May 18, 2024

Bhavana Tv

Its Your Channel

ಭಟ್ಕಳದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಗೆ ಹೊಸ ಕೊಠಡಿ ಮಂಜೂರು ಮಾಡಿಕೊಡಬೇಕೆಂದು ಆಗ್ರಹ

ಭಟ್ಕಳ: ಇಲ್ಲಿನ ರಥಬೀದಿಯಲ್ಲಿನ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯು ೧೬೦ ವರ್ಷ ಹಿಂದಿನದಾಗಿದ್ದು, ಕಟ್ಟಡವೂ ಸಂಪೂರ್ಣ ಹಾಳಾಗಿ ಶಿಥಿಲಾವಸ್ಥೆಗೆ ತಲುಪಿದ್ದು ಹೊಸ ಕೊಠಡಿ ಮಂಜೂರು ಮಾಡಿಕೊಡಬೇಕು ಎಂದು ಶಾಲಾ ಮಕ್ಕಳ ಪಾಲಕ ನಾಗರಾಜ ದೇವಾಡಿಗ ಆಗ್ರಹಿಸಿದ್ದಾರೆ.

ಅವರು ಇಲ್ಲಿನ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮವರೊಂದಿಗೆ ಮಾತನಾಡುತ್ತಿದ್ದರು.

‘ಈ ಶಾಲೆಯು ೧೬೦ ವರ್ಷ ಇತಿಹಾಸ ಹೊಂದಿದ್ದು, ಶಾಲೆಯ ಎಲ್ಲಾ ಕೊಠಡಿ, ಅಡುಗೆ ಕೋಣೆ, ಶೌಚಾಲಯದ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ಬಂದು ತಲುಪಿದೆ. ಶಾಲೆಯಲ್ಲಿ ೧ ರಿಂದ ೭ ನೇ ತರಗತಿ ವರೆಗೆ ೯೦ ವಿದ್ಯಾರ್ಥಿಗಳು ದಾಖಲಾಗಿದ್ದು, ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ಮಾಡುತ್ತಿದ್ದಾರೆ ಎಂದ ಅವರು ಸದ್ಯ ಕಟ್ಟಡವೂ ಶಿಥಿಲಾವಸ್ಥೆಯಲ್ಲಿರುವ ಹಿನ್ನೆಲೆ ಶಾಲೆಗೆ ಮಕ್ಕಳನ್ನು ಕಳುಹಿಸಿಕೊಡುವುದು ತುಂಬಾ ಅಪಾಯಕಾರಿಯಾಗಿದೆ. ಇನ್ನು ಶಾಲೆಯಲ್ಲಿ ಮಕ್ಕಳ ಸುರಕ್ಷತ ದೃಷ್ಟಿಯಿಂದ ಕೊಠಡಿ ಶಿಥಿಲಾವಸ್ಥೆಗೆ ಬಂದಿರುವುದರಿAದ ಮಕ್ಕಳನ್ನು ಶಾಲೆಯೊಳಗೆ ಮಕ್ಕಳಿಗೆ ಶಿಕ್ಷಣ ಪಾಠ ಭೋದನೆ ಮಾಡುವುದು ಸಹ ಕಷ್ಟಕರವಾಗಿದೆ ಎಂದು ಪರಿಸ್ಥಿತಿಯನ್ನು ವಿವರಿಸಿದರು.

‘ಇನ್ನು ಶಾಲೆಯ ಕಟ್ಟಡದ ಪರಿಸ್ಥಿತಿ ಹೇಗಿದೆ ಎಂದರೆ ಬೋಧನಾ ಕೊಠಡಿಗೆ ತಾಗಿ ಅಡುಗೆ ಕೋಣೆ ಹಾಗೂ ದಾಸ್ತಾನು ಕೊಠಡಿ ಇಲ್ಲವಾಗಿದ್ದು, ಮಳೆಗಾಲದಲ್ಲಿ ಇಲ್ಲಿ ಬಿಸಿಯೂಟ ತಯಾರಿಸಲು ಹಾಗೂ ಆಹಾರ ದಾಸ್ತಾನು ಇಡಲು ತುಂಬಾ ಕಷ್ಟಕರವಾಗಿದೆ ಮತ್ತು ಆಹಾರಗಳು ಈಗಾಗಲೇ ಕೆಡುವಂತಹ ಪರಿಸ್ಥಿತಿಯಲ್ಲಿ ಇದ್ದು ಈ ಆಹಾರವನ್ನೇ ಮಕ್ಕಳು ಸೇವಿಸಬೇಕಾಗಿದೆ. ಇದರೊಂದಿಗೆ ಅಡುಗೆ ಕೋಣೆಗೆ ತಾಗಿ ಮಕ್ಕಳ ಶೌಚಾಲಯ ಇದ್ದು ಸ್ವಚ್ಚತೆಗೆ ವ್ಯವಸ್ಥಿತ ಸೌಲಭ್ಯಗಳಿಲ್ಲದೇ ಇವೆಲ್ಲವೂ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಲಿವೆ ಎಂದು ಆಗ್ರಹಿಸಿದರು.

ಎಸ್.ಡಿ.ಎಮ್.ಸಿ. ಸದಸ್ಯ ಹರೀಶ ದೇವಾಡಿಗ ಮಾತನಾಡಿದ್ದು ‘ ಈ ಹಿಂದೆ ಶಾಲೆಯ ೧೫೦ ನೇ ವರ್ಷದ ಕಾರ್ಯಕ್ರಮದಲ್ಲಿ ಈ ಹಿಂದಿನ ಶಾಸಕರು ಹೊಸ ಕಟ್ಟಡದ ಮಾಡಿಕೊಡುವ ಭರವಸೆ ನೀಡಿದ್ದರು ಈಗಿನ ಶಾಸಕರು ಸಹ ಅದನ್ನೇ ಮುಂದುವರೆಸಿದ್ದಾರೆ ಹೊರತಾಗಿ ಕಟ್ಟಡದ ಮಂಜೂರಿಗೆ ಇನ್ನು ಸ್ಪಂದಿಸಿಲ್ಲ. ಇದರಿಂದ ಮಕ್ಕಳ ಪಾಲಕರು ಕಟ್ಟಡದಿಂದ ಅನಾಹುತ ಸಂಭವಿಸಿದರೆ ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸುತ್ತಿದ್ದು, ಜೊತೆಗೆ ಮಕ್ಕಳ ಸಂಖ್ಯೆಗೆ ಭಾರಿ ಹೊಡೆತ ಬೀಳಲಿದೆ. ಇಲ್ಲಿಯ ತನಕ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಬಿಟ್ಟರೆ ಇನ್ಯಾವುದೇ ಜವಾಬ್ದಾರಿ ಹೊರತು ಪರಿಶೀಲನೆಗೆ ಬಂದಿಲ್ಲವಾಗಿದೆ.
‘ಈಗಾಗಲೇ ಒಂದು ವಾರದ ಹಿಂದೆ ಭಟ್ಕಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ ನಾಯ್ಕ, ಹಾಗೂ ಸಹಾಯಕ ಆಯುಕ್ತೆ ಮಮತಾದೇವಿ ಅವರಿಗೆ ಮನವಿ ಸಲ್ಲಿಸಲಾಗಿದ್ದು ಈ ಕುರಿತು ಇನ್ನು ತನಕ ಯಾವುದೇ ಸ್ಪಂದನೆ ಬಂದಿಲ್ಲ ವಾಗಿದೆ ಎಂದು ಆಕ್ರೋಶ ಭರಿತರಾದರು.

ವಿದ್ಯಾರ್ಥಿಗಳ ಪಾಲಕ ರಾದ ಪ್ರೇಮ ನಾಯ್ಕ ಮಾತನಾಡಿ ‘ಕಳೆದ ವರ್ಷದಿಂದಲೇ ಕಟ್ಟಡದ ಮಂಜುರಿಗೆ ಶಾಸಕರಲ್ಲಿ ಪಾಲಕರು ಮನವಿ ಮಾಡುತ್ತಾ ಬಂದಿದ್ದು ಇನ್ನು ತನಕ ಸ್ಪಂದನೆ ಸಿಕ್ಕಿಲ್ಲ. ಕೆಲ ದಿನದ ಹಿಂದೆಯೂ ಸಹ ಮನವಿ ಮಾಡಿದ್ದು ಅವರು ಬೆಂಗಳೂರಿನಲ್ಲಿ ಸಭೆಯ ಹಿನ್ನೆಲೆ ಸ್ಥಳ ಭೇಟಿ ಮಾಡಿಲ್ಲ ಆದರೆ ಮಕ್ಕಳ ಜೀವಕ್ಕೆ ಹಾನಿಯಾಗಿದರೆ ಶಾಸಕರು ಸಚಿವರು, ಅಧಿಕಾರಿಗಳು ಹೊಣೆಗಾರರಾಗಲಿದ್ದಾರಾ.? ಎಂದ ಅವರು ಒಂದು ವಾರದೊಳಗೆ ಇದಕ್ಕೆ ಸ್ಪಂದನೆ ಸಿಗಬೇಕು ಎಂದು ಸ್ಥಳದಲ್ಲೇ ಮೌನ ಪ್ರತಿಭಟನೆ ಮಾಡಿದರು.

ಶೀಘ್ರ ಸ್ಪಂದನೆ ಅಗತ್ಯ- ಶಾಲೆ ಎದುರು ಧರಣಿ :

ವಿದ್ಯಾರ್ಥಿಗಳ ಜೀವದ ಹಿತದೃಷ್ಟಿಯಿಂದ ಶಾಲೆಯ ನಾಲ್ಕು ಬೋಧನಾ ಕೊಠಡಿಗಳು, ಅಡುಗೆ ಕೋಣೆ, ದಾಸ್ತಾನು ಕೋಣೆ ಹಾಗೂ ಶೌಚಾಲಯಗಳನ್ನು ಅತೀ ಶೀಘ್ರದಲ್ಲಿ ಕೊಠಡಿಗಳನ್ನು ಮಂಜೂರುಗೊಳಿಸಿಕೊಡಬೇಕೆAದು ಶಾಲಾ ಎಸ್.ಡಿ.ಎಮ್.ಸಿ. ಸಮಿತಿ ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಅದರಂತೆ ಶಾಲೆಯ ಕಟ್ಟಡದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕರು ಭೇಟಿ ನೀಡಿ ಒಂದು ವಾರದೊಳಗಾಗಿ ಇದಕ್ಕೆ ಸ್ಪಂದಿಸಬೇಕು ಇಲ್ಲವಾದಲ್ಲಿ ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಯ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.

ಈ ಸಂಧರ್ಭದಲ್ಲಿ ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ರಾಮಚಂದ್ರ ದೇವಾಡಿಗ, ದಿನೇಶ ನಾಯ್ಕ, ಮಹಾಬಲೇಶ್ವರ ನಾಯ್ಕ, ರವಿಕಾಂತ ಬಾಂದೇಕರ, ಲಕ್ಷ್ಮೀಶ ಶಾಸ್ತ್ರಿ ಸೇರಿದಂತೆ ಪಾಲಕರಾದ ಸುರೇಂದ್ರ ಪೂಜಾರಿ, ಸೀಮಾ ನಾಯ್ಕ, ಜ್ಯೋತಿ ನಾಯ್ಕ, ರಾಘವೇಂದ್ರ ನಾಯ್ಕ, ಸುಬ್ರಾಯ ನಾಯ್ಕ ಉಪಸ್ಥಿತರಿದ್ದರು

error: