May 3, 2024

Bhavana Tv

Its Your Channel

ಮಾರುಕೇರಿಯ ಎಸ್. ಪಿ. ಹೈಸ್ಕೂಲಿನಲ್ಲಿ ನಡೆದ ಉಚಿತ ಆರೋಗ್ಯ ಶಿಬಿರ

ಭಟ್ಕಳ : ಆರೋಗ್ಯದ ಕುರಿತು ಪ್ರತಿಯೊಬ್ಬರೂ ಕಾಳಜಿ ವಹಿಸುವುದು ಅಗತ್ಯವಿದೆ. ಗ್ರಾಮಾಂತರ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವುದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದರು.

ಅವರು ಮಾರುಕೇರಿಯ ಎಸ್. ಪಿ. ಹೈಸ್ಕೂಲಿನಲ್ಲಿ ರಾಮಚಂದ್ರಾಪುರ ಮಠದ ಸೇವಾಖಂಡದ ಯೋಗಕ್ಷೇಮ ವಿಭಾಗ, ಸಹಾಯ ವಿಭಾಗ ಭವತಾರಿಣಿ ವಲಯ, ಕಾರ್ಯನಿರತ ಪತ್ರಕರ್ತರ ಸಂಘ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಾರುಕೇರಿ ಸೊಸೈಟಿ, ಗ್ರಾಮ ಪಂಚಾಯತ್, ಶಿವಶಾಂತಿಕಾ ಸೌಹಾರ್ದ ಸಹಕಾರಿ ಸಂಘ,ಲ್ಯಾAಪ್ಸ ಸೊಸೈಟಿ ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿAದ ನಡೆದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಹೇಮಂತ ಶೆಟ್ಟಿ ಮಾತನಾಡಿ, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಸ್ಥಿತಿ ಕಾಪಾಡಿಕೊಳ್ಳುವುದು ಅಗತ್ಯವಿದೆ. ಆ ನಿಟ್ಟಿನಲ್ಲಿ ಕೆ ಎಸ್ ಹೆಗ್ಡೆ ಆಸ್ಪತ್ರೆಯಿಂದ ಗ್ರಾಮಾಂತರ ಭಾಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿ ಜನತೆಗೆ ತಮ್ಮ ಆರೋಗ್ಯ ಪರೀಕ್ಷಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾರುಕೇರಿ ಗ್ರಾ.ಪಂ. ಅಧ್ಯಕ್ಷ ಮಾಸ್ತಿ ಗೊಂಡ, ಎಸ್ ಪಿ ಹೈಸ್ಕೂಲ ಅಧ್ಯಕ್ಷ ಶ್ರೀಕಂಠ ಹೆಬ್ಬಾರ, ಭವತಾರಿಣಿ ಸೀಮಾ ವಲಯದ ಅಧ್ಯಕ್ಷ ವಿನಾಯಕ ಭಟ್ಟ, ಗ್ರಾ.ಪಂ. ಸದಸ್ಯ ಎಂ ಡಿ ನಾಯ್ಕ, ಲ್ಯಾಂಪ್ಸ ಸೊಸೈಟಿ ಅಧ್ಯಕ್ಷ ಮೋಹನ ಗೊಂಡ ಮಾತನಾಡಿದರು.
ರಾಘವೇಂದ್ರ ಹೆಬ್ಬಾರ ಪ್ರಾಸ್ತಾವಿಕ ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷೆ ನಾಗವೇಣಿ ಗೊಂಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಗಣೇಶ ಬಿ, ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ, ಗ್ರಾ.ಪಂ. ಮಾಜಿ ಅಧ್ಯಕ್ಷ ನಾರಾಯಣ ಹೆಬ್ಬಾರ, ಎಸ್ ಪಿ ಹೈಸ್ಕೂಲು ಮುಖ್ಯಶಿಕ್ಷಕ ಪಿ ಟಿ ಚಹ್ವಾಣ, ಕೃಷ್ಣಮೂರ್ತಿ ಹೆಗಡೆ, ಗಣಪಯ್ಯ ಗೊಂಡ ಮುಂತಾದವರಿದ್ದರು. ಸತೀಶಕುಮಾರ ನಾಯ್ಕ ಸ್ವಾಗತಿಸಿದರು. ಶಿಕ್ಷಕ ಶ್ರೀನಿವಾಸ ಉಪಾಧ್ಯಾಯ ನಿರೂಪಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮೋಹನ ನಾಯ್ಕ ವಂದಿಸಿದರು. ಶಿಬಿರದಲ್ಲಿ 400ಕ್ಕೂ ಅಧಿಕ ಜನರು ಪಾಲ್ಗೊಂಡು ಆರೋಗ್ಯದ ತಪಾಸಣೆ ಮಾಡಿಕೊಂಡರು.

error: