April 29, 2024

Bhavana Tv

Its Your Channel

ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮಿಜಿಯವರು ಭಟ್ಕಳ ವಡೇರಮಠಕ್ಕೆ ಭೇಟಿ

ಭಟ್ಕಳ:– ದೇವರ ನಾಮ ಸ್ಮರಣೆಯಿಂದಲೆ ಕಷ್ಟಗಳು ಕರಗಿ ಇಷ್ಟಾರ್ಥ ಸಿದ್ದಿಯಾಗುವದು. ಜಗತ್ತಿನ ಆಗುಹೋಗುಗಳಿಗೆ ಭಗವಂತನ ಇಚ್ಚೆಯೆ ಕಾರಣ. ಎಲ್ಲವೂ ಅವನ ಇಚ್ಚೆಯಿಂದಲೆ ನೆರವೇರುವದು ಎಂದು ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ಶ್ರೀಪಾದ ವಡೇರ ಸ್ವಾಮಿಜಿಯವರು ಹೇಳಿದರು.

ಅವರು ಭಾನುವಾರ ಭಟ್ಕಳದ ವಡೇರಮಠಕ್ಕೆ ಭೇಟಿ ನೀಡಿ ಭಕ್ತಸಂಕುಲಕ್ಕೆ ಆಶೀರ್ವಚನ ನೀಡಿದರು. ಭಟ್ಕಳದಲ್ಲಿ ಇತ್ತೀಚಿಗೆ ಅನಾವೃಷ್ಟಿಯಾಗಿ ಗಂಗೆಯೂ ಮನೆಮನೆಗೆ ನುಗ್ಗಿದ್ದಾಳೆ. ಇದರಿಂದ ಸಾಕಷ್ಟು ಪ್ರಮಾಣದ ಹಾನಿಯಾಗಿದೆ. ಆದರೆ ಭಟ್ಕಳದ ಜನರು ಸಂಕಷ್ಟಕ್ಕೆ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ದೇವರು ಇಂತಹ ಪರೀಕ್ಷೆಗಳನ್ನು ನಮಗೆ ಮುಂದಿನ ತಯಾರಿಗಾಗಿಯೆ ನೀಡುತ್ತಾನೆ. ಇದರಿಂದ ನಾವು ಜಾಗೃತರಾಗಲು ಸಾದ್ಯ. ಮುಂದಿನ ಮಳೆಗಾಲ ಬರುವ ಮೊದಲೆ ಸಂಬAಧಿಸಿದ ಇಲಾಖೆಗೆ ತೆರಳಿ ಗಟಾರ, ಚರಂಡಿ ನೀರು ಹರಿದುಹೋಗುವ ವ್ಯವಸ್ಥೆ ಮಾಡಿಕೊಳ್ಳುವಂತೆ ಜಾಗ್ರತರಾಗಲು ಹಿಂದಿನ ಅತಿವೃಷ್ಟಿ ನೆನಪಿಸುತ್ತದೆ ಎಂದರು. ಮಾನವನ ಆಸೆಗೆ ಮೀತಿಯೆ ಇಲ್ಲ ಎನ್ನುವದನ್ನು ಒಂದು ದೃಷ್ಟಾಂತದ ಮೂಲಕ ವಿವರಿಸಿ, ಎಲ್ಲವೂ ದೇವರ ಇಚ್ಚೆಗೆ ಬಿಡಬೇಕು. ಸ್ವಾಮಿಯ ಇಚ್ಚೆಯಿಂದಲೆ ಎಲ್ಲವೂ ನಡೆಯುತ್ತದೆ ಎಂದರು.
ಭಟ್ಕಳದ ಹತ್ತು ಸಮಸ್ತರು ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ಪಾದ್ಯಪೂಜೆ ನೇರವೇರಿಸಿದರು. ಭಟ್ಕಳ ಜಿಎಸ್‌ಬಿ ಸಮಾಜದ ಅಧ್ಯಕ್ಷ ಸುಬ್ರಾಯ ಕಾಮತ, ಜಿಎಸ್‌ಎಸ್ ಅಧ್ಯಕ್ಷ ಕಲ್ಪೇಶ ಪೈ, ಗಣ್ಯರಾದ ಸುರೇಶ ಬಾಳಗಿ ಕೊಲ್ಲಾಪುರ, ನರೇಂದ್ರ ನಾಯಕ, ನಾಗೇಶ ಪೈ, ನಾಗೇಶ ಕಾಮತ, ಜಗದೀಶ ಪೈ, ಕುಮಟಾದ ಯೋಗೇಶ ಪೈ ಸೇರಿ ಉಡುಪಿಯ ಸಮಾಜ ಬಾಂಧವರು ಇದ್ದರು. ಭಟ್ಕಳ ಗೋಪಾಲಕೃಷ್ಣ ದೇವರ ದರ್ಶನ ಪಡೆದ ಶ್ರೀಗಳು ಭಟ್ಕಳ ಮೂಲಬ್ರಂದಾವನಕ್ಕೆ ಬೇಟಿ ನೀಡಿ ಮೊದಲ ಗುರುಗಳ ದರ್ಶನ ಪಡೆದರು. ನಂತರ ಉಡುಪಿ ಮೊಕ್ಕಾಂಗೆ ಪಯಣ ಬೆಳಸಿದರು.

error: