ತದೆ. ಮಗುವಿನ ಪ್ರತಿಭೆಯನ್ನು ಗುರುತಿಸುವಂತಹ ಕಾರ್ಯ ಇಲ್ಲಿ ಆಗುತ್ತದೆ ಎಂದರು. ಮಕ್ಕಳಿಗೆ ಅವರಲ್ಲಿರುವ ಪ್ರತಿಭೆಗೆ ತಕ್ಕಂತೆ ಅವರ ಆಸಕ್ತಿಯನ್ನು ಗುರುತಿಸಿ ಶಿಕ್ಷಣವನ್ನು ಕೊಡಬೇಕಾಗುತ್ತದೆ. ಮಕ್ಕಳು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆನ್ನುವ ಕುರಿತು ಗುರುತಿಸಿ ಆ ದಿಶೆಯಲ್ಲಿಯೇ ಅವರಿಗೆ ಶಿಕ್ಷಣ ಕೊಡಬೇಕು. ಮಕ್ಕಳಿಗೆ ಶಿಕ್ಷಣವೊಂದೇ ಜೀವನದ ಮಾರ್ಗ ಎನ್ನುವುದನ್ನು ಬಿಟ್ಟು ಅವರಿಗೆ ಸಾಧನೆ ಮಾಡುವ ಛಲವಿದ್ದಲ್ಲಿ, ಬೇರೆ ಬೇರೆ ಕಲೆಯಲ್ಲಿ ಆಸಕ್ತಿ ಇದ್ದಲ್ಲಿ ಅ ನಿಟ್ಟಿನಲ್ಲಿ ಅವರಿಗೆ ತರಬೇತಿ ಕೊಡುವಂತೆ ಪಾಲಕರಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಡಾ. ಆರ್. ವಿ. ಸರಾಫ್ ಅವರು ವಹಿಸಿದ್ದರು.
ನೀನಾಸಂ ಡಿಂಗ್ರಿ ನರೇಶ್ ಮಾತನಾಡಿ ಇಂದಿನ ದಿನಗಳಲ್ಲಿ ರಂಗ ಕಲೆ, ನಾಟಕ ಕಲೆ, ಚಿತ್ರ ಕಲೆ ಸೇರಿದಂತೆ ವಿವಿಧ ಕಲಾಪ್ರಾಕಾರಗಳನ್ನು ಕಲಿಸುವ ಪದ್ಧತಿಯೇ ದೂರಾಗಿದೆ. ಇದರಿಂದ ಮಕ್ಕಳ ಮನಸ್ಸು ಅರಳುವುದಕ್ಕೆ ಅವಕಾಶ ಕಡಿಮೆಯಾದಂತಾಗಿದೆ. ಪ್ರತಿ ಶಾಲೆಗಳಲ್ಲಿ ರಂಗ ಕಲೆ, ಚಿತ್ರಕಲೆ, ಸಂಗೀತ, ನಾಟಕ ಇತ್ಯಾದಿಗಳನ್ನು ಹೇಳಿಕೊಡುವಂತೆ ಶಿಕ್ಷಕರ ನೇಮಕಾತಿಯಾಗಬೇಕು. ಆಯಾಯ ರಂಗದಲ್ಲಿ ತರಬೇತಿ ಪಡೆದವರನ್ನು ನೇಮಿಸಿಕೊಳ್ಳುವ ಕಾರ್ಯಕ್ಕಾಗಿ ಶಾಸಕರು ಸರಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸುತ್ತಾ ಭಟ್ಕಳದಲ್ಲಿ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಒಂದು ಉತ್ತಮ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಮುಂದಾಗುವAತೆ ಶಾಸಕರಿಗೆ ಮನವಿ ಮಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ವಿದ್ಯಾಂಜಲಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಶೈಲಜಾ ಪ್ರಭು, ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯೆ ಶಿವಾನಿ ಶಾಂತಾರಾಮ್, ಅಳ್ವೇಕೋಡಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಮೋಹನ ನಾಯ್ಕ, ಮಾತನಾಡಿದರು.
ವೇದಿಕೆಯಲ್ಲಿ ಡಾ. ಬಾಬುರಾವ್ ನಿಡೋಣಿ, ಬೇಸಿಗೆ ಶಿಬಿರದ ಸಂಘಟಕ ಅಸ್ಥೆಟಿಕ್ ಕಲ್ಷರಲ್ ಅಂಡ್ ಎಜ್ಯುಕೇಶನಲ್ ಫೌಂಡೇಶನ್ನ ಸುದರ್ಶನ ನಾಯ್ಕ ಭಟ್ಕಳ ಉಪಸ್ಥಿತರಿದ್ದರು.
ಕಲಾವಿದ ರಾಜೇಶ್ ಕುಂದರ್ ಪ್ರಾರ್ಥಿಸಿದರು. ಸಂಘಟಕ ಪ್ರಕಾಶ ಶಿರಾಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಾಬುರಾವ್ ನಿಡೋಣಿ ಸುಶ್ರಾವ್ಯವಾಗಿ ಕೊಳಲು ನುಡಿಸಿದರು. ಶಿಕ್ಷಕಿ ಲತಾ ನಿರೂಪಿಸಿದರು.

error: