May 19, 2024

Bhavana Tv

Its Your Channel

ಭಟ್ಕಳ: ಪುರಸಭೆ ಕಾರ್ಯಲಯ ಸುತ್ತಮುತ್ತ 500 ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ;2 ದಿನ ನಿಷೇದಾಜ್ಞೆ ಜಾರಿ

ಭಟ್ಕಳ:ದಿನಾಂಕ : 30-06-2022 ರಂದು ಪುರಸಭಾ ಮುಖ್ಯಾಧಿಕಾರಿಯವರು ಭಟ್ಕಳ ಪುರಸಭೆ ಕಾರ್ಯಾಲಯಕ್ಕೆ ನೂತನವಾಗಿ ಉರ್ದು ಭಾಷೆಯಲ್ಲಿ ಹಾಕಿದ ನಾಮಫಲಕವನ್ನು ತೆರವು ಮಾಡಿರುತ್ತಾರೆ. ಭಟ್ಕಳವು ಮತೀಯವಾಗಿ ಅತಿ ಸೂಕ್ಷ್ಮ ಪ್ರದೇಶವಾಗಿದ್ದು, ಸಣ್ಣ ಘಟನೆ ನಡೆದರೂ ಸಹ ಕೋಮು ಗಲಭೆ ಆಗುವ ಸಾಧ್ಯತೆ ಇರುತ್ತದೆ. ಪುರಸಭೆಗೆ ಅಳವಡಿಸಿದ ಉರ್ದು ಭಾಷೆಯ ನಾಮಫಲಕದ ವಿವಾದದ ಸಂಬAಧ ಮುಂದಿನ ದಿನಗಳಲ್ಲಿ 144 ನಿಷೇದಾಜ್ಞೆ ಜಾರಿ ಮಾಡಿದ ತಹಶೀಲ್ದಾರ ಡಾ: ಸುಮಂತ ಆದೇಶವನ್ನು ಮಾಡಿದ್ದಾರೆ.

ಎರಡು ಕೋಮಿನ ಮಧ್ಯೆ ವಿವಾದವಾಗುವ ಸಂಭವ ಕಾರಣ ಭಟ್ಕಳ ಶಹರವು ಕೋಮು ಸೂಕ್ಷ್ಮ
ಪ್ರದೇಶಗಳಾಗಿರುವುದರಿಂದ ಸಮಾಜ ಘಾತಕ ಶಕ್ತಿಗಳು ಶಾಂತಿ ಭಂಗವನ್ನು ಉಂಟು ಮಾಡುವ ಸಾಧ್ಯತೆಗಳು ಇದ್ದು, ಸಾರ್ವಜನಿಕ ಆಸ್ತಿ ಪಾಸ್ತಿಗೆ ಧಕ್ಕೆ ಉಂಟಾಗುವ ಹಾಗೂ ಶಾಂತತೆ ಭಂಗವಾಗುವ ಸಂಭವಗಳರುವುದರಿAದ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಭಟ್ಕಳ ಪುರಸಭೆ ಕಟ್ಟಡದ ಸುತ್ತಮುತ್ತ… 500 ವ್ಯಾಪ್ತಿಯಲ್ಲಿ ದಿನಾಂಕ: 30-06-2022 ರಂದು ಮಧ್ಯರಾತ್ರಿಯಿಂದ ದಿನಾಂಕ: 02-07-2022 ರಂದು ಮಧ್ಯರಾತ್ರಿವರೆಗೆ ಸಿ.ಆರ್.ಪಿ.ಸಿ ಕಲಂ. 144 ರನ್ವಯ ನಿಷೇದಾಜ್ಞೆ ಜಾರಿ ಮಾಡಲು ಪೊಲೀಸ್ ನಿರೀಕ್ಷಕರು, ಭಟ್ಕಳ, ಶಹರ ರವರು ಕೋರಿರುದ್ದು ತಾಲೂಕಿನಾದ್ಯಂತ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗಬಾರದAತೆ ಕ್ರಮಕೈಗೊಳ್ಳುವ ಬಗ್ಗೆ ತಹಶೀಲ್ದಾರ ಭಟ್ಕಳ ಹಾಗೂ ತಾಲೂಕಾ ದಂಡಾಧಿಕಾರಿಯಾದ ಡಾ: ಸುಮಂತ ಅ.ಇ., ಕ.ಆ.ಸೇ. ಆದೇಶವನ್ನು ಜಾರಿಗೊಳಿಸಿದ್ದಾರೆ.

error: