May 14, 2024

Bhavana Tv

Its Your Channel

ಭಟ್ಕಳ ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಕೋಟಿ ಕಂಠ ಗಾಯನ

ಭಟ್ಕಳ: ಕನ್ನಡ ರಾಜ್ಯೋತ್ಸವ ನಿಮಿತ್ತ ಕನ್ನಡ ನಾಡ, ನುಡಿ ನೆಲ ಜಲ ಭಾಷೆ ಸಂಸ್ಕೃತಿ ಹಿರಿಮೆ ಕುರಿತಾದ ಹಾಗೂ ಕನ್ನಡದ ಶ್ರೇಷ್ಠತೆ ಸಾರುವ ಕೋಟಿ ಕಂಠ ಗಾಯನ ಕಾರ್ಯಕ್ರಮ ತಾಲೂಕಿ ಜಟ್ಟಪ್ಪ ನಾಯ್ಕ ಬಸದಿಯಲ್ಲಿ ನಡೆಯಿತು

ತಾಲೂಕಾ ಆಡಳಿತ, ತಾಲೂಕಾ ಪಂಚಾಯತ್, ಪುರಸಭೆ ಭಟ್ಕಳ ಹಾಗೂ ಪಟ್ಟಣ ಪಂಚಾಯತ ಜಾಲಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಸುನೀಲ ನಾಯ್ಕ ಮಾತನಾಡಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನಮ್ಮ ಸಂಸ್ಕೃತಿ, ನೆಲ, ಹಾಗೂ ನಮ್ಮ ವೈವಿದ್ಯತೆ ಹಾಗೂ ಎಲ್ಲರ ಬಗ್ಗೆ ಗಮನ ಮತ್ತು ಅರಿವು ಮೂಡಿಸುವಂತಹ ಅದ್ಭುತ ಕಾರ್ಯಕ್ರಮ.ಈ ನಾಡನ್ನು ಪರಿಚಯ ಮಾಡಬೇಕು ಹೊಸ ಅಧ್ಯಾಯ ಬರೆಯಬೇಕು ಹಾಗು ಇಲ್ಲಿರುವ ಸಂಸ್ಕೃತಿ ಯನ್ನು ಯುವ ಪೀಳಿಗೆ ತಿಳಿಸುದರ ಜೊತೆಗೆ ನಮ್ಮ ಕರ್ನಾಟಕದ ಬಗ್ಗೆ ನಮ್ಮಲ್ಲಿರುವ ಗೌರವವನ್ನು ಹೆಚ್ಚಿಸಬೇಕೆಂಬ ಉದ್ದೇಶದಿಂದ ಸರ್ಕಾರ ಹಾಗೂ ಅನೇಕ ಸಂಘ ಸಂಸ್ಥೆಗಳು ಇಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದ ಅವರು ಕರ್ನಾಟಕದ ಪ್ರಸಿದ್ಧ 6 ಗೀತೆಗಳನ್ನು ಒಂದೇ ವೇಳೆಯಲ್ಲಿ ಜಿಲ್ಲೆಯ 5 ಲಕ್ಷ ಜನ ಹಾಡಿದ್ದಾರೆ. ಈಗಿನ ವಿದ್ಯಾರ್ಥಿಗಳಿಗೆ ನಮ್ಮ ನಮ್ಮ ನಾಡು ನುಡಿ ಭಾಷೆ ಬಗ್ಗೆ ಗೌರವ ಬರುವ ದ್ರಷ್ಟಿಯಿಂದ ಸರ್ಕಾರ ಇಂತಹ ನೂತನ ಕಾರ್ಯಮಗಳನ್ನು ಹಮ್ಮಿಕೊಂಡಿದೆ ಎಂದರು

ಈ ಕಾರ್ಯಕ್ರಮದಲ್ಲಿ ದಿ. ನ್ಯೂ ಇಂಗ್ಲಿಷ್ ಸ್ಕೂಲ್ ಹಾಗೂ ವಿದ್ಯಾಭಾರತಿ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಮಮತಾ ದೇವಿ ಜಿ ಎಸ್ , ತಹಶೀಲ್ದಾರ್ ಸುಮಂತ ಬಿ, ಪುರಸಭೆ ಮುಖ್ಯಾಧಿಕಾರಿ ಸುರೇಶ,ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಭಟ್ಕಳ ತಾಲೂಕಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಹಾಗೂ ಮುಂತಾದವರು ಉಪಸ್ಥಿತರಿದ್ದರು

error: