May 14, 2024

Bhavana Tv

Its Your Channel

ಶ್ರೀ ಭುವನೇಶ್ವರಿ ಕನ್ನಡ ಸಂಘ ಆಸರಕೇರಿ ಇದರ 25ನೇ ವರ್ಷದ ಕನ್ನಡ ರಾಜ್ಯೋತ್ಸವ

ಭಟ್ಕಳ:ಶ್ರೀ ಭುವನೇಶ್ವರಿ ಕನ್ನಡ ಸಂಘ ಆಸರಕೇರಿ ಇದರ 25ನೇ ವರ್ಷದ ಕನ್ನಡ ರಾಜ್ಯೋತ್ಸವದ ರಜತ ಮಹೋತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮದ ಬಗ್ಗೆ ಆಸರಕೇರಿ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಈ ಬಗ್ಗೆ ಮಾತನಾಡಿದ ಸಂಘದ ಕಾರ್ಯದರ್ಶಿ ಪಾಂಡು ನಾಯ್ಕ 24 ವರ್ಷದಿಂದ ನಮ್ಮ ಸಂಘ ಅನೇಕ ಕನ್ನಡ ಪರ ಹೋರಾಟ ಮಾಡುತ್ತಾ ಬಂದಿದ್ದೇವೆ. ಈ ಬಾರಿ 25 ವರ್ಷದ ರಜತ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿAದ ಮಾಡಲು ತೀರ್ಮಾನಿಸಿದ್ದೇವೆ ಎಂದ ಅವರು ಕಾರ್ಯಕ್ರಮವನ್ನು ಶಾಸಕ ಸುನೀಲ ನಾಯ್ಕ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಶಾಸಕ ಸುನೀಲ ನಾಯ್ಕರವರು ನೆರವೇರಿಸಲಿದ್ದು.ಬಳಿಕ ಭುವನೇಶ್ವರಿ ದೇವಿಯ ಕನ್ನಡ ರಥದ ಮೆರವಣಿಗೆ ನಡೆಯಲಿದ್ದು ಈ ಮೆರವಣಿಗೆ ನಿಶ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಿಂದ ಹೊರಟು ಸೋನಾರಕೇರಿಯಿಂದ ಬಂದರ ರಸ್ತೆ ಮೂಲಕ ಶಂಶುದ್ದಿನ್ ಸರ್ಕಲ್ ಮಾರ್ಗವಾಗಿ ಹಳೆ ಬಸ್ ನಿಲ್ದಾಣದಿಂದ ಚನ್ನಪಟ್ಟಣ ಹನುಮಂತ ದೇವಸ್ಥಾನದ ರಥಬೀದಿ ಮಾರ್ಗವಾಗಿ ಹೂವಿ ಪೇಟೆಯಿಂದ ಪುನಃ ಮಾರಿಗುಡಿ ದೇವಸ್ಥಾನ ರಸ್ತೆಯಿಂದ ಅಪೋಲೊ ಮೆಡಿಕಲ್ ಕ್ರಾಸ್ ತಿರುಗಿ ಆಸರಕೇರಿಯಿಂದ ಮರಳಿ ತಿರುಮಲ ವೆಂಕಟರಮ ದೇವಸ್ಥಾನಕ್ಕೆ ಬರಲಿದೆ ಎಂದರು.

ಈ ಮೆರವಣಿಗೆಯಲ್ಲಿ ಅನೇಕ ಸಂಘ ಸಂಸ್ಥೆಗಳು, ಶಾಲಾ ವಿದ್ಯಾರ್ಥಿಗಳು , ಚಂಡೆ , ಧಕ್ಕೆ ಕುಣಿತ ಹಾಗೂ ವಿವಿಧ ವೇಷ ಭೂಷಣ, ಅನೇಕ ಕಲಾಕೃತಿಗಳು ಕೂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳಲ್ಲಿದೆ ಎಂದರು.

ಬಳಿಕ ನವಂಬರ್ 1 ರಿಂದ 26 ತನಕ ಶಾಲಾ ಕಾಲೇಜಿನಲ್ಲಿ ಕನ್ನಡ ಭಾಷೆಗೆ ಸಂಬAಧಪಟ್ಟ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು .ನಂತರ ನವಂಬರ್ 27 ರಂದು ಆಸರಕೇರಿ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ನಡೆಸಲಿದ್ದೇವೆ. ಈ ಕಾರ್ಯಕ್ರಮದ ಉದ್ಘಾಟಕರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ ಕುಮಾರ ಹಾಗೂ ಕಾರ್ಯಕ್ರಮ ದಿಕ್ಸೂಚಿ ಭಾಷಣಕಾರರಾಗಿ ಚಕ್ರವರ್ತಿ ಸುಲಿಬೇಲಿ, ಶಾಸಕ ಸುನೀಲ ನಾಯ್ಕ ಮುಂತಾದವರು ಉಪಸ್ಥಿತರಿಲಿದ್ದಾರೆ ಎಂದರು

ಈ ಸಂದರ್ಭದಲ್ಲಿ ಭುವನೇಶ್ವರಿ ಕನ್ನಡ ಸಂಘ ಆಸರಕೇರಿಯ ಅಧ್ಯಕ್ಷರಾದ ರಮೇಶ ನಾಯ್ಕ, ಶ್ರೀಕಾಂತ ನಾಯ್ಕ, ನಾಮಧಾರಿ ಸಮಾಜದ ಅಧ್ಯಕ್ಷ ರಾದ ಕೃಷ್ಣ ನಾಯ್ಕ , ಶ್ರೀಧರ ನಾಯ್ಕ, ವೆಂಕಟೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

error: