
ಭಟ್ಕಳ: ಕಳೆದ ಹಲವಾರು ವರ್ಷಗಳಿಂದ ಒಳ ಚರಂಡಿ ಮಲಿನ ನೀರು ಶುದ್ಧ ಬಾವಿಗಳಿಗೆ ಹರಿದು ಬಾವಿಯ ನೀರು ಸಂಪೂರ್ಣ ಹಾಳಾಗಿರುವ ಘಟನೆ ತಾಲೂಕಿನ ಪುರಸಭೆ ವ್ಯಾಪ್ತಿಯ ಮಣ್ಕುಳಿಯ ರಘುನಾಥ ರಸ್ತೆಯಲ್ಲಿ ನಡೆದಿದೆ.
ಮಣ್ಕುಳಿಯ ನಾಗವೇಣಿ ದೇವೇಂದ್ರ ನಾಯ್ಕ ಎನ್ನುವವರ ಮನೆ ಬಾವಿಗೆ ಕಳೆದ ಹಲವಾರು ವರ್ಷಗಳಿಂದ ಒಳಚರಂಡಿಯ ಮಲಿನ ನೀರು ಸೇರಿ ಕಲುಷಿತಗೊಂಡಿದೆ. ಈ ಬಾವಿಯ ನೀರಿನಿಂದ ದುರ್ವಾಸನೆ ಹರಡುತ್ತಿದ್ದೆ. ಸದ್ಯ ಬಾವಿ ನೀರು ಕಲುಷಿತಗೊಂಡಾಗಿನಿAದ ಪುರಸಭೆ ನೀರಿಗೆ ಅವಲಂಬಿತರಾಗಿದ್ದಾರೆ ಈ ಕುಟುಂಬ.
ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ವಾಸವಾಗಿದ್ದು ಇದರಿಂದ ನಮಗೆ ಸಮಸ್ಯೆಯಾಗುತ್ತಿದ್ದೆ ಇದರಿಂದ ಆದಷ್ಟು ಬೇಗ ಮುಕ್ತಿಕೊಡಬೇಕು ಎನ್ನುತ್ತಾರೆ ಈ ಮನೆಯ ಮಾಲೀಕಿ ನಾಗವೇಣಿ ದೇವೇಂದ್ರ ನಾಯ್ಕ
ಈ ಬಗ್ಗೆ ಮಾತನಾಡಿದ ರೇಖಾ ಕೇಶವ ನಾಯ್ಕ ನಮ್ಮ ಮನೆಯ ಬಾವಿ ನೀರು ಕಲುಷಿತಗೊಂಡು ಸುಮಾರು ಐದಾರು ವರ್ಷಗಳು ಕಳೆದಿದೆ. ಈ ಬಗ್ಗೆ ಪುರಸಭೆಗೆ ಸಾಕಷ್ಟು ಬಾರಿ ದೂರು ಕೂಡ ನೀಡಿದ್ದೇವೆ. ಬಳಿಕ ಒಂದು ಬಾರಿ ಮನೆಗೆ ಬಂದು ಬಾವಿಯ ನೀರನ್ನು ಪರೀಕ್ಷೆಗೆಂದು ತೆಗರದುಕೊಂಡು ಹೋಗಿದವರು ಮತ್ತೆ ಈ ಕಡೆ ಬಂದಿಲ್ಲ. ಪುರಸಭೆ ನೀರು ದಿನ ನಿತ್ಯ ನಮಗೆ ಬರುತ್ತಿದೆ ಆದರೆ ದಿನನಿತ್ಯ ಈ ನೀರನ್ನು ನಂಬಿಕೊAಡಿರಲು ಸಾಧ್ಯವಾಗುವುದಿಲ್ಲ. ಈ ಬಾವಿಯಿಂದ ಬರುವ ದುರ್ವಾಸನೆನಿಂದ ಮನೆಯಲ್ಲಿರುವ ಸಣ್ಣ ಸಣ್ಣ ಮಕ್ಕಳಿಗೆ ಹಾಗೂ ನಮಗೆ ಪದೇ ಪದೇ ನೆಗಡಿ ಹಾಗೂ ಜ್ವರ ಬರುತ್ತಿದೆ.ಆದಷ್ಟು ಬೇಗ ಪುರಸಭೆ ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಿಕೊಂಡುವAತೆ ವಿನಂತಿಸಿಕೊAಡಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ