May 3, 2024

Bhavana Tv

Its Your Channel

ಅಗತ್ಯ ವಸ್ತುಗಳ ಬೆಲೆ ಏರಿಕೆ, ಯುವಜನರ ನಿರೂದ್ಯೋಗ ಸಮಸ್ಯೆಗಳ ಕುರಿತು ಜನಜಾಗೃತಿ ಜಾಥಾ

ಭಟ್ಕಳ :- ದೇಶದ ಜನತೆ ಎದುರಿಸುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ದೇಶದ ಯುವಜನತೆಯ ನಿರುದ್ಯೋಗದಂತಹ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ದೇಶಾದ್ಯಂತ ಹಕ್ಕೊತ್ತಾಯದ ಅಭಿಯಾನವನ್ನು ಹಮ್ಮಿಕೊಂಡಿದ್ದು ಕಲಬುರ್ಗಿ ಯಿಂದ ಆರಂಭಗೊAಡ ಜನಜಾಗೃತಿ ಜಾಥಾ ಗುರುವಾರ ಭಟ್ಕಳ ತಲುಪಿತು.
ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಬಿಕಟ್ಟು ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದ್ದು, ತಕ್ಷಣ ಪರಿಹಾರ ಕ್ರಮಗಳು ತೆಗೆದುಕೊಳ್ಳಬೇಕು.ನಿರುದ್ಯೋಗಿಯುವಕರಿಗೆ ನಿರುದ್ಯೋಗ ಭತ್ಯೆ (ಸ್ಟೈಪೆಂಡ್) ನೀಡಬೇಕು.ಸಂವಿಧಾನದ ಪರಿಚ್ಛೇದ 21 ರಅಡಿಯಲ್ಲಿಜೀವನೋಪಾಯದ ಹಕ್ಕನ್ನು ಮೂಲಭೂತ ಹಕ್ಕನಾಗಿ ಮಾಡಬೇಕು.ಅಗತ್ಯ ವಸ್ತುಗಳ ಮೇಲಿನ ಜಿ ಎಸ್ ಟಿಯನ್ನು ಹಿಂಪಡೆಯಬೇಕು. ಬಡವರಿಗೆ ಅವರ ಖರೀದಿ ಸಾಮರ್ಥ್ಯವನ್ನು ಸಕ್ರಿಯಗೊಳಿಸಲು ಹಣ ನೀಡಬೇಕು.ಎಲ್ಲಾ ಬಿಪಿಎಲ್‌ಕಾರ್ಡ್ ಕುಟುಂಬಗಳಿಗೆ ಉಚಿತ ಸಿಲಿಂಡರ್ ಮತ್ತು ಸಬ್ಸಿಡಿ ರಿಫಿಲ್ ಸಿಲಿಂಡರ್ ಗಳು ನೀಡಬೇಕು ಎಂಬ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊAಡುರಾಜ್ಯದ ಕಲಬುರ್ಗಿಯಿಂದ ಮಂಗಳೂರು ತನಕಜಾಥಾ ನಡೆಸಲಾಗುತ್ತಿದೆ.
ಜಾಥಾವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ನ್ಯಾಯಾವಾದಿ ತಾಹೀರ್ ಹುಸೇನ್, ಇಂದು ನಮ್ಮ ದೇಶದಲ್ಲಿ ಹಲವಾರು ಸಮಸ್ಯೆಗಳು ತಲೆದುರಿವೆ, ಅದರಲ್ಲಿ ಬಹುಮುಖ್ಯವಾಗಿ ಬೆಲೆ ಏರಿಕೆ ಮತ್ತು ನಿರುದ್ಯೋಗವಾಗಿದೆ, ಇದರಿಂದದೇಶದ ಬಡ ಮತ್ತು ಮಧ್ಯಮ ವರ್ಗದಜನರ ಬದುಕುಚಿಂತಾಜನಕವಾಗಿದೆ, ಬಡಜನರು ಬಳಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ, ಆದಾಯ ಪಾತಾಳಕ್ಕೆ ಕುಸಿದಿದೆಎಂದರು.
ಜನಸಾಮಾನ್ಯರ ಈ ಸಮಸ್ಯೆಗಳ ಬಗ್ಗೆ ದ್ವನಿ ಎತ್ತಲು, ವೆಲ್ಫೇರ್ ಪಾರ್ಟಿಆಫ್‌ಇಂಡಿಯಾಅಕ್ಟೋಬರ್ 15 ರಿಂದ 31, 2022 ರತನಕಒಂದುರಾಷ್ಟೀಯಅಭಿಯಾನ ಹಮ್ಮಿಕೊಂಡಿದೆ. “ದೇಶದೆಲ್ಲಡೆ ಹಾಹಾಕಾರ – ನಿರುದ್ಯೋಗ ಮತ್ತು ಬೆಲೆ ಏರಿಕೆಗೆಎಂದು ಪರಿಹಾರ” ಎಂಬ ಘೋಷವಾಕ್ಯದೊಂದಿಗೆ ನಡೆಯುವ ಈ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸಿ ಸರಕಾರಕ್ಕೆಜನರುಎದುರಿಸುತ್ತಿರುವ ಸಂಕಷ್ಟದ ಸ್ಥಿತಿಯನ್ನು ಮನದಟ್ಟು ಮಾಡುವಒಂದು ಪ್ರಯತ್ನವಾಗಿದೆ. ಈ ಅಭಿಯಾನದ ಅಂಗವಾಗಿ “ಜನಜಾಗೃತಿಜಾಥಾ” ವು ಕಲಬುರಗಿ ಯಿಂದ ಮಂಗಳೂರು ವರೆಗೆ ಸಂಚರಿಸುತ್ತಿದ್ದು ಬೈಕ್‌ರ್ಯಾಲಿ, ಸಾರ್ವಜನಿಕ ಸಭೆ, ಪತ್ರಿಕಾ ಘೋಷ್ಠಿ, ಬೀದಿ ನಾಟಕ ಮುಂತಾದ ಕಾರ್ಯಕ್ರಮಗಳು ಈ ಸಂಧರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದುಅವರು ತಿಳಿಸಿದರು.
ಈ ಸಂದರ್ಭದಲ್ಲಿರಾಜ್ಯಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್,ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ, ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಝೀಝ್‌ಜಾಗರ‍್ದಾರ್, ಉ.ಕ. ಜಿಲ್ಲಾಧ್ಯಕ್ಷ ಫಾರೂಖ್ ಮಾಸ್ಟರ್, ಖಮರುದ್ದೀನ್ ಮಷಾಯಿಖ್, ಮುಖಂಡರಾದಅಬ್ದುಲ್‌ಜಬ್ಬಾರ್ ಅಸದಿ, ಅಬ್ದುಲ್ ಮಾಜೀದ್ ಕೋಲಾ ಮುಂತಾದವರು ಇದ್ದರು.

error: