
ಭಟ್ಕಳ ತಾಲೂಕಿನ ಗೊರ್ಟೆ ಕ್ರಾಸ್ ಸನಿಹದ ಕಾಡಿನಲ್ಲಿರುವ ಆಳವಾದ ಬಾವಿಯೊಂದರಲ್ಲಿ ಆಕಸ್ಮಿಕವಾಗಿ ಬಿದ್ದಿದ್ದ ಗೋವನ್ನು ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಮೇಲಕ್ಕೆತ್ತಿ ರಕ್ಷಣೆ ಮಾಡಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಭಟ್ಕಳ ತಾಲೂಕಿನ ಗೊರ್ಟೆ ಕ್ರಾಸ್ ಸನಿಹದ ಕಾಡಿನ ಅಂಚಿನಲ್ಲಿರುವ 35 ಅಡಿಗಳಿಗೂ ಹೆಚ್ಚು ಆಳದ ಬಾವಿಗೆ ಅಕಸ್ಮಾತ್ ಗೋವೊಂದು ಬಿದ್ದಿತ್ತು. ಇದನ್ನು ನೋಡಿದ ಸ್ಥಳೀಯರಾದ ವಸಂತ ನಾಯ್ಕ ಎನ್ನುವವರು ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿ ದನವನ್ನು ರಕ್ಷಿಸುವಂತೆ ಕೋರಿದ್ದರು. ಅಗ್ನಿಶಾಮಕ ಇನ್ಸಪೆಕ್ಟರ್ ರಮೇಶ ಶೆಟ್ಟಿ ನೇತೃತ್ವದ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ದನವನ್ನು ಹಗ್ಗ ಹಾಗೂ ಹೋಸ್‌ಗಳ ಸಹಾಯದಿಂದ ಸುರಕ್ಷಿತವಾಗಿ ಮೆಲ್ಕಕ್ಕೆತ್ತಿ ಮಾಲಿಕರಿಗೆ ಹಸ್ತಾಂತರಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ