May 3, 2024

Bhavana Tv

Its Your Channel

ಶಿರಾಲಿ ಚಿತ್ರಾಪುರದ ಶ್ರೀ ಪರಿಜ್ಞಾನ ಆಶ್ರಮ ಸಭಾಭವನದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮ

ಭಟ್ಕಳ:ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಅಧಿಕಾರಿಗಳ ಮುಂದೆ ಹೇಳಿಕೊಂಡಾಗ ಅದಕ್ಕೆ ಅಧಿಕಾರಿಗಳು ಸ್ಥಳದಲ್ಲಿಯೇ ಪರಿಹಾರ ಸೂಚಿಸಿದಾಗ ಮಾತ್ರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶ್ವಸಿಯಾಗುತ್ತದೆ ಎಂದು ಭಟ್ಕಳ ಉಪವಿಭಾಗಾಧಿಕಾರಿ ಮಮತಾ ದೇವಿ ಹೇಳಿದರು.

ಅವರು ಶಿರಾಲಿ ಚಿತ್ರಾಪುರದ ಶ್ರೀ ಪರಿಜ್ಞಾನ ಆಶ್ರಮ ಸಭಾಭವನದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಿಂಚಣಿ, ರೇಷನ್ ಕಾರ್ಡ,ರಸ್ತೆ, ಮೂಲಸೌಕರ್ಯ ಅಭಿವೃದ್ದಿ ಸೇರಿದಂತೆ ಗ್ರಾಮದ ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ವೇದಿಕೆಯಾಗಿದೆ ಎಂದರು.
ಅಧಿಕಾರಿಗಳ ಮುಂದೆ ಆಳಲನ್ನು ತೋಡಿಕೊಂಡ ಜನರು, ತಟ್ಟಿಹಕ್ಕಲ್ ಭಾಗದಲ್ಲಿ 42 ಜನತಾ ವಸತಿ ಯೋಜನೆಯ ಮನೆಗಳಿವೆ. ಈಗ ಊರು, ಕೇರಿ ದೊಡ್ಡದಾಗಿದೆ. ನಮ್ಮ ಹೆಸರಿಗೆ ಪಹಣಿ ಪತ್ರ ಇಲ್ಲದ ಕಾರಣ ಏನೊಂದು ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ಸರಕಾರಿ ಕಚೇರಿಗಳಿಗೆ ಅಲೆದು ಅಲೆದು ಸಾಕಾಗಿದೆ. ಈಗ ಅಧಿಕಾರಿಗಳೇ ಸರಕಾರಕ್ಕೆ ವರದಿ ಸಲ್ಲಿಸಿ ಅಗತ್ಯ ಕ್ರಮ ಜರುಗಿಸಬೇಕು ಎಂದು ವಿನಂತಿಸಿಕೊAಡರು. ಜನರ ಅಹವಾಲು ಆಲಿಸಿದ ಸಹಾಯಕ ಆಯುಕ್ತೆ ಮಮತಾದೇವಿ, ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಲಾಗುವುದು ಎಂದು ತಿಳಿಸಿದರು. ಬೆದ್ರಕೋಡು, ಬಡ್ಡುಕುಳಿ, ಮೇಲಿನಮನೆ, ಚಳ್ಳಾಸರಮನೆ, ಕಡಾದಬೈಲು, ತಳನಗೋಳಿ ಮಜಿರೆಯ ಜನರು ಇಲ್ಲಿವರೆಗೆ ಅರಣ್ಯ ಭೂಮಿಯಲ್ಲಿಯೇ ಅಂತ್ಯ ಸಂಸ್ಕಾರವನ್ನು ಮಾಡಿಕೊಂಡು ಬಂದಿದ್ದಾರೆ. ಅರಣ್ಯ ಭೂಮಿಯಾಗಿರುವುದರಿಂದ ಇಲ್ಲಿಯವರೆಗೆ ಒಂದು ಕಂಪೌAಡ್ ಹಾಕುವುದಕ್ಕೂ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಗ್ರಾಮಸ್ಥರ ಪರವಾಗಿ ಆ ಭಾಗದ ಪ್ರಮುಖ ವೆಂಕಟೇಶ ನಾಯ್ಕ ವಿನಂತಿಸಿಕೊAಡರು.
ರಸ್ತೆ, ಕುಡಿಯುವ ನೀರು, ಪಿಂಚಣಿ ಸೇರಿದಂತೆ ಗ್ರಾಮಸ್ಥರು 209 ಮನವಿಗಳನ್ನು ಉಪವಿಭಾಗಾಧಿಕಾರಿಗಳಿಗೆ ನೀಡಿ ಸಮಸ್ಯೆ ಪರಿಹರಿಸುವಂತೆ ಕೋರಿಕೊಂಡರು.ಅದರಲ್ಲಿ 157 ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಮಂಜೂರು ಮಾಡಲಾಯಿತು.
ಉಪವಿಭಾಗಾಧಿಕಾರಿ ಮಮತಾ ದೇವಿ ಚಿತ್ರಾಪುರದಲ್ಲಿರುವ ಬಾಕಡ ಕೇರಿಗೆ ಭೇಟಿ ನೀಡಿ ದಲಿತರ ಸಮಸ್ಯೆಯನ್ನು ಆಲಿಸಿದರು. ತಹಶೀಲ್ದಾರ ಡಾ. ಸುಮಂತ್ ಎಲ್ಲರನ್ನೂ ಸ್ವಾಗತಿಸಿದರು. ಶಿರಾಲಿ ಗ್ರಾಪಂ ಅಧ್ಯಕ್ಷೆ ರೇವತಿ ನಾಯ್ಕ, ಉಪಾಧ್ಯಕ್ಷ ಭಾಸ್ಕರ ದೈಮನೆ ಸದಸ್ಯರಾದ ವೆಂಕಟೇಶ ನಾಯ್ಕ, ಎ ಬಿ ಡಿಕೊಸ್ತಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಡಾ. ಪ್ರಶಾಂತ, ಪಿಡಬ್ಲ್ಯೂಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಪ್ಪ, ಸಮಾಜ ಕಲ್ಯಾಣ ಇಲಾಖೆಯ ಗೀತಾ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಕೆ.ಬಿಳಗಿಕಂದಾಯ ನಿರೀಕ್ಷಕ ಶ್ರೀನಿವಾಸ ಮಾಸ್ತಿ, ಗ್ರಾಮ ಲೆಕ್ಕಾಧಿಕಾರಿಗಳಾದ ಹೇಮಾ ನಾಯ್ಕ,ಸವಿತಾ ಗೌಡ,ಗ್ರಾಮಸಹಾಯಕ ಮಂಜುನಾಥ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು

error: