May 2, 2024

Bhavana Tv

Its Your Channel

ಬೈಕ್ ಹಾಗೂ ಹಾಲು ಸರಬರಾಜು ಮಾಡುವ ವಾಹನದ ನಡುವೆ ಅಪಘಾತ; ಬೈಕ್ ಸವಾರ ಗಂಭೀರ ಗಾಯ

ಭಟ್ಕಳ: ಬೈಕ್ ಹಾಗೂ ಹಾಲು ಸರಬರಾಜು ಮಾಡುವ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಟ್ಕಳ ತಾಲುಕಿನ ಸಬ್ಬತ್ತಿ ಬಳಿ ನಡೆದಿದೆ.

ಗಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ರಾಜೇಶ ನಾವೂಡ ಕೇರಳ ಕಾಸರಗೋಡ ನಿವಾಸಿ ಎಂದು ತಿಳಿದು ಬಂದಿದೆ. ಈತ ಸಾಗರ ಕಡೆಯಿಂದ ಭಟ್ಕಳ ಕಡೆ ಬರುತ್ತಿದ್ದ ವೇಳೆ ಭಟ್ಕಳ ಕಡೆಯಿಂದ ಮಾರುಕೇರಿ ಕಡೆಗೆ ಹಾಲು ಸರಬರಾಜು ಮಾಡಲು ಬರುತ್ತಿದ್ದ ಹಾಲು ವಾಹನದ ನಡುವೆ ಅಪಘಾತ ಸಂಭವಿಸಿದೆ. ಅಪಘಾತ ಬೈಕ್ ಸವಾರನ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು. ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಲಾಗಿದೆ.

error: