April 26, 2024

Bhavana Tv

Its Your Channel

ಶ್ರೀ ನಾರಾಣಯ ಗುರು ವಸತಿ ಶಾಲೆ 6 ನೇ ತರಗತಿಯ ಪ್ರವೇಶಕ್ಕೆ ಚಾಲನೆ

ಭಟ್ಕಳ ತಾಲೂಕಿನ ಜಾಲಿ ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಳ್ಳುತ್ತಿರುವ ಶ್ರೀ ನಾರಾಣಯ ಗುರು ವಸತಿ ಶಾಲೆ 6 ನೇ ತರಗತಿಯ ಪ್ರವೇಶಾತಿ ಹೆಬಳೆ ಯಲ್ಲಿನ ಮೊರಾರ್ಜಿವಸತಿ ಶಾಲೆಯಲ್ಲಿ ಆರಂಭವಾಗಿದ್ದು ಶಾಸಕ ಸುನೀಲ ನಾಯ್ಕ ಉದ್ಗಾಟನೆ ನೆರವೇರಿಸಿದರು

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವ ಸಿದ್ದಾಂತವನ್ನು ಬಡ ಮಕ್ಕಳಿಗೆ ಧಾರೆ ಎರೆಯುವ ಉದ್ದೇಶದಿಂದ ಹಾಗೂ ಅವರ ಮನೋಭಾನೆ ಎಲ್ಲಾ ವರ್ಗದವರಿಗೆ ಬರಬೇಕು ಎನ್ನುವ ಕಾರಣಕ್ಕಾಗಿ ಇಡಿ ರಾಜ್ಯದಲ್ಲಿ ಕೇವಲ ನಾಲ್ಕು ಜಿಲ್ಲೆಗಲ್ಲಿ ಮಾತ್ರ ಶಾಲೆಯನ್ನು ಕೊಡಲಾಗಿದೆ. ಸದ್ಯ 28 ಕೋಟಿ ವೆಚ್ಚದಲ್ಲಿ ಜಾಲಿಯಲ್ಲಿ ಶಾಲೆಯ ಜಾಗ ಮಂಜೂರಿಯಾಗಿದೆ. ಮುಂದಿನ ದಿನದಲ್ಲಿ ಮಖ್ಯಮಂತ್ರಿಗಳು ಬಂದು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿಕೊಡಲಿದ್ದಾರೆ. ಅದಕ್ಕೂ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಸೂಚನೆ ಮೆರೆಗೆ ಇಂದು ನಾವು 6ನೇ ತರಗತಿಯ ಪ್ರವೇಶ ಆರಂಭ ಮಾಡಿದ್ದೇವೆ ಎಂದರು.

ಯಾವುದೇ ಬಜೆಟ್ ಮಂಡನೆಯಾಗಲಿ ಅದು ಒಂದೆರಡು ವರ್ಷದ ನಂತರ ಅನುಷ್ಠಾನಕ್ಕೆ ಬರುತ್ತದೆ. ಆದರೆ ನಮ್ಮ ಸರ್ಕಾರ ಶ್ರೀ ನಾರಾಣಯ ಗುರು ಶಾಲೆ ಬಜೆಟ್ ಮಂಡನೆಯಾದ ಕೂಡಲೇ ಅತ್ಯಂತ ಶೀಘ್ರವಾಗಿ ಅನುಮೋದನೆ ತರಲಾಗಿದೆ ಎಂದರು

ಯಾವ ಊರಿನಲ್ಲಿ ಬ್ರಹತ್ ಶಿಕ್ಷಣ ಸಂಸ್ಥೆ ಸ್ಥಾಪಣೆಯಾಗುತ್ತವೇಯೋ ಆ ಊರು ಮುಂದಿನ ದಿನದಲ್ಲಿ ಸಂಪೂರ್ಣ ಅಭಿವೃದ್ಧಿಯಾಗುತ್ತದೆ. ಇಂದಿನ ದಿನದಲ್ಲಿ ಸರ್ಕಾರ ಶಿಕ್ಷಣ ಹೆಚ್ಚು ಒತ್ತು ನೀಡುತ್ತಿದ್ದು ವಿದ್ಯಾರ್ಥಿಗಳು ಅದರ ಬಳಕೆ ಮಾಡಿಕೊಳ್ಳುವ ಕೆಲಸ ಮಾಡಿಕ್ಕೊಳ್ಳಬೇಕು ಎಂದರು. ಶಿಕ್ಷಣದ ಜೊತೆ ಜೊತೆಯಲ್ಲಿ ವಿದ್ಯಾರ್ಥಿಗಳು ಸಂಸ್ಕಾರ ಕಲಿಯಬೇಕು ಇತ್ತೀಚೀನ ದಿನಗಲ್ಲಿ ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರದ ಕೊರತೆ ಇದ್ದು ಕಾಣುತ್ತಿದೆ ಎಂದ ಅವರು ಸಂಸ್ಕಾರ ಇದ್ದಲ್ಲಿ ಜೀವನದಲ್ಲಿ ನಾವು ಯಶಸ್ಸು ಕಾಣಲು ಸ್ಯಾದ್ಯವಾಗುತ್ತದೆ ಎಂದರು
ಕಾರ್ಯಕ್ರಮದ ಬಳಿಕ ಶಾಸಕ ಸುನೀಲ ನಾಯ್ಕರನ್ನು ಸನ್ಮಾನಿ ಗೌರವಿಸಲಾಯಿತು
ಈ ಸಂದರ್ಭದಲ್ಲಿ ಹೆಬಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪದ್ಮ ನಾಯ್ಕ,ಉಪಾಧ್ಯಕ್ಷೆ ಮಾದೇವಿ ಎಂ ನಾಯ್ಕ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಿ ಸತೀಶ್,ತಾಲ್ಲೂಕು ವಿಸ್ತೀರ್ಣ ಅಧಿಕಾರಿ ಕೃಷ್ಣಮೂರ್ತಿ, ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗೆ, ಹೆಬಳೆ ಪಂಚಾಯತ ಸದಸ್ಯ ರಾಮ ನಾಯ್ಕ, ನಾಮಧಾರಿ ಸಮಾಜದ ಹಿರಿಯ ಮುಖಂಡ ಎಲ್.ಎಸ್.ನಾಯ್ಕ, ಬಿಜೆಪಿ ಹಿರಿಯ ಮುಖಂಡ ಸುಬ್ರಾಯ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

error: