May 17, 2024

Bhavana Tv

Its Your Channel

ಭಟ್ಕಳ ತಾಲೂಕಿನ ವಿವಿಧೆಡೆ ಗಣೇಶ ಮೂರ್ತಿ ವಿಸರ್ಜನೆ

ಭಟ್ಕಳ: ತಾಲೂಕಿನ ವಿವಿಧೆಡೆಯಲ್ಲಿ ಐದು ದಿನಗಳಿಂದ ಪೂಜಿಸಲ್ಪಟ್ಟ ಗಣೇಶನನ್ನು ವಿಜೃಂಭಣೆಯೊAದಿಗೆ ಭಕ್ತಿ ಆದರಗಳ ಮೂಲಕ ರವಿವಾರ ವಿದಾಯ ಹೇಳಲಾಯಿತು.
ರಿಕ್ಷಾ ಯೂನಿಯನ್ ಪ್ರತಿಷ್ಠಾಪಿಸಲ್ಪಟ್ಟ ಗಣಪತಿ, ವಿಶ್ವಹಿಂದು ಪರಿಷತ್ ವತಿಯಿಂದ ಸ್ಥಾಪಿಸಲ್ಪಟ್ಟ ಗಣೇಶ,  ಕೆಎಸ್‌ಆರ್‌ಟಿಸಿ ನೌಕರರ ವತಿಯಿಂದ ಪೂಜಿಸಲ್ಪಟ್ಟ ಗಣಪತಿ, ಪೊಲೀಸ್ ಇಲಾಖೆಯಿಂದ  
ಪೂಜಿಸಲ್ಪಟ್ಟ ಗಣಪತಿ ಮೂರ್ತಿಗಳು. ಹಿಂದೂ ಭವನ ಗರಡಿಮನೆ ಮಣ್ಕುಳಿ ಇವರ  ಪೂಜಿಸಲ್ಪಟ್ಟ ಗಣಪತಿ ಮೂರ್ತಿಗಳು ಬೃಹತ್ ಮೆರವಣಿಗೆಯೊಂದಿಗೆ ಗಣೇಶ ಮೂರ್ತಿಯ ವಿಸರ್ಜನಾ ಪೂಜೆ ಮುಗಿಸಿ ಅದ್ದೂರಿ ಶಾಂತಿಯುತವಾಗಿ ಮೆರವಣಿಗೆ ಮೂಲಕ ಭಟ್ಕಳ ಹಳೆ ಬಸ್ ನಿಲ್ದಾಣದಿಂದ ಮಾರಿಕಾಂಬಾ ದೇವಸ್ಥಾನದ ಮಾರ್ಗವಾಗಿ ಚೌಥನಿಯ ಕುದುರೆ ಬೀರಪ್ಪ ಹೊಳೆಯಲ್ಲಿ ವಿಸರ್ಜಿಸುವುದರ ಮೂಲಕ ಸಂಪೂರ್ಣ ಶಾಂತಿಯುತ ಶ್ರದ್ದಾಭಕ್ತಿಯಿಂದ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಡಿಜೆ ಶಬ್ದಗಳಿಗೆ ಯುವಕರು ಹೆಜ್ಜೆಗಳು ಹಾಕಿ ಖುಷಿಪಟ್ಟರು. ಒಟ್ಟಿನಲ್ಲಿ ಈ ವರ್ಷದ ಗಣೇಶೋತ್ಸವ ಹಿಂದಿನ ವರ್ಷಗಳಂತೆ ಅದ್ದೂರಿಯಾಗಿ ನಡೆಯಿತು.ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಸಿಪಿಐ ದಿವಾಕರ ಹಾಗೂ ಪಿಎಸೈಗಳಾ ಸುಮಾ ಆರ್ಚಾಯ ಮತ್ತು ಹನುಮಂತಪ್ಪ ಕುಡಗುಂಟಿ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲಿಸ್ ಬಂದೋಬಸ್ತ ಏರ್ಪಡಿಸಲಾಗಿದ್ದು ಅಗ್ನಿಶಾಮಕ ಠಾಣಾಧಿಕಾರಿ ಎಸ್ ರಮೇಶ್ ನೇತೃತ್ವದಲ್ಲಿ ಅಗ್ನಿಶಾಮಕ ದಳ ಮತ್ತು ಎಸ್ ಡಿ ಆರ್ ಎಫ್ ತಂಡದಿAದ ಮುನ್ನೆಚ್ಚರಿಕೆ ಕ್ರಮವಾಗಿ ವಹಿಸಲಾಯಿತು.ಹಾಗೂ ಪುರಸಭೆ ಹಿಂದ ಚೌಥನಿ ಹೊಳೆಗೆ ಸಂಪೂರ್ಣ ಲೈಟಿಂಗ್ ವ್ಯವಸ್ಥೆ ಮಾಡಲಾಯಿತು.

error: