April 29, 2024

Bhavana Tv

Its Your Channel

ಕೋಮು ಸಂಘರ್ಷವನ್ನು ಭಟ್ಕಳಕ್ಕೆ ತರಲು ತಂತ್ರ ನಡೆಸಲಾಗುತ್ತಿದೆ ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಗಂಭೀರ ಆರೋಪ

ಭಟ್ಕಳ: ವಿಧಾನಸಭೆ ಚುನಾವಣೆ ಕೆಲವೇ ತಿಂಗಳು ಬಾಕಿ ಇರುವುದರಿಂದ ವಿವಾದಗಳನ್ನು ಈಗಿನಿಂದಲೇ ಸೃಷ್ಟಿಸಿ ಜನರ ಭಾವನೆಗಳನ್ನು ಕೆರಳಿಸುವಲ್ಲಿ ಷಡ್ಯಂತ್ರ ರೂಪಿಸಲಾಗುತ್ತಿದೆ. ದಕ್ಷಿಣ ಕರಾವಳಿಯಲ್ಲಿ ಎದ್ದಿರುವ ಕೋಮು ಸಂಘರ್ಷವನ್ನು ಭಟ್ಕಳಕ್ಕೆ ತರಲು ತಂತ್ರ ನಡೆಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಗಂಭೀರ ಆರೋಪ ಮಾಡಿದರು.

ಪುರಸಭೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಪಟ್ಟಣದಲ್ಲಿ ಕೆಲವು ದಿನಗಳಿಂದ ದ್ವಾರಗಳ ಕುರಿತು ವಾದವಿವಾದ ನಡೆಯುತ್ತಿದೆ. ಇದರಲ್ಲಿ ಪುರಸಭೆಯ ಯಾವುದೇ ಸದಸ್ಯರ ಹಸ್ತಕ್ಷೇಪವಿಲ್ಲ. ಆಸರಕೇರಿಯ ದೇವಸ್ಥಾನದ ಮಹಾದ್ವಾರವನ್ನು ಪರವಾನಿಗೆ ಪಡೆಯದೆ ಕಾಮಗಾರಿ ಆರಂಭಿಸಿದ್ದರಿAದ ಅಧಿಕಾರಿಗಳು ಅದನ್ನು ತಡೆದಿದ್ದಾರೆ. ಮಾರ್ಚ್ 23ಕ್ಕೆ ಮನವಿ ನೀಡಿದ್ದರು. ಆದರೆ ಅದು ನಮ್ಮ ಗಮನಕ್ಕೆ ಬಂದಿಲ್ಲ. ಪರವಾನಿಗೆಗಾಗಿ ಈಗಷ್ಟೆ ದ್ವಾರದ ಕಡತ ನನ್ನ ಬಳಿ ಬಂದಿದ್ದು ಅದನ್ನು ಪರೀಶೀಲಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.
ವಿ.ಟಿ. ರೋಡ್‌ನಲ್ಲಿ ಮುಸ್ಲಿಂ ಸಮುದಾಯದ ಕೆಲವರು ಟಿಪ್ಪು ಗೇಟ್ ನಿರ್ಮಾಣಕ್ಕೆ ಮುಂದಾಗಿದ್ದರು. ಕಾನೂನು ಬಾಹಿರವಾಗಿ ನಿರ್ಮಾಣ ಮಾಡಲು ಯತ್ನಿಸಿದ ಅವರ ಮೇಲೂ ಪುರಸಭೆ ಮುಖ್ಯಾಧಿಕಾರಿ ದೂರು ದಾಖಲಿಸಿ ಅವರಿಗೆ ನೋಟಿಸ್ ನೀಡಿದ್ದಾರೆ. ಆ ಕಾಮಗಾರಿಯನ್ನೂ ಸ್ಥಗಿತಗೊಳಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪುರಸಭೆ ಸಂಪೂರ್ಣ ಎಂದರು. ಸಹಕಾರ ನೀಡುತ್ತದೆ
ಅಭಿವೃದ್ಧಿಗೆ ಅಡ್ಡಗಾಲು:
ಶಾಸಕರು ಪುರಸಭೆ ಆಡಳಿತದಲ್ಲಿ ಒಂದು ಸಂಘಟನೆಯ ಹಸ್ತಕ್ಷೇಪ ಇದೆ ಎಂದು ಆರೋಪ ಮಾಡಿದ್ದಾರೆ. ಆ ಸಂಘಟನೆಗೂ ಪುರಸಭೆಗೂ ಯಾವುದೇ ರೀತಿಯ ಸಂಬAಧವಿಲ್ಲ. ಅವರು ನಮಗೆ ಬೆಂಬಲವಾಗಿ ಮಾತ್ರ ಇದ್ದಾರೆ ಎಂದರು. ಶಾಸಕರು ಪದೇ ಪದೇ ಪುರಸಭೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಪುರಸಭೆಗೆ ಬಂದ ಅನುದಾನವನ್ನು ಅವರೇ ಹಂಚಿಕೆ ಮಾಡುತ್ತಿದ್ದು ಸದಸ್ಯರಿಗೆ ತಾರತಮ್ಯ ಮಾಡಿದ್ದಾರೆ. ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಅವಕಾಶ ನೀಡದೆ ಅಧಿಕಾರಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಪುರಸಭೆ ಅಂಗಡಿ ಮಳಿಗೆ ಹರಾಜು ಹೀಗೆ ವಿವಿಧ ಅಭಿವೃದ್ಧಿ ಕಾರ್ಯಕ್ಕೂ ಅಡ್ಡಗಾಲು ಹಾಕುತ್ತಿದ್ದರೆ, ನಮಗೆ ಇಲ್ಲಿ ಕೆಲಸ ಮಾಡಲು ಕಷ್ಟವಾಗುತ್ತಿದೆ. ನಮಗೆ ಅಧಿಕಾರ ನಡೆಸಲು ಅವಕಾಶ ಮಾಡಿ ಕೊಡಿ ಹಸ್ತಕ್ಷೇಪ ಮಾಡಬೇಡಿ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೈಸರ್ ಮೊಹತೆಶ್ಯಾಂ, ಸ್ಥಾಯಿಸಮಿತಿ ಅಧ್ಯಕ್ಷ ಇಂಶಾದ್ ಇದ್ದರು.

error: