May 3, 2024

Bhavana Tv

Its Your Channel

ದಲಿತ ಸಂಘಟನೆಯ ಪ್ರಮುಖ, ದಲಿತ ಪರ ಹೋರಾಟಗಾರ ನಾರಾಯಣ ಶಿರೂರು ನಿಧನ

ಭಟ್ಕಳ: ದಲಿತ ಸಂಘಟನೆಯ ಪ್ರಮುಖ, ದಲಿತ ಪರ ಹೋರಾಟಗಾರ, ಅಂಚೆ ಇಲಾಖೆಯ ನಿವೃತ್ತ ನೌಕರ ನಾರಾಯಣ ಶಿರೂರು (75) ಅವರು ಮಣಿಪಾಲದ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು.

ಮೃತರು ಓರ್ವ ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂಧಿಸದೇ ಮೃತ ಪಟ್ಟಿದ್ದಾರೆ. ರಾಜ್ಯ ಪರಿಶಿಷ್ಟ ಜಾತಿ ಪಂಗಡಗಳ ಮೀಸಲಾತಿ ರಕ್ಷಣಾ ವೇದಿಕೆ ಉಪಾಧ್ಯಕ್ಷರೂ ಆಗಿದ್ದ ಅವರು ದಲಿತರ ಹಕ್ಕುಗಳ ರಕ್ಷಣೆಗಾಗಿ ಹಲವಾರು ಹೋರಾಟಗಳನ್ನು ಮಾಡಿದ್ದರು. ದಲಿತರಿಗೆ ಅನ್ಯಾಯವದಾಗ ಮಂಚೂಣಿಯಲ್ಲಿ ನಿಂತು ಪ್ರತಿಭಟಿಸುತ್ತಿದ್ದ ಅವರು ಕಳೆದ ವರ್ಷವಷ್ಟೇ ಪರಿಶಿಷ್ಟರಿಗೆ ಅನ್ಯಾಯವಾಗುತ್ತಿದೆ ಎಂದು ಉಪವಾಸ ಸತ್ಯಾಗ್ರಹವನ್ನು ಸಹ ಕೈಗೊಂಡಿದ್ದರು. ಭಟ್ಕಳದಲ್ಲಿ ದಲಿತರ ಹಕ್ಕು ರಕ್ಷಣೆಗಾಗಿ ಸಾಕಷ್ಟು ಹೋರಾಟ ಮಾಡಿ ಗಮನ ಸೆಳೆದಿದ್ದ ಅವರ ನಿದನದಿಂದ ಓರ್ವ ಹೋರಾಟಗಾರನನ್ನು ಕಳೆದುಕೊಂಡAತಾಗಿದೆ.
ಕಳೆದ ವಾರ ಕುಟುಂಬದವರು ಇವರ 75 ನೇ ವರ್ಷದ ಹುಟ್ಟಿದ ಹಬ್ಬವನ್ನು ಅದ್ದೂರಿ ಆಚರಣೆ ಮಾಡಿದ್ದು ಆದರೆ ಇಂದು ಇವರು ಇಲ್ಲಾ ಆಗಿದ್ದು ಬೇಸರದ ಸಂಗತಿ ಯಾಗಿದೆ.
ನಾರಾಯಣ ಶಿರೂರು ಅವರ ನಿದನದ ಸುದ್ದಿ ತಿಳಿದ ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕ ಜೆ.ಡಿ. ನಾಯ್ಕ ಸೇರಿದಂತೆ ಹಲವು ಗಣ್ಯರು, ಭಟ್ಕಳ ಸೇರಿದಂತೆ ಜಿಲ್ಲೆಯ ವಿವಿಧ ಭಾಗದ ದಲಿತ ಮುಖಂಡರು ಹಾಗೂ ಇನ್ನಿತರರು ಅವರ ಮನೆಗೆ ಭೇಟಿ ನೀಡಿ ಮೃತ ಅಂತಿಮ ದರ್ಶನ ಪಡೆದರು.

error: