
ಭಟ್ಕಳ ನಗರದ ಕಾಮಾಕ್ಷಿ ಪೆಟ್ರೋ ಬಂಕ್‌ನ ಮಾಲೀಕರು, ಜನಾನುರಾಗಿಗಳಾಗಿದ್ದ ಮೋಹನ ಪುರುಶೋತ್ತಮ ಭಟ್ಟ (82) ಇವರು ಶನಿವಾರ ತಡರಾತ್ರಿ ನಿಧನರಾದರು.
ಮೃತರು ಇಬ್ಬರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೂಲತಹ ಹೊನ್ನಾವರ ಮಾವಿನಕುರ್ವಾದವರಾದ ಮೋಹನ ಭಟ್ಟರು ಹೊನ್ನಾವರದ ಮಾವಿನಕುರ್ವಾ ಶ್ರೀ ನವದುರ್ಗಾ ಸಂಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಮೃತರ ಅಂತಿಮ ದರ್ಶನವನ್ನು ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿದ ಜೆ. ನಾಯ್ಕ, ಪುಷ್ಪಲತಾ ಮಂಕಾಳ ವೈದ್ಯ, ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ನಾಯಕ, ಟ್ರಸ್ಟಿ ಮೆನೇಜರ್ ರಾಜೇಶ ನಾಯಕ ಸೇರಿದಂತೆ ಅನೇಕರು ಅಂತಿಮ ದರ್ಶನ ಪಡೆದರು.
ಮೃತ ಮೋಹನ ಭಟ್ಟ ಅವರು ಓರ್ವ ಸಮಾಜ ಮುಖಿ ವ್ಯಕ್ತಿಯಾಗಿದ್ದು ಧಾರ್ಮಿಕ ಕ್ಷೇತ್ರದಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ ಎಂದು ಸಮಾಜ ಸೇವಕ ಸುರೇಂದ್ರ ಶ್ಯಾನಭಾಗ, ಮಾಜಿ ಶಾಸಕ ಮಂಕಾಳ ವೈದ್ಯ ಸಂತಾಪ ಸೂಚಿಸಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ