May 20, 2024

Bhavana Tv

Its Your Channel

2021-22ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ 90%ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಭಟ್ಕಳ: ಜಗತ್ತಿನಲ್ಲಿರುವ ಎಲ್ಲ ಸಂಪತ್ತುಗಳಿಗಿAತ ವಿದ್ಯಾ ಸಂಪತ್ತು ಶ್ರೇಷ್ಠವಾಗಿದೆ. ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಯಾವತ್ತಿಗೂ ವ್ಯರ್ಥ ಎಂದು ಶ್ರೀ ಗೋಕರ್ಣ ಪರ್ತಗಾಳಿ ಶ್ರೀ ಜೀರ್ವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ನುಡಿದರು.
ಅವರು ಶ್ರೀ ದುರ್ಗಾದೇವಿ ಚಾರಿಟೇಬಲ್ ಟ್ರಸ್ಟ್ (ರಿ) ಅಳೇಕೋಡಿ ಭಟ್ಕಳ ಇದರ ಆಶ್ರಯದಲ್ಲಿ ಅಳ್ಳೇ ಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಭಟ್ಕಳ ತಾಲೂಕಿನ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ 90%ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ 10ನೇ ವರ್ಷದ ಪ್ರತಿಭಾ ಪುರಸ್ಕಾರ, ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ನೈತಿಕ ಮೌಲ್ಯವಿಲ್ಲದ ಶಿಕ್ಷಣ, ಶಿಕ್ಷಣವೇ ಅಲ್ಲ. ವಿದ್ಯೆಯಿ0ದ ಗೌರವ ಪ್ರಾಪ್ತವಾಗುತ್ತದೆ. ಯಾವುದೇ ವಸ್ತುವನ್ನು ಅಪಹರಿಸಬಹುದು.
ಆದರೆ, ನಾವು ಕಲಿತ ವಿದ್ಯೆಯನ್ನು ಮಾತ್ರ ಯಾರಿಂದಲೂ ಅಪಹರಣ ಮಾಡಲು ಸಾಧ್ಯವಿಲ್ಲ ಹೀಗಾಗಿ ವಿದ್ಯೆ ಅಪಹರಿಸಲಾಗದ ದೊಡ್ಡ ಅಸ್ತವಾಗಿದೆ ಎಂದು ಹೇಳಿದರು.
ವಿದ್ಯೆ ಪ್ರತಿಯೊಬ್ಬರಿಗೂ ಅಗತ್ಯವಿದೆ. ನಮ್ಮಲ್ಲಿರುವ ವಿದ್ಯೆಯನ್ನು ನಾಲ್ಕು ಜನರಿಗೆ ಹಂಚಿದರೆ ಜ್ಞಾನ ಹೆಚ್ಚುತ್ತದೆ. ಪ್ರತಿ ವಿದ್ಯೆಗೂತನ್ನದೇ ಆದ ಗೌರವವಿದೆ. ನಮ್ಮಲ್ಲಿ ಹೆಚ್ಚಿನ ವಿದ್ಯೆ ಇದೆ ಎಂದು ಬೇರೆಯವರು ಕಲಿತ ವಿದ್ಯೆಗೆ ಎಂದಿಗೂ ತೋರಿಸಬಾರದು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ ಬೆಳೆಸಿಕೊ0ಡು ಉತ್ತಮ ಪ್ರಜೆಯಾಗಬೇಕು ಎಂದರು.
ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ, ಸಾಮಾನ್ಯ ಜನರಿಗೂ ಶಿಕ್ಷಣ ದೊರೆಯಬೇಕು ಎನ್ನುವುದು ನಮ್ಮ ಇಚ್ಛೆಯಾಗಿದೆ. ತಾಲೂಕಿನ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಪಡೆಯುವಲ್ಲಿ ಆರ್ಥಿಕ ಸಮಸ್ಯೆ ಎದುರಾದರೆ ಅವರ ನೆರವಿಗೆ ನಾವಿದ್ದೇವೆ ಎಂದರು. ಭಟ್ಕಳ ದಿ ನ್ಯೂ ಇಂಗ್ಲೀಷ್ ಪಿ.ಯು ಕಾಲೇಜಿನ ಪ್ರಾಚಾರ್ಯ ವೀರೇಂದ್ರ ಶ್ಯಾನಭಾಗ ಮಾತನಾಡಿ, ಶಿಕ್ಷಣ ಪಡೆದ ವಿದ್ಯಾರ್ಥಿಗಳು ನಮ್ಮ ತಂದೆ ತಾಯಿ ಚೆನ್ನಾಗಿ ನೋಡಿಕೊಳ್ಳುವುದರ ಬಗ್ಗೆ ಲಕ್ಷ್ಯವಹಿಸಬೇಕು.
ಅಭಿವೃದ್ಧಿಯ ನೆಲದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕ್ಷೀಣಿಸಿದರೆ ಮಾತ್ರ ಅದಕ್ಕೊಂದು ಅರ್ಥ ಇದೆ.ಕೇವಲ ಹಣದ ಆಸ ಮನುಷ್ಯನನ್ನು ಕೆಳಗೆ ತಳ್ಳುತ್ತದೆ. ಭವಿಷ್ಯದಲ್ಲಿ ಭ್ರಷ್ಟಾಚಾರವನ್ನು ದೂರ ಇಡುವುದರತ್ತ ವಿದ್ಯಾರ್ಥಿಗಳು ಗಮನ ಹರಿಸಲಿ ಎಂದರು.
ಶ್ರೀ ಮಾರಿಜಾತಾ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಮಾತನಾಡಿದರು. ನಾರಾಯಣ ದೈಮನೆ ಎಲ್ಲರನ್ನೂ ಸ್ವಾಗತಿಸಿದರು,ಅರವಿಂದ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನದ ಅರ್ಚಕ ಗಜಾನನ ಪುರಾಣಿಕ,ದೇವಸ್ಥಾನದ ಆಡಳಿತ ಸಮಿತಿಯ ಪ್ರಮುಖರಾದ ತಿಮ್ಮಪ್ಪ ಹೊನ್ನಿಮನೆ,ನಾರಾಯಣ ಧರ್ಮ ಮೊಗೇರ,ಹನ್ನಂತ ನಾಯ್ಕ,ಜಟಗಾ ಮೊಗೇರ,ಯೊಗೇಶ,ಕಾಮತ್,ಬಾಬು ಮೊಗೇರ,ಗೋಪಾಲ ಮೊಗೇರ,ಭಾಸ್ಕರ ದೈಮನೆ,ಬಿಳಿಯಾ ನಾಯ್ಕ,ಮಂಜುನಾಥ ಕೋಡಿಹಿತ್ತು ಮೊದಲಾದವರು ಉಪಸ್ಥಿತರಿದ್ದರು.ಶಿಕ್ಷಕರಾದ ನಾಗರಾಜ ಮೊಗೇರ ಹಾಗೂ ರಾಜೀವ ಮೊಗೇರ ಕಾರ್ಯಕ್ರಮ ನಿರೂಪಿಸಿದರು

error: